
ಹಳಿಯಾಳ: ಹಳಿಯಾಳ ಗ್ರಾಮದೇವಿ ಉಡಚಮ್ಮಾ(ಲಕ್ಷ್ಮೀ) ದೇವಿಯ 2ನೇ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವವು ಮಂಗಳವಾರ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಶ್ರದ್ದಾಭಕ್ತಿ ಹಾಗೂ ವಿಜೃಂಭಣೆಯಿಂದ ನೆರವೆರಿತು.
ಪಟ್ಟಣದ ಶೆಟ್ಟಿಗಲ್ಲಿಯಲ್ಲಿರುವ ಗ್ರಾಮದೇವಿ ದೇವಸ್ಥಾನದಲ್ಲಿ ಯಲ್ಲಾಪೂರ-ಹಳಿಯಾಳದ ಅರ್ಚಕರಾದ ರಾಮಚಂದ್ರ ಹಾಗೂ ನಾಗರಾಜ ಭಟ್ಟರಿಂದ ಮಂಗಳವಾರ ಬೆಳಿಗ್ಗೆ 8ರಿಂದ ಗಣೇಶ ಪೂಜೆ, ಪುಣ್ಯಾಹವಾಚನ, ಕ್ಷೇತ್ರಪಾಲ ಪ್ರಾರ್ಥನೆ, ಕಳಸ ಸ್ಥಾಪನೆ, ನವಗ್ರಹ ಹೋಮ, ದುರ್ಗಾಹೋಮ, ಕುಷ್ಕಾಂಡ ಬಲಿದಾನ, ದೇವಿಯರಿಗೆ ಮಂಗಳಾರತಿ ಪೂಜಾ ವಿಧಿ ವಿಧಾನಗಳು ನಡೆದವು. ದೇಮವ್ವಾ ದೇವಸ್ಥಾನದಲ್ಲೂ ವಿವಿಧ ಪೂಜಾ ಪುನಸ್ಕಾರಗಳನ್ನು ನೆರವೆರಿಸಲಾಯಿತು.
ಮಧ್ಯಾಹ್ನ 12.30ರಿಂದ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆದು 2.30ರಿಂದ ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಸಾಯಂಕಾಲದವರೆಗೆ ನಡೆಯಿತು. ಗ್ರಾಮದೇವಿ ಉಡಚಮ್ಮಾ ಹಾಗೂ ದೇಮವ್ವಾ ದೇವಿ ಟ್ರಸ್ಟ್ ಕಮೀಟಿಯವರು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಮಾಜಿ ಶಾಸಕ ಸುನೀಲ್ ಹೆಗಡೆ, ಟ್ರಸ್ಟ್ ಕಮೀಟಿ ಅಧ್ಯಕ್ಷ ಮಂಗೇಶ ದೇಶಪಾಂಡೆ, ಪ್ರಮುಖರಾದ ಸುರೇಶ ದೇಸಾಯಿ, ನಂದಕಿಶೋರ ಬೊಂಗಾಳೆ, ಚೂಡಪ್ಪಾ ಬೋಬಾಟಿ, ಉದಯ ಹೂಲಿ, ವಿಷ್ಣು ಅಂತ್ರೊಳಕರ, ಪುನ್ನಪ್ಪಾ ಜಕ್ಕಪ್ಪನವರ, ಶಿವಾಜಿ ನರಸಾನಿ, ಮೊಹನ ಮೆಲಗಿ,ರವಿ ಹರಗಿ, ಉಮೇಶ ದೇಶಪಾಂಡೆ, ಮೊಹನ ಮಾವಳಂಗಿ, ವಿಜಯ ಬೊಬಾಟಿ, ಅನಿಲ ಮುತ್ನಾಳ್, ಶಿವಾಜಿ, ರಾಜು, ಗಣಪತಿ ಇತರ ಪ್ರಮುಖರು ವರ್ದಂತಿ ಮಹೋತ್ಸವದ ಉತ್ಸುವಾರಿ ನಿರ್ವಹಿಸಿದರು.

Leave a Comment