ಹಳಿಯಾಳ:- ಡಿ.2 ಭಾನುವಾರದಂದು ನಡೆಯಲಿರುವ ರಾಜ್ಯ ವಕ್ಫ್ ಬೊರ್ಡ ಅಧಿನದಲ್ಲಿರುವ ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಅಂಜುಮನ್ ಸಂಸ್ಥೆಯ ಇಕ್ಬಾಲ್ ಎಜುಕೇಶನ್ ಸೋಸೈಟಿಯ ಆಡಳಿತ ಮಂಡಳಿ ಚುನಾವಣೆಗೆ 46 ಜನ ಅಭ್ಯರ್ಥಿಗಳು ಕಣದಲ್ಲಿದ್ದು 1233 ಮತದಾರರು ಮತದಾನ ಮಾಡಲಿದ್ದಾರೆಂದು ಚುನಾವಣಾಧಿಕಾರಿಯಾಗಿರುವ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ತಿಳಿಸಿದ್ದಾರೆ.
ಶನಿವಾರ ಸುದ್ದಿಗೊಷ್ಠಿಯಲ್ಲಿ ವಿಷಯ ತಿಳಿಸಿದ ಅವರು ಈ ಹಿಂದೆ ಈ ಸಂಸ್ಥೆಯಲ್ಲಿ ಅವಿರೋಧ ಆಯ್ಕೆಯಾಗುತ್ತಿತ್ತು. ಇದೆ ಪ್ರಥಮ ಬಾರಿಗೆ ಚುನಾವಣೆ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿದ್ದು 15 ಜನ ಸದಸ್ಯರಿರುವ ಇಕ್ಬಾಲ್ ಎಜುಕೇಶನ್ ಸೋಸೈಟಿಯ ಚುನಾವಣೆ ಅತ್ಯಂತ ತುರುಸಿನಿಂದ ಕೂಡಿರುವ ಕಾರಣ ಬಿಗಿ ಪೋಲಿಸ್ ಬಂದೋಬಸ್ತನೊಂದಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.
ಮತದಾನ ನಡೆಯುವ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿರುವ ಅಂಜುಮನ್ ಉರ್ದು ಶಾಲೆಯ ಮತದಾನ ಕೇಂದ್ರದ ಸುತ್ತ 100 ಮೀಟರ್ ಅಂತರದಲ್ಲಿ ನಿರ್ಬಂಧ ಹೇರಲಾಗಿದ್ದು ಇಲ್ಲಿ ವಾಹನ ಸಂಚಾರ ಹಾಗೂ ಪ್ರಚಾರ ಕಾರ್ಯಕ್ಕೆ ನಿಷೇಧವಿದೆ ಎಂದು ಗುಳಗುಳಿ ತಿಳಿಸಿದರು.
15 ಸದಸ್ಯರ ಸೋಸೈಟಿಗೆ 46 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ 15 ರಂತೆ 2 ಗುಂಪು ಹಾಗೂ 6ಜನ ಮೊಹರಂ ಕಮೀಟಿಯ ಗುಂಪು ಹಾಗೂ 10ಜನರು ಸ್ವತಂತ್ರ್ಯ ಅಭ್ಯರ್ಥಿಗಳಾಗಿದ್ದಾರೆಂದು ಮಾಹಿತಿ ನೀಡಿದ ಚುನಾವಣಾಧಿಕಾರಿಗಳು ಅಂಜುಮನ ಶಾಲೆಯಲ್ಲಿ 300ರಂತೆ ಮತದಾರರನ್ನು ವಿಂಗಡಿಸಿ 4 ಮತದಾನ ಕೇಂದ್ರ ತೆರೆಯಲಾಗಿದೆ. ಒಬ್ಬ ಮತದಾರ 15 ಮತಗಳನ್ನು ಚಲಾಯಿಸಲು ಅವಕಾಶವಿದೆ ಎಂದರು.
ಸಹಾಯಕ ಚುನಾವಣಾಧಿಕಾರಿ ತಾಜುದ್ದೀನ್ ಮಾತನಾಡಿ ಡಿ.2ರ ರವಿವಾರ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮತದಾನ ಪ್ರಕ್ರಿಯೇ ನಡೆಯಲಿದೆ. ಅದೇ ದಿನ ಮಧ್ಯಾಹ್ನ 4 ಗಂಟೆಯಿಂದ ಮತ ಏಣ ಕೆ ಕಾರ್ಯ ನಡೆಯಲಿದೆ. ಒಂದು ಮತಗಟ್ಟೆಗೆ 5 ಜನ ಸಿಬ್ಬಂದಿಯಂತೆ ಅಧಿಕಾರಿಯೂ ಸೇರಿ 22 ಸಿಬ್ಬಂದಿಗಳೊಂದಿಗೆ ಮತ ಏಣ ಕೆಗೆ ಹೆಚ್ಚುವರಿ ಚುನಾವಣಾಧಿಕಾರಿಯಾಗಿ ದಾಂಡೇಲಿ ವಿಶೇಷ ತಹಶೀಲ್ದಾರ್ ಶೈಲೆಶ್ ಪರಮಾನಂದ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಎಸ್ಆರ್ ದೇಸಾರ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆಂದರು.
2-3 ಬಣಗಳಾಗಿ ತುರುಸಿನ ಚುನಾವಣೆಯಾಗಿ ಮಾರ್ಪಟ್ಟಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಚುನಾವಣೆ ಬಳಿಕ ಯಾವುದೇ ವಿಜಯೋತ್ಸವ ಹಾಗೂ ಮೇರವಣ ಗೆ ನಡೆಸಲು ಅವಕಾಶವಿಲ್ಲ ಎಂದು ಚುನಾವಣಾಧಿಕಾರಿ ವಿದ್ಯಾಧರ ಗುಳಗುಳಿ ತಿಳಿಸಿದರು.
Leave a Comment