
ಕುಮಟಾ (ಕೂಜಳ್ಳಿ) :- ಕಾರ್ತಿಕ ದೀಪೋತ್ಸವದ ಅಂಗವಾಗಿ ಕುಮಟಾದ ಕೂಜಳ್ಳಿಯ ಶಾಂತಿಕಾ ಪರಮೇಶ್ವರಿ ದೇವಾಲಯದ ಸನ್ನಿಧಿಯಲ್ಲಿ ಗೆಳೆಯರ ಬಳಗ, ಆಡಳಿತ ಮಂಡಳಿ ಹಾಗೂ ಕೂಜಳ್ಳಿ ಜನರು ಮತ್ತು ಸರ್ವ ಭಕ್ತಾದಿಗಳ ಸಹಯೋಗದಲ್ಲಿ ಪಂಚ ಸಹಸ್ರ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.
ಈ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿ
ದೇವರ ಸನ್ನಿಧಿಯಲ್ಲಿ ಸಾವಿರಾರು ದೀಪ ಬೆಳಗುವದರೊಂದಿಗೆ ಕಾರ್ತಿಕೋತ್ಸವ ಆಚರಿಸಿದರು.
ಸಂಜೆ 4 ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ 9 ಗಂಟೆಗೆ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.



Leave a Comment