
ಧಾರವಾಡ :- ಧಾರವಾಡದಿಂದ ಹುಬ್ಬಳ್ಳಿಯೆಡೆಗೆ ತೆರಳುತ್ತಿದ್ದ ಬಸ್ ನ ಚಾಲಕನ ಅಚಾತುರ್ಯದ ವಾಹನ ಚಾಲನೆಯ ಪರಿಣಾಮ
ಚಲಿಸುತ್ತಿದ್ದ ಬಸ್‌ನಿಂದ ಕೆಳಗೆ ಬಿದ್ದು ಮಹಿಳೆ ಸಾವು ಕಂಡ ದಾರುಣ ಘಟನೆ ಧಾರವಾಡದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಧಾರವಾಡ ಹೊರವಲಯದ ನುಗ್ಗಿಕೇರಿ ಬಳಿ ದುರ್ಘಟನೆ ನಡೆದಿದ್ದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಜವಳಿಗಲ್ಲಿಯ ಗೃಹಿಣಿ ಶಿರೀನ್ ದಾದಾಪೀರ (42)
ಮೃತ ಮಹಿಳೆಯಾಗಿದ್ದಾಳೆ.
ಬಸ್‌ನಲ್ಲಿ ಬಾಗಿಲು ಬಳಿಯಲ್ಲೇ ಕುಳಿತಿದ್ದ ಶಿರೀನ್,ರಸ್ತೆ ತಿರುವಿನಲ್ಲಿ ಬಸ್ ವೇಗವಾಗಿ ಚಲಿಸುತ್ತಿದ್ದಾಗ ಹೊರಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment