ಹಳಿಯಾಳ :- ಪದವಿ ಪೂರ್ವ ಕಾಲೇಜಗಳ ರಾಷ್ಟ್ರ ಮಟ್ಟದ ಕುಸ್ತಿ ಕ್ರೀಡಾಕೂಟದಲ್ಲಿ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಗ್ರಾಮೀಣ ಭಾಗದ ಮಹಿಳಾ ಕುಸ್ತಿ ಪಟು ಲೀನಾ ಅಂತೋನ್ ಸಿದ್ದಿ ಚಿನ್ನದ ಪದಕ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಸ್ಪರ್ದೆಗೆ ಆಯ್ಕೆಯಾಗಿದ್ದಾಳೆ.
ಶುಕ್ರವಾರ ಹರಿಯಾಣಾದ ಪಾಣ ಪತ್ನಲ್ಲಿ ನಡೆದ ರಾಷ್ಟ್ರಮಟ್ಟದ ಫೈನಲ್ ಕುಸ್ತಿಯಲ್ಲಿ ತನ್ನ ಎದುರಾಳಿ ಮಣ ಪುರದ ಕ್ರೀಡಾಪಟುವನ್ನು 3-7 ಅಂಕಗಳಿಂದ ಪರಾಭವಗೊಳಿಸಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಬೆಟೆಯಾಡುವಲ್ಲಿ ಲೀನಾ ಯಶಸ್ವಿಯಾಗುವ ಮೂಲಕ 59 ಕೆಜಿ ಮಹಿಳಾ ವಿಭಾಗದ ಅಂತಾರಾಷ್ಟ್ರೀಯ ಸ್ಪರ್ದೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದಿದ್ದಾಳೆ.
ತಾಲೂಕಿನ ದೊಡಕೊಪ್ಪ ಗ್ರಾಮದ ಬುಡಕಟ್ಟು ಸಿದ್ದಿ ಸಮುದಾಯಕ್ಕೆ ಸೇರಿದ ಲೀನಾ ಸಿದ್ದಿ ಹಳಿಯಾಳದ ಶಿವಾಜಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ(ವಾಣ ಜ್ಯ) ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಹಾಗೂ ಸರ್ಕಾರಿ ಕುಸ್ತಿ ವಸತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ.
ಈ ಹಿಂದೆ ರಾಷ್ಟ್ರಮಟ್ಟದಲ್ಲಿ ಮಾಡಿದ ಸಾಧನೆಗೆ ಲೀನಾ ಖೇಲೋ ಇಂಡಿಯಾದ ಕ್ರೀಡಾವೇತನಕ್ಕೆ ಆಯ್ಕೆಯಾಗಿದ್ದಾಳೆ ಅಲ್ಲದೇ ಕಳೆದ ತಿಂಗಳು ರಾಮನಗರ ಜಿಲ್ಲೆ ಕನಕಪುರದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 8 ಬಂಗಾರ, 1ಬೆಳ್ಳಿ, 4 ಕಂಚು ಒಟ್ಟೂ 13 ಪದಕಳನ್ನು ಗೆದ್ದು ಲೀನಾ ಉತ್ತರ ಕನ್ನಡದೊಂದಿಗೆ ಹಳಿಯಾಳದ ಕೀರ್ತೀಯನ್ನು ಬೆಳಗಿದ್ದು ಗಮನಾರ್ಹವಾಗಿದೆ. ಗ್ರಾಮೀಣ ಭಾಗದ ಮಹಿಳಾ ಕ್ರೀಡಾಪಟುವಿನ ಸಾಧನೆಗೆ ಹಳಿಯಾಳದಾದ್ಯಂತ ಅಭಿನಂದನೆಗಳು ಕೇಳಿಬರುತ್ತಿದೆ.
Leave a Comment