ಹೊನ್ನಾವರ . ಮೂಡಗಣಪತಿ ಸಭಾಭವನದಲ್ಲಿ, ನಡೆದ ಮುಕ್ತ ರಾಜ್ಯ ಕರಾಟೆ ಚಾಂಪಿಯನಶಿಪ್ಗೆ ಹೊನ್ನಾವರದ ರೋಯಲ್ ಅಕಾಡೆಮಿಯ ವಿದ್ಯಾರ್ಥಿಗಳು ಫೈಟ್ ಮತ್ತು ಕತಾದಲ್ಲಿ ಭಾಗವಹಿಸಿ ವಿಜಯಿಗಳಾಗಿದ್ದಾರೆ.
ಸೀನಿಯರ್ ವಿಭಾಗದಲ್ಲಿ ರೋಶನ.ಡಿ.ಭಂಡಾರಿ(ಪ್ರಥಮ,ತೃತೀಯ), ಅಕ್ಷಯ.ಮೇಸ್ತಾ (ದ್ವಿತೀಯ), ಚಂದನಾ.ರಮೇಶ.ಮೇಸ್ತಾ (ಪ್ರಥಮ,ಪ್ರಥಮ), ಭುವನ್.ಮೊಗೇರ(ಪ್ರಥಮ,ಪ್ರಥಮ), ಯಶಿಕಾ.ಕಿರಣ್ಕುಮಾರ.ನಾಯ್ಕ (ಪ್ರಥಮ), ಜಯಸೂರ್ಯ.ಪಿ.ಈಟಿ (ಪ್ರಥಮ), ಶಶಾಂಕ.ರಮೇಶ.ಮೇಸ್ತಾ (ಪ್ರಥಮ), ಕೌಶಿಕ್.ನಾಯ್ಕ(ದ್ವಿತೀಯ,ತೃತೀಯ), ವಿನೀತ.ವಿ.ಎನ್ (ದ್ವಿತೀಯ) ಶ್ರವಣ.ವಿನಯ್.ಹೆಗಡೆ(ತೃತೀಯ), ಕಿಶನ್.ಡಿ.ಶೇಠ(ಪ್ರಥಮ) ಮತ್ತು ದರ್ಶನ.ಜಿ.ದೇಶಭಂಡಾರಿ(ದ್ವಿತೀಯ) ಬಹುಮಾನವನ್ನು ಗೆದ್ದು ವಿಜಯಶಾಲಿಗಳಾಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಉತ್ತರ ಕನ್ನಡ ಜಿಲ್ಲಾ ಟ್ರಿಡಿಶನಲ್ ಶೊಟೊಕೋನ್ ಅಡಿಯಲ್ಲಿ ಹೊನ್ನಾವರದ ಶಾರಧಾಂಭಾ ಕಲ್ಯಾಣ ಮಂಟಪದ ರೋಯಲ್ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಪಾಲಕರು ಮತ್ತು ಜಿಲ್ಲೆಯ ಜನರಲ್ ಸೆಕ್ರೇಟರಿ ಎಚ್.ಆರ್. ರಾಘವೇಂದ್ರ ಅವರು ಅಭಿನಂದನೆ ಸಲ್ಲಿಸಿದಾರೆ.
Leave a Comment