
ಶಿರಸಿ (ಉಕ):
ನಿಸ್ವಾರ್ಥತೆ ಪತ್ರಿಕೊದ್ಯಮದ ಜೀವಾಳ. ಪಟ್ಟಭದ್ರ ಹಿತಾಸಕ್ತಿಗಳಿಂದ ಪತ್ರಕರ್ತರು ಸತ್ಯ ವರದಿ ಮಾಡಲು ಭಯಪಡುವಂತಹ ಪರಿಸ್ಥಿತಿ ಉದ್ಭವವಾಗಿದೆ. ಪ್ರಾಮಾಣಿಕ ಪತ್ರಕರ್ತರ ರಕ್ಷಣೆಯೆ ಲೀಪಾದ ಗುರಿಯಾಗಿದೆ ಎಂದು ಲೀಡ್ ಇಂಡಿಯಾ ಪಬ್ಲಿಷರ್ಸ ಅಸೋಸಿಯೇಷನ್ (ಲೀಪಾ) ರಾಜ್ಯಾಧ್ಯಕ್ಷ ಎಂ.ಬಿ ಮಲಭಾವಡಿ ತಿಳಿಸಿದ್ದಾರೆ.
ಶಿರಸಿಯ ಮಧುವನ ಹೊಟೆಲ್ ಆರಾಧನಾ ಸಭಾ ಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಘಟಕ ರಚನೆ ಹಾಗೂ ಲೀಪಾ ವಿಚಾರ ವಿನಿಮಯ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು.
ಕೆಲವೆ ಕೆಲವು ಪತ್ರಕರ್ತರಿಗೆ ಸರಕಾರಿ ಸೌಲಭ್ಯಗಳು ದೊರಕುತ್ತಿದೆ ಎಲ್ಲಾ ಪತ್ರಕರ್ತರಿಗು ಎಲ್ಲಾ ಸೌಲಭ್ಯಗಳು ಸಿಗುವಂತಾಗಬೇಕು.
ಇದಕ್ಕಾಗಿ ಲೀಪಾ ಸಂಸ್ಥೆ ಶ್ರಮಿಸುತ್ತಿದೆ ಎಂದರು.

ಫೆಬ್ರವರಿಯಲ್ಲಿ ರಾಷ್ಟ್ರೀಯ ಸಮಾವೇಶ :-
ಲೀಡ್ ಇಂಡಿಯಾ ಪಬ್ಲಿಷರ್ಸ ಅಸೋಸಿಯೇಷನ್ (ಲೀಪಾ) ಸಂಘಟನೆ ಆಶ್ರಯದಲ್ಲಿ ಫೆಬ್ರುವರಿಯಲ್ಲಿ ಪತ್ರಕರ್ತರ ರಾಷ್ಟ್ರೀಯ ಸಮಾವೇಶ ನಡೆಸಲಾಗುವುದು.
ದೇಶದಲ್ಲಿ ಪತ್ರಕರ್ತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆಗಳು, ಹತ್ಯೆ ಪ್ರಕರಣಗಳ ಕುರಿತು ಚರ್ಚಿಸಿ ಪರ್ತಕರ್ತರ ರಕ್ಷಣೆಗಾಗಿ ಸುರಕ್ಷಾ ಕಾನೂನು ಜಾರಿಗೆ ತರುವ ಕುರಿತು ದೇಶಾದ್ಯಂತ ಸಮಾವೇಶದ ಮೂಲಕ ಒತ್ತಾಯಿಸಲಾಗುವುದು ಎಂದರು.
ಸನ್ಮಾನ ;-
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಎಂ.ಬಿ ಮಲಭಾವಡಿಯವರನ್ನು ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾಗಿರುವ ನಾಗರಾಜ ನಾಯ್ಕರಿಗೆ ಉತ್ತರ ಕನ್ನಡ ಜಿಲ್ಲಾ ಪತ್ರಕರ್ತರ ಪರವಾಗಿ ಸನ್ಮಾನಿಸಲಾಯಿತು.

ಲೀಪಾ ನೂತನ ಜಿಲ್ಲಾ ಸಮೀತಿ;-
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಘಟಕ ರಚನೆ ಮಾಡಲಾಯಿತು.
ಜಿಲ್ಲಾಧ್ಯಕ್ಷರಾಗಿ ಶ್ರೀನಿವಾಸ್ ಆಚಾರಿ ಶಿರಸಿ.
ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಮಮತಾ ನಾಯ್ಕ ಸಿದ್ದಾಪುರ.
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಯೋಗರಾಜ್ ಎಸ್ ಕೆ ಹಳಿಯಾಳ.
ಜಿಲ್ಲಾ ಉಪಾಧ್ಯಕ್ಷರಾಗಿ ಪಾಂಡುರಂಗ ಪಾಟೀಲ್ ಮುಂಡಗೊಡ, ಸಹ ಕಾರ್ಯದರ್ಶಿಯಾಗಿ ಮಂಜುನಾಥ ನಾಯ್ಕ ಶಿರಸಿ, ಹಾಗೂ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಗಿರಿಶ್ ಎನ್ ಎಸ್ ಜೊಯ್ಡ, ದೇವರಾಜ ನಾಯ್ಕ ಶಿರಸಿ, ಚಂದ್ರಕಾಂತ ನಾಡಿಗೇರ ದಾಂಡೇಲಿ, ಮಾರ್ಟಿನ್ ಮುಂಡಗೋಡ, ತಿಮ್ಮಪ್ಪ ಮುಕ್ರಿ ಕುಮಟಾ, ದೇವಿದಾಸ್ ನಾಯ್ಕ ಹಳಿಯಾಳ, ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಾಧ್ಯಕ್ಷರಾದ ಮೈಲನಹಳ್ಳಿ ಡಿ. ತಿಪ್ಪೇಸ್ವಾಮಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗರಾಜ ನಾಯ್ಕ ಜಿಲ್ಲಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಶ್ರೀನಿವಾಸ ಆಚಾರಿ, ಯೋಗರಾಜ ಎಸ್ ಕೆ ಮುಂತಾದವರು ಪತ್ರಿಕಾರಂಗ ಬೆಳವಣಿಗೆಯಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸಾಲೀಮಠ, ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ರವಿ ಮುಂತಾದವರು ಇದ್ದರು.
ವರದಿ : ನಾಗರಾಜ ನಾಯ್ಕ

Leave a Comment