
ಸಿದ್ದಾಪೂರ:-
ಕಳೆದ 2ದಿನಗಳ ಹಿಂದೆ ಮುಟುಗುಪ್ಪೆ ಹಾಗೂ ಎನ್.ದೊಡ್ಡೆರಿ ಗ್ರಾಮಗಳ ಬಳಿ ಅನುಮಾನಾಸ್ಪದವಾಗಿ ತಡರಾತ್ರಿ ಓಮಿನಿ ವಾಹನವನ್ನು ರಸ್ತೆ ಬದಿ ನಿಲ್ಲಿಸಿಕೊಂಡು ಕಳ್ಳತನಕ್ಕೆ ಸಂಚು ಹಾಕುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ವಪ್ಪಿಸಿದ ಮೂವರು ಅಡಿಕೆ ಕಳ್ಳರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಸಾಗರ ತಾಲೂಕಿನ ಎನ್.ದೊಡ್ಡೆರಿ ಹಾಗೂ ಸಾಗರ ಭಾಗದಲ್ಲಿ ಅಡಿಕೆ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಶನಿವಾರ ಸಂಜೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ಹಾಳದಕಟ್ಟ ಗ್ರಾಮದ ಪವನ್(2೦), ಕೊಂಡ್ಲಿ ಗ್ರಾಮದ ಮುಕುಂದ(27) ಹಾಗೂ ಹಣಜಿ ಬೈಲ್ ಗ್ರಾಮದ ಗಣೇಶ(2೦) ಆರೋಪಿಗಳು.
ಪೊಲೀಸರ ವಿಚಾರಣೆ ವೇಳೆ ಕಳ್ಳರು ತಿಳಿಸಿದ ಮಾಹಿತಿ ಮೇರೆಗೆ ಎನ್.ದೊಡ್ಡೆರಿ ಗ್ರಾಮದ ಮಧು ಅವರ ಕಳುವಾದ 6 ಚೀಲ ಅಡಿಕೆ ಹಾಗೂ ಸಾಗರ ಭಾಗದಲ್ಲಿ ವಿವಿಧ ಕಡೆ ಕಳ್ಳತನ ಮಾಡಿದ 43 ಚೀಲ ಸಿಪ್ಪೆಗೋಟು ಅಡಿಕೆ ಒಟ್ಟು 15 ಕ್ವಿಂಟಾಲ್ ಸಿಕ್ಕಿದ್ದು, ಒಟ್ಟು ಮೌಲ್ಯ 1.80 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಸಿಪಿಐ ಉಮಾಪತಿ ಅವರ ನೇತೃತ್ವದಲ್ಲಿ ಪಿಎಸ್ಐ ಪಾರ್ವತಿ ಬಾಯಿ ಹಾಗೂ ಪೊಲೀಸರು ಕಾರ್ಯಚರಣೆ ನಡೆಸಿದ್ದರು. ಶನಿವಾರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ವರದಿ :- ನಾಗರಾಜ ನಾಯ್ಕ.
Leave a Comment