
ಸಿದ್ದಾಪುರ (ಉಕ):-
ಶಿಕ್ಷಣ ಪ್ರಸಾರಕ ಸಮಿತಿಯಿಂದ ಸೋಮವಾರದಿಂದ 3ದಿನಗಳ ಕಾಲ ಸಿದ್ದಾಪುರ ಪಟ್ಟಣದ ಸಿದ್ದಿ ವಿನಾಯಕ ವಿದ್ಯಾಸಂಸ್ಥೆಗಳ ಆವರಣದಲ್ಲಿ ಪ್ರಾರಂಭವಾದ ಅಕ್ಷರ ಜಾತ್ರೆ ಹಾಗೂ ವಾರ್ಷಿಕೋತ್ಸವಗಳ ಕಾರ್ಯಕ್ರಮವನ್ನು ಯಲ್ಲಾಪುರದ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪ್ರಮೋದ ಹೆಗಡೆ ಉಧ್ಘಾಟಿಸಿದರು.
ಪಪ್ಪಾಯಿಗಿಡಕ್ಕೆ ನಿರೂಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ತಲೆಯಲ್ಲಿ ಜಾತ್ರೆಗಳೆಂದರೆ ತಿರುಗುವ ಚಕ್ರಗಳು, ಸಪ್ಪಳ, ಗದ್ದಲ, ಸಂತೆ. ಹೊರಗಡೆ ಕಾಣುವ ಈ ಎಲ್ಲಾ ವೈಭವಗಳು ಜಾತ್ರೆಯಲ್ಲ, ಜಾತ್ರೆಗೆ ಮುಖ್ಯವಾಗಿ ಕಾರಣವಾದ ದೇವರ ಗರ್ಬಗುಡಿಯೊಳಗೆ ನಡೆಯುವ ದೇವರ ಉಪಾಸನೆ ಪುಜೆ ಮಾಡುತ್ತಿರುತ್ತಾರೆ ಅದುವೆ ಜಾತ್ರೆ ಎಂದರು.
ಹೊರಗಿನ ಜಾತ್ರೆ ಜಾತ್ರೆಯಲ್ಲಿ ನಮ್ಮ ಮನಸ್ಸಿನ ಒಳಗಡೆ ಒಂದು ಜಾತ್ರೆಯ ಪೂಜೆ ಇದೆ ಅದು ಅಕ್ಷರದ ಪೂಜೆ, ಜ್ಞಾನದ ಪೂಜೆ ಅದು ಬದುಕಿಗೆ ಬೇಕಾದಂತ ಬಹುದೊಡ್ಡ ಸರಕು ಎಂದರು.

ನೀವೆಲ್ಲರು ಆ ಜಾತ್ರೆಗೆ ಬಂದಿದ್ದೀರಿ ನೀವು ತಂದೆ ತಾಯಂದಿರಿಗೆ ಬಹಳ ಸಂತೋಷದಿಂದ ಹೇಳ ಬೇಕು ನಿಮ್ಮ ಮುಪ್ಪಿನ ಕಾಲದಲ್ಲಿ ನಿಮ್ಮ ಜವಾಬ್ದಾರಿಯನ್ನು ಹೊರುವಂತಹ ನಾವು, ಇವತ್ತಿನ ಜಾತ್ರೆಗೆ ಹೋಗಿ ನಮ್ಮ ಕುಟುಂಭವನ್ನೆ ಸಾಕುವಷ್ಟು ಜ್ಞಾನದ ಸರಕನ್ನು ಈ ಸಂಸ್ಥೆಯವರು ಕೊಟ್ಟು ಕಳುಹಿಸಿದ್ದಾರೆಂದು ಹೇಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷರಾದ ಡಾ.ಶಶಿಭೂಷಣ ಹೆಗಡೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಧ್ಯಾಪಕರು ಮತ್ತು ಹಿರಿಯ ಸಾಹಿತಿಗಳಾ ಹೊನ್ನಾವರದ ಶ್ರೀಪಾದ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Leave a Comment