ಹಳಿಯಾಳ:- ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮಾಡಿದ ಗಮನಾರ್ಹ ಸಾಧನೆಯನ್ನು ಗುರುತಿಸಿ “ಎನ್.ಜಿ.ಒ.ಎಕ್ಸಲನ್ಸ್ ಅವಾರ್ಡ–2018” ರ ಅಡಿಯಲ್ಲಿ ಅತ್ಯುತ್ತಮ ಟ್ರಸ್ಟ್ ಪ್ರಶಸ್ತಿಯ ಗರಿಯನ್ನು ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ತನ್ನ ಮುಡಿಗೇರಿಸಿಕೊಂಡಿದೆ.
ಗ್ರಾಮೀಣ ಭಾಗದಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಹೊಂದಿರುವ ಹಳಿಯಾಳದ ವಿ.ಆರ್.ಡಿ.ಎಮ್.ಟ್ರಸ್ಟ ಪ್ರಾರಂಭದಿಂದಲೂ ಗ್ರಾಮೀಣ ಜನತೆ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಸಹಾಯವಾಗುವ ಹಲವಾರು ಕಾರ್ಯಗಳನ್ನು ಹಮ್ಮಿಕೊಂಡು, ಪ್ರಮುಖವಾಗಿ ಶಿಕ್ಷಣ, ಉದ್ಯೋಗ, ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಐ.ಟಿ.ಐ. ಸ್ವ ಉದ್ಯೋಗ ತರಬೇತಿ ಸಂಸ್ಥೆಗಳು ಸಹಸ್ರಾರು ಜನರ ಸ್ವಾವಲಂಬಿಗಳಾಗಲು ದಾರಿ ತೋರಿಸಿದೆ. ವಿ.ಆರ್.ಡಿ.ಎಮ್. ಟ್ರಸ್ಟ್ ನ ಈ ಎಲ್ಲ ಸಾಧನೆಗಳಿನ್ನು ಗುರುತಿಸಿ ಅತ್ಯುತ್ತಮ ಟ್ರಸ್ಟ್ ಪಶಸ್ತಿಯ ಗೌರವ ದೊರಕಿದೆ ಎಂದು ಆಡಳಿತಾಧಿಕಾರಿ ಪ್ರಕಾಶ ಪ್ರಭು ತಿಳಿಸಿದ್ದಾರೆ.
ವಿ.ಆರ್.ಡಿ.ಎಮ್.ಟ್ರಸ್ಟ್ಗೆ ಪ್ರಶಸ್ತಿ ಬಂದಿರುವುದಕ್ಕೆ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಧರ್ಮದರ್ಶಿಗಳಾದ ರಾಧಾಬಾಯಿ, ಪ್ರಸಾದ, ಪ್ರಶಾಂತ ಅವರು ಹರ್ಷ ವ್ಯಕ್ತಪಡಿಸಿದ್ದು, ಸಾಧನೆಗೆ ಕಾರಣರಾದ ಟ್ರಸ್ಟ್ನ ಎಲ್ಲ ಅಂಗ ಸಂಸ್ಥೆಗಳ ಸಿಬ್ಬಂದಿಗಳನ್ನು ಹಾಗೂ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದ್ದಾರೆ.
Leave a Comment