• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮುಚ್ಚದ ಗುಂಡಿ : ಸಂಚಾರಕ್ಕೆ ಅಡಚಣೆ ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ವಾಹನ ಸವಾರರ ನಿತ್ಯ ಪರದಾಟ

December 25, 2018 by Nagaraj Naik Leave a Comment

ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ವಾಹನ ಸವಾರರ ನಿತ್ಯ ಪರದಾಟ.
 ಸಿದ್ದಾಪುರ :- 
ರಸ್ತೆಯ ತುಂಬೆಲ್ಲ ಗುಂಡಿಗಳು ಹೊಂಡ ತಪ್ಪಿಸಲು ವಾಹನ ಸವಾರರ ಪರದಾಟ,
ದ್ವಿಚಕ್ರ ವಾಹನ ಸವಾರರಂತು ಪ್ರಾಣವನ್ನು ಕೈಯಲ್ಲಿ ಹಿಡಿದು ಸವಾರಿ ಮಾಡುವ ಕಠಿಣ ಸ್ಥಿತಿ. ರಸ್ತೆಗೆ ಬಂದವರು ಮನೆಗೆ ಸರಿಯಾಗಿ ತಲುಪುವ ಗ್ಯಾರಂಟಿ ಇಲ್ಲ, ಇದು ಸಿದ್ದಾಪುರ-ಕುಮಟಾ ರಸ್ತೆಯ ಸದ್ಯದ ದುಸ್ಥಿತಿಯ ಚಿತ್ರಣ.
ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ಸಿದ್ದಾಪುರದಿಂದ ದೊಡ್ಮನೆ ಘಟ್ಟದವರೆಗೆ ಸಿದ್ದಾಪುರ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಈ ರಸ್ತೆಯಲ್ಲಿ ಬಹುತೇಕ ಕಡೆಗಳಲ್ಲಿ ಗುಂಡಿಗಳೆ ತುಂಬಿ ಹೋಗಿದ್ದು ರಸ್ತೆ ಸಂಪೂರ್ಣ ಹದಗೆಟ್ಟು ನಿಂತಿದೆ.
ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ವಾಹನ ಸವಾರರ ನಿತ್ಯ ಪರದಾಟ.
ಗುಂಡಿಗಳ ದರ್ಬಾರ ಅಧಿಕಾರಿಗಳು ಫೇಲ್ :- 
ಪ್ರತಿ ವರ್ಷ ಅಕ್ಟೊಬರ್-ನವಂಬರ್ ತಿಂಗಳಲ್ಲಿ ಗುಂಡಿ ಮುಚ್ಚುವ ಕೆಲಸ ಪುರ್ಣಗೊಳ್ಳುತಿತ್ತು ಆದರೆ ಈ ವರ್ಷ ಡಿಸೆಂಬರ್ ತಿಂಗಳು ಮುಗಿಯುತ್ತ ಬಂದರು ಗುಂಡಿ ಮುಚ್ಚುವ ಕೆಲಸ ಪ್ರಾರಂಭವಾಗಿಲ್ಲದಿರುವುದು ಅಧಿಕಾರಿಗಳ ನಿರ್ಲಕ್ಷ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯನ್ನು ತೋರಿಸುತ್ತದೆ.
ಬೇಡ್ಕಣಿ, ಬಿಳಗಿ, ಕ್ಯಾದಗಿ, ವಂದಾನೆ, ದೊಡ್ಮನೆ ಊರುಗಳನ್ನು ಹಾದು ಹೋಗುವ ಈ ರಸ್ತೆಯು ಇಟಗಿ, ಲಂಬಾಪುರ, ಸೋವಿನಕೊಪ್ಪ, ಹಾವಿನಬೀಳು ಹೀಗೆ ಹಲವಾರು ಊರುಗಳಿಗೆ ಸಂಪರ್ಕ ರಸ್ತೆಯನ್ನು ಹೊಂದಿದೆ. ಇಲ್ಲಿಯ ಜನ ಪಟ್ಟಣಕ್ಕೆ ಬರಲು ಈ ರಸ್ತೆಯನ್ನೆ ಬಳಸುತ್ತಾರೆ.
ಪ್ರಯಾಣ – ನಿತ್ಯ ನರಕದ‌ ಅನುಭವ:- 
ಅಲ್ಲದೆ ಪ್ರಸಿದ್ದ ಯಾತ್ರಾ ಸ್ಥಳಗಳಾದ ಬಿಳಗಿ, ಭುವನಗಿರಿ ಹಾಗೂ ಪ್ರವಾಸಿ ತಾಣವಾದ ಬುರಡೆ ಫಾಲ್ಸ್ ಗಳಿಗೆ ಈ ರಸ್ತೆಯ ಮೂಲಕವೆ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಪ್ರಯಾಣಿಸುತ್ತಾರೆ. ಬೇಡ್ಕಣಿ ಕಾಲೇಜ್ ಮತ್ತು ಬಿಳಗಿ ಕಾಲೇಜಿನ ಸಾವಿರಾರು ವಿಧ್ಯಾರ್ಥಿಗಳು ಇಲ್ಲಿಯೆ ಸಾಗಬೇಕು.   ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ವಿಧ್ಯಾರ್ಥಿಗಳು, ರೋಗಿಗಳು, ಗರ್ಭಿಣಿ ಸ್ತ್ರೀಯರು, ಹೀಗೆ ಎಲ್ಲಾ ಸವಾರರು ನಿತ್ಯ ನರಕ ಅನುಭವಿಸುತ್ತಿದ್ದಾರೆ.
ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ವಾಹನ ಸವಾರರ ನಿತ್ಯ ಪರದಾಟ.
ಗುಂಡಿ ಮುಚ್ಚಿ ಇಲ್ಲವೇ ಪ್ರತಿಭಟನೆ ಎದುರಿಸಿ ;- 
ಲೋಕೋಪಯೋಗಿ ಇಲಾಖೆಗೆ ಸಮಸ್ಯೆ ಸರಿಪಡಿಸುವಂತೆ ಹಲವಾರು ಬಾರಿ ಮನವಿ ನೀಡಲಾಗಿದೆ. ಆದರೆ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಕೂಡಲೆ ಸೂಕ್ತ ಕ್ರಮ ವಹಿಸಿ ರಸ್ತೆಯ ಮೇಲಿನ ಈ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರು, ಯಾತ್ರಾರ್ಥಿಗಳು, ಪ್ರವಾಸಿಗಳು,  ರೋಗಿಗಳು ಹಾಗೂ ವಿಧ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಸರಿಪಡಿಸದಿದ್ದರೆ ಪ್ರತಿಭಟನೆ ನಡೆಸುವದಾಗಿ ಸ್ಥಳಿಯರು ಎಚ್ಚರಿಸಿದ್ದಾರೆ.
ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ವಾಹನ ಸವಾರರ ನಿತ್ಯ ಪರದಾಟ. ಮುಚ್ಚದ ಗುಂಡಿ : ಸಂಚಾರಕ್ಕೆ ಅಡಚಣೆ ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ವಾಹನ ಸವಾರರ ನಿತ್ಯ ಪರದಾಟ ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ವಾಹನ ಸವಾರರ ನಿತ್ಯ ಪರದಾಟ. ಮುಚ್ಚದ ಗುಂಡಿ : ಸಂಚಾರಕ್ಕೆ ಅಡಚಣೆ ಸಿದ್ದಾಪುರ-ಕುಮಟಾ ರಸ್ತೆಯಲ್ಲಿ ವಾಹನ ಸವಾರರ ನಿತ್ಯ ಪರದಾಟ

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: SIDDAPURA, Trending Tagged With: ಕ್ಯಾದಗಿ, ಗರ್ಭಿಣಿ ಸ್ತ್ರೀಯರು, ಗುಂಡಿ ಮುಚ್ಚಿ ಇಲ್ಲವೇ ಪ್ರತಿಭಟನೆ ಎದುರಿಸಿ ;-, ಗುಂಡಿಗಳ ದರ್ಬಾರ ಅಧಿಕಾರಿಗಳು ಫೇಲ್, ದೊಡ್ಮನೆ ಊರುಗಳನ್ನು, ನರಕದ‌ ಅನುಭವ, ಪ್ರವಾಸಿ ತಾಣವಾದ ಬುರಡೆ ಫಾಲ್ಸ್, ಪ್ರಸಿದ್ದ ಯಾತ್ರಾ ಸ್ಥಳಗಳಾದ ಬಿಳಗಿ, ಪ್ರಾಣವನ್ನು ಕೈಯಲ್ಲಿ ಹಿಡಿದು ಸವಾರಿ ಮಾಡುವ ಕಠಿಣ ಸ್ಥಿತಿ, ಬಿಳಗಿ, ಬಿಳಗಿ ಕಾಲೇಜಿನ ಸಾವಿರಾರು ವಿಧ್ಯಾರ್ಥಿಗಳು, ಬೇಡ್ಕಣಿ, ಬೇಡ್ಕಣಿ ಕಾಲೇಜ್, ಭುವನಗಿರಿ, ಮನೆಗೆ ಸರಿಯಾಗಿ ತಲುಪುವ ಗ್ಯಾರಂಟಿ ಇಲ್ಲ, ಮುಚ್ಚದ ಗುಂಡಿ, ರೋಗಿಗಳು, ಲಂಬಾಪುರ, ವಂದಾನೆ, ವಾಹನ ಸವಾರರ ನಿತ್ಯ ಪರದಾಟ, ವಿಧ್ಯಾರ್ಥಿಗಳು, ಸಂಚಾರಕ್ಕೆ ಅಡಚಣೆ, ಸಿದ್ದಾಪುರ-ಕುಮಟಾ ರಸ್ತೆ, ಸೋವಿನಕೊಪ್ಪ, ಹಲವಾರು ಊರು, ಹಾದು ಹೋಗುವ ಈ ರಸ್ತೆಯು ಇಟಗಿ, ಹಾವಿನಬೀಳು

Explore More:

About Nagaraj Naik

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...