• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಹಿಳೆಯರಿಂದ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ;ತುಕಾರಾಂ ನಾಯ್ಕ

December 30, 2018 by Gaju Gokarna Leave a Comment

watermarked SKDRDP 1 2

ಹೊನ್ನಾವರ, ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ದಿಗೆ ಶ್ರಮಿಸುವ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ರಾಜ್ಯದೆಲ್ಲಡೆ ಮನೆಮಾತಾಗಿದೆ ಇದನ್ನು ಇನ್ನಷ್ಟು ಸದೃಡಗೊಳಿಸುವ ಕೆಲಸ ಮಹಿಳೆಯರಿಂದ ಆಗಬೇಕು ಎಂದು ತಾಲೂಕ ಪಂಚಾಯತ ಸದಸ್ಯ ತುಕಾರಾಂ ನಾಯ್ಕ ಅಭಿಪ್ರಾಯಪಟ್ಟರು
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೊನ್ನಾವರ ವಲಯ ಮಟ್ಟದ ಸಾಮೋಹಿಕ ಸತ್ಯನಾರಾಯಣ ಪೂಜೆ ಹಾಗು ಪದಗ್ರಹಣ ಕಾರ್ಯಕ್ರಮ ಕರ್ಕಿ ಜ್ಞಾನೇಶ್ವರಿ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು
ಪ್ರಾರಂಭದಲ್ಲಿ ಸಾಮೋಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಧಾರ್ಮಿಕ ವಿಧಿವಿಧಾನದ ಮೂಲಕ ವಿಜೃಂಭನೆಯಿಂದ ನಡೆಯಿತು. ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ತಾಲೂಕ ಪಂಚಾಯತ ಸದಸ್ಯರಾದ ತುಕಾರಾಂ ನಾಯ್ಕ ಉದ್ಘಟಿಸಿ ಮಹಿಳೆಯರಿಂದ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಗ್ರಾಮೀಣ ಭಾಗದ ಸಮಸ್ಯೆಯನ್ನು ಬಗೆಹರಿಸಲು ಹೋರಾಟ ನಡೆಸಬೇಕು ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಶಿವರಾಜ ಮೇಸ್ತ ಮಾತನಾಡಿ ಸಾಮೋಹಿಕ ಸತ್ಯನಾರಾಯಣ ಪೂಜೆ ಮಾಡಿದರೆ ಹೆಚ್ಚಿನ ಫಲ ಸಿಗುತ್ತದೆ ಅದುಅಲ್ಲದೇ ಮುಂದಿನ 3 ವರ್ಷಗಳ ಕಾಲ ಯೋಜನೆಯ ಪದಾಧಿಕಾರಿ ಆಗಿ ಕತ್ಯರ್ವ ನಿರ್ವಹಿಸಲು ಶಕ್ತಿ ಬಂದಂತೆ ಆಗುತ್ತದೆ ಆ ನಿಟ್ಟಿನಲ್ಲಿ ಯೋಜನೆ ಇದನ್ನು ಅನುಷ್ಟಾನ ಮಾಡುತ್ತಿದೆ. 1983ಕ್ಕಿಂತ ಮೂದಲು ಧರ್ಮಸ್ತಳಕ್ಕೆ ಕಷ್ಟ ಹೇಳಿಕೊಂಡು ಹೋಗುತ್ತಿದ್ದರು ಅದನ್ನು ನಿಲ್ಲಿಸಿ ಕಷ್ಟಪಡುವ ಜನರ ಬಳಿಯೇ ಬರುವ ನಿಟ್ಟಿನಲ್ಲಿ ಇದೀಗ ಇಡೀ ರಾಜ್ಯದಂತ ಹೆಮ್ಮೆಯಿಂದ ತಲೆ ಎತ್ತಿ ಧಾರ್ಮಿಕ, ಆರ್ತೀಕ ಸಾಮಾಜಿಕವಾಗಿ ಜಾಗೃತಿ ಮೂಡಿಸುವ ಕೆಲಸ ಯೋಜನೆ ಮಾಡುತ್ತಿದೆ ಅದರ ಲಾಭವನ್ನು ಸದಸ್ಯರು ಪಡೆದುಕೊಂಡು ಸರ್ವಾಂಗಿಣ ಅಭಿವೃದ್ದಿಯತ್ತ ದಾಪುಗಾಲು ಹಾಕಬೇಕಿದೆ ಎಂದರು.

watermarked SKDRDP 1 1
ಅಧ್ಯಕ್ಷತೆ ವಹಿಸಿದ್ದ ಕರ್ಕಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಕಾಂತ ಮೊಗೇರ ಮಾತನಾಡಿ ಶಿಸ್ತು ಸಮಯಕ್ಕೆ ಒತ್ತು ನಿಡುವ ಈ ಯೋಜನೆಯು ಹಲವಾರು ಕುಡುಗೆಯನ್ನು ಸಮಾಜಕ್ಕೆ ನೀಡಿದೆ. ಉಳಿದ ಸಂಘಟನೆಯಂತೆ ವವ್ಯಹಾರಕ್ಕಷ್ಟೆ ಸೀಮೀತವಾಗಿರದೆ ಸಂಕಷ್ಟದಲ್ಲಿದ್ದವರಿಗೆ ಪ್ರತಿ ತಿಂಗಳು ನೆರವಾಗುವ ಮೂಲಕ ಅವರ ಬಾಳಿಗೆ ಬೆಳಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದ ಹೊನ್ನಾವರ ಭಟ್ಕಳ ತಾಲೂಕಿನ ಯೋಜನಾಧಿಕಾರಿ ಎಂ,ಎಸ್ ಈಶ್ವರ ಮಾತನಾಡಿ ಯೋಜನೆ ಕಳೆದ 13 ವರ್ಷದಿಂದ ತಾಲೂಕಿನಲ್ಲಿ ಹಲವಾರು ಯೋಜನೆ ಅನುಷ್ಟಾನಕ್ಕೆ ತಂದಿದ್ದು ಸಂಘದ ಸದಸ್ಯರು ಇದರ ಉಪಯೊಗ ಪಡೆದಿದ್ದಾರೆ. ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಸದಸ್ಯರ 916 ಮಕ್ಕಳಿಗೆ 1 ಕೋಟಿ 58 ಲಕ್ಷ ಶಿಷ್ಯವೇತನ ನೀಡುವ ಮೂಲಕ ಮಾದರಿಯಾಗಿದ್ದೇವೆ. ಮಾಸಾಸನ, ಕ್ರಷಿ ಸಲಕರಣೆ, ನೀಡುವ ಮೂಲಕ ಅವರ ಕಷ್ಟಗಳಲ್ಲಿ ಭಾಗಿಯಾಗಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಸದಸ್ಯರ ಮನೆ ಬಾಗಿಲಿಗೆ ತಲುಪಿಸಿದ್ದಲ್ಲದೇ ಅದರ ಪ್ರಯೋಜನ ಕೊಡಿಸುವಲ್ಲಿಯೂ ಸಫಲತೆ ಕಂಡಿದ್ದೇವೆ ಎಂದು ಕಾರ್ಯಕ್ರಮದ ಕುರಿತು ವಿವರಿಸಿದರು.
3 ವರ್ಷಗಳ ಪದಾಧಿಕಾರಿ, ದಾಖಲಾತಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದವರನ್ನು ವೇದಿಕೆಯಲ್ಲಿ ಸ್ಮರಿಸಲಾಯಿತು. ಪ್ರಸುತ್ತ ವರ್ಷ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾದ ವಲಯದ ವಿದ್ಯಾರ್ತಿಗಳಿಗೆ ಸಾಂಕೇತಿಕವಾಗಿ ಆದೇಶಪ್ರತಿಯನ್ನು ವಿವರಿಸಲಾಯಿತು.
ವೇದಿಕೆಯಲ್ಲಿ ಕರ್ಕಿ ವ್ಯವಸಾಯ ಸೇವಾ ಕೇಂದ್ರದ ಅಧ್ಯಕ್ಷ ಸಂತೋಷ ಶೆಟ್ಟಿ, ಜ್ಞಾನೇಶ್ವರಿ ಮ್ಯಾನೇಜಿಂಗ್ ಟ್ರಸ್ಟ ಮಂಜುನಾಥ ಶರ್ಮಾ, ಒಕ್ಕೂಟದ ಅದ್ಯಕ್ಷರಾದ ಅಶ್ವಿನಿ ಮೇಸ್ತ ಮುಂತಾದವರು ಉಪಸ್ಥಿತರಿದ್ದರು.
ಮೇಲ್ವಿಚಾರಕರಾದ ರಮೇಶ ನಾಯ್ಕ ಸ್ವಾಗತಿಸಿ ಸೇವಾಪ್ರತಿನಿಧಿ ಜಯಲತಾ ವಂದಿಸಿದರು. ದೀಪಾ ವರದಿ ಪ್ರಸುತ್ತಿಪಡಿಸಿದರೆ ಲೆಕ್ಕಪರಿಶೋಧಕ ಪರಮೇರ್ಸವರ ಕಾರ್ಯಕ್ರಮ ನಿರ್ವಹಿಸಿದರು

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News, Canara News Tagged With: ಕರ್ಕಿ ಜ್ಞಾನೇಶ್ವರಿ ಸಭಾಭವನ, ತುಕಾರಾಂ ನಾಯ್ಕ, ಧರ್ಮಸ್ಥಳ ಗ್ರಾಮಾಭಿವೃದ್ದಿ, ಪದಗ್ರಹಣ ಕಾರ್ಯಕ್ರಮ, ಮಹಿಳೆಯರಿಂದ ಮಾತ್ರ, ಸಮಾಜದ ಅಭಿವೃದ್ದಿ ಸಾಧ್ಯ, ಹೊನ್ನಾವರ ವಲಯ ಮಟ್ಟದ ಸಾಮೋಹಿಕ ಸತ್ಯನಾರಾಯಣ ಪೂಜೆ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...