ಸಿದ್ದಾಪುರ(ಉ.ಕ) :- ಕಡಿಮೆ ಸೌಲಭ್ಯಗಳು ಹಾಗೂ ಇರುವ ಅವಕಾಶವನ್ನು ಬಳಸಿಕೊಂಡು ಎತ್ತರದ ಸಾಧನೆ ಮಾಡಬೇಕೆನ್ನುವ ಗುರಿ ಹೊಂದಿರುವ ಗ್ರಾಮೀಣ ಭಾಗದ ಮಕ್ಕಳಿಗೆ ಬಡತನ ಮತ್ತು ಛಲ ಎಲ್ಲವನ್ನು ಕಲಿಸುತ್ತದೆ ಎನ್ನುವುದನ್ನು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಾನಗೋಡು ಗ್ರಾಮದ ಲಲಿತಾ ಅಜ್ಜಪ್ಪ ನಾಯ್ಕ ಅಕ್ಷರಸಃ ಸತ್ಯ ಮಾಡಿದ್ದಾರೆ.
ಬಡತನ -ಪ್ರತಿಭೆಗೆ ಅಡ್ಡಿಪಡಿಸಿಲ್ಲ:-
ಅಜ್ಜಪ್ಪ ಹಾಗೂ ಸರೋಜಾ ದಂಪತಿಗಳ ಮಗಳಾಗಿರುವ ಲಲಿತಾ ಹುಟ್ಟಿ ಬೆಳೆದ್ದು ಸಿದ್ದಾಪುರ ತಾಲೂಕಿನ ಕಾನಗೋಡು ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಇವರು ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ಇವರಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿದ ಮನೆಯವರು ಕುಟುಂಬದಲ್ಲಿ ಬಡತನವಿದ್ದರು ಆಕೆಯ ಕ್ರೀಡಾ ಪ್ರತಿಭೆಗೆ ಅಡ್ಡಿಪಡಿಸಲಿಲ್ಲ.
ಪ್ರತಿಭೆ ಅನಾವರಣ:-
ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಜಯಪ್ರಕಾಶ ನಾರಾಯಣ ಕ್ರೀಡಾ ಶಾಲೆಯಲ್ಲಿ ಸೇರಿ. ನುರಿತ ಶಿಕ್ಷಕರಿಂದ ತರಬೇತಿ ಪಡೆದು ಗ್ರಾಮೀಣ ಮಟ್ಟದಲ್ಲಿ ಸೀಮಿತವಾಗಿದ್ದ ಪ್ರತಿಭೆ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ಪಡೆದ ಲಲಿತಾ ಪಠ್ಯದೊಂದಿಗೆ ಕ್ರೀಡೆಗೆ ಆದ್ಯತೆ ನೀಡಿ ತನ್ನಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ಬೆಳಕಿಗೆ ಬಂದಳು.
ಕ್ರೀಡೆಗೂ ಜೈ-ಶಿಕ್ಷಣಕ್ಕೂ ಸೈ:-
ರಾಜ್ಯ ಜೂನಿಯರ್ ವಾಲಿಬಾಲ್ ತಂಡದಲ್ಲಿ ಆಯ್ಕೆಯಾಗಿ ರಾಜಸ್ಥಾನದಲ್ಲಿ ರಾಷ್ಟ್ರಮಟ್ಟದಲ್ಲಿ ಆಟವಾಡಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಲಲಿತಾ ವಾಲಿಬಾಲ್ನಲ್ಲಿ ಸಾಧನೆ ಮಾಡುತ್ತಲೇ 10ನೇ ತರಗತಿಯಲ್ಲಿ ಪ್ರಥಮ ಸ್ಥಾನವನ್ನು ತೆಗೆದುಕೊಂಡು ಶೈಕ್ಷಣ ೀಕವಾಗಿಯೂ ಸೈ ಎನಿಸಿಕೊಂ ಇಕೆ ಸದ್ಯ ಕಾಲೇಜ್ ಶಿಕ್ಷಣವನ್ನು ಧಾರವಾಡದ ಜೆ.ಎಸ್.ಎಸ್ ಶಿಕ್ಷಣ ಕೇಂದ್ರದಲ್ಲಿ ಪಡೆಯುತ್ತಿದ್ದಾಳೆ.
ರಾಷ್ಟ್ರಮಟ್ಟದಲ್ಲಿ ಜಯಭೇರಿ:-
ಇತ್ತೀಚಿಗೆ ಛಂಡಿಗಡದಲ್ಲಿ ನಡೆದ ರಾಷ್ಟ್ರೀಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಆಟವಾಡಿದ್ದು ಪ್ರಶಂಸನೀಯವಾಗಿದೆ. ಈ ಕ್ರೀಡಾಕೂಟದಲ್ಲಿ ಲಲಿತಾ ಪ್ರತಿನಿಧಿಸಿದ್ದ ಕರ್ನಾಟಕ ರಾಜ್ಯ ತಂಡವು ಪಾಂಡಿಚೇರಿ, ಆಂಧ್ರಪ್ರದೇಶ ಹಾಗೂ ಚಂಡಿಗಢ್ ತಂಡವನ್ನು ಸೋಲಿಸಿ ಜಯಿಸಿದೆ.
ಅಂತರಾಷ್ಟ್ರೀಯ ಮಟ್ಟಕ್ಕೆ ತಯಾರಿ-ಪ್ರಶಂಸೆಗಳ ಸುರಿಮಳೆ:-
ಈದೀಗ ಲಲಿತಾ ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಿದ್ಧತೆ ನಡೆಸುತ್ತಿದ್ದು ಗ್ರಾಮೀಣ ಭಾಗದ ಪ್ರತಿಭೆಯಾಗಿದ್ದರೂ ಕೂಡಾ ಜಿಲ್ಲೆಯ ಹೆಸರನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾಳೆ. ಇವಳ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆಗಳು ಕೇಳಿಬರುತ್ತಿದ್ದು ಸಾಮಾಜಿಕ ಕಾರ್ಯಕರ್ತ ಆಕಾಶ್ ಎಸ್ ಕೆ ಮುಂತಾದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Leave a Comment