
ಹಳಿಯಾಳ :- ಕೆಡಿಸಿಸಿ ಬ್ಯಾಂಕನ ಸಭೆಗೆ ಶಿರಸಿಗೆ ತೆರಳುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೊಟ್ನೇಕರ ಅವರು ಪ್ರಯಾಣಿಸುತ್ತಿದ್ದ ಕಾರು ಗುರುವಾರ ಮಧ್ಯಾಹ್ನ ಹಳಿಯಾಳ ಯಲ್ಲಾಪೂರ ರಾಜ್ಯ ಹೆದ್ದಾರಿಯ ತಾಟವಾಳ ಸಮೀಪ ಇನ್ನೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ನಡೆದಿದೆ.
ಇಂಡಿಗೋ ಕಾರು ಡಿಕ್ಕಿ ಎಮ್ ಎಲ್.ಸಿ ಕಾರು ಪಲ್ಟಿ :-
ತಾಟವಾಳ ಸಮೀಪದ ಸರ್ಕಾರಿ ಶಾಲೆಯ ಎದುರು ಬೆಂಗಳೂರು ka 01 -6960 mf ನಂಬರಿನ ಇಂಡಿಗೊ ಕಾರು
ಎಮ್ ಎಲ್ ಸಿ ಅವರು ಚಲಿಸುತ್ತಿದ್ದ ಇನ್ನೊವಾ ಫೊರಚುನರ್ ka 65 m 5777
ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ
ಅಪಘಾತದ ರಭಸಕ್ಕೆ ಘೊಟ್ನೇಕರ
ಅವರ ಕಾರು ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಕಾರು ಘೊಟ್ನೇಕರ ಅವರು ಕುಳಿತ ಬದಿಯೇ ಪಲ್ಟಿಯಾಗಿದ್ದು ಅದೃಷ್ಟವಶಾತ್ ಕಾರಿನಲ್ಲಿಯ ಅಪಘಾತ ನಿರ್ವಾಹಕ (air bag) ಬಲೂನ್ ಗಳು ತೆರೆದುಕೊಂಡಿದ್ದರಿಂದ ಯಾವುದೇ ಅವಘಡ ಸಂಭವಿಸಿಲ್ಲ ಎನ್ನಲಾಗಿದೆ.
ಅಪಘಾತವಾದ್ದರಿಂದ ಕಾರು ಎಡಬದಿ ಹಾಗೂ ಹಿಂಬದಿ ಜಖಂಗೊಂಡಿದೆ.
ಆದರೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನೊರ್ವ ಪುರಸಭೆಯ ಸದಸ್ಯ ಅನಿಲ ಚವ್ವಾಣ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ದೇವರ ಕೃಪೆ ಏನು ಆಗಿಲ್ಲಾ ಘೊಟ್ನೇಕರ:-
ಈ ಕುರಿತು ಮಾತನಾಡಿದ ಘೊಟ್ನೇಕರ ಅವರು ಕಾರು ಅಪಘಾತವಾಗಿ ಪಲ್ಟಿ ಹೊಡೆದಿದೆ ಆದರೇ ದೇವರ ಕೃಪೆಯಿಂದ ಯಾರಿಗೂ ಯಾವುದೇ ತರಹದ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದರು.
ಹಳಿಯಾಳಕ್ಕೆ ವಾಪಸ್ಸಾದ ಘೊಟ್ನೇಕರ:-
ಕಾರು ಅಪಘಾತವಾದ ಬಳಿಕ ಘೊಟ್ನೇಕರ ಅವರು ಶಿರಸಿಗೆ ತೆರಳದೆ ಹಳಿಯಾಳಕ್ಕೆ ವಾಪಸ್ಸಾಗಿದ್ದಾರೆ.




Leave a Comment