ಹೊನ್ನಾವರ .ನಮ್ಮ ದೇಶ ಪ್ರಗತಿಪತದತ್ತ ಸಾಗುತ್ತಿದೆ. ಇಂದಿನ ಈ ತಾಂತ್ರಿಕ ಯುಗದಲ್ಲಿ ಎಲ್ಲರೂ ಶಿಕ್ಷಣವಂತರಾಗಬೇಕು. ಈ 21ನೇ ಶತಮಾನದಲ್ಲೂ ಅನಕ್ಷರಸ್ಥರು ಇದ್ದಾರೆ ಎಂದಾದರೆ ನಾವೆಲ್ಲ ಒಮ್ಮೆ ಯೋಚನೆ ಮಾಡಬೇಕಾದ ಸನ್ನಿವೇಶ ಒದಗಿಬರುತ್ತದೆ. ಒಂದು ದೇಶ ಪ್ರಗತಿಯನ್ನು ಪೂರ್ಣಪ್ರಮಾಣದಲ್ಲಿ ಸಾಧಿಸಿದೆ ಎಂದರೆ ಅಲ್ಲಿ ಸಾಕ್ಷರರ ಪ್ರಮಾಣ ಹೆಚ್ಚಿಗೆ ಇದ್ದಿರುತ್ತದೆ. ಆ ಕಾರಣದಿಂದ ಇಂದು ನಾವು ಅನಕ್ಷರಸ್ಥರಿಗೆ ಬೋಧಿಸುವ ಬೋಧಕರಿಗೆ ತರಬೇತಿ ಕಾರ್ಯಗಾರ ಏರ್ಪಡಿಸಿದ್ದೇವೆ ಎಂದು ತಾಲೂಕಾ ಪಂಚಾಯತ ಅಧ್ಯಕ್ಷರಾದ ಉಲ್ಲಾಸ ನಾಯ್ಕ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ತಾಲೂಕಾ ಪಂಚಾಯತ ಕಾರ್ಯನಿವಾಹಣಾಧಿಕಾರಿಗಳಾದ ಸುರೇಶ ನಾಯ್ಕ ಮಾತನಾಡ್ತಿ ಬೋಧಕರು ಉತ್ತಮ ತರಬೇತಿಯನ್ನು ಪಡೆದುಕೊಂಡಾಗ ಮಾತ್ರ ಕಲಿಕೆ ಫಲಪ್ರಧವಾಗುತ್ತದೆ. ನೀವೆಲ್ಲಾ ಉತ್ತಮವಾದ ತರಬೇತಿಯನ್ನು ಪಡೆಯಿರಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಕಾಸರಕೋಡ ಗ್ರಾಮ ಪಂಚಾಯತ ಅಧ್ಯಕ್ಷರಾದ ದಿಲ್ಶಾದ ಲಂಗಡೆ, ತಾಲೂಕಾ ಪಂಚಾಯತ ಸದಸÀ್ಯರಾದ ಮೀರಾ ತಂಡೇಲ್, ಉಪಾಧ್ಯಕ್ಷರಾದ ಗೌರಿ ಅಂಬಿಗ, ಮುಗ್ವಾ ಗ್ರಾಮ ಪಂಚಾಯತ ಸದಸ್ಯರಾದ ಮೀರಾ ನಾಯ್ಕ, ಸಂಪನ್ಮೂಲ ವ್ಯಕ್ತಿಗಳಾದ ಭುವನೆಶ್ವರಿ ಗೌಡ ಉಪಸ್ಥಿತದ್ದರು.
ತರಬೇತಿ ಕಾರ್ಯಾಗಾರದಲ್ಲಿ ಕಾಸರಕೋಡ, ಮುಗ್ವಾ, ಹೆರಂಗಡಿ ಪಂಚಾಯತ ವ್ಯಾಪ್ತಿಗೆ ಒಳಪಟ್ಟ ಬೋಧಕರು ಹಾಜರಿದ್ದರು. ಪ್ರಾರಂಭದಲ್ಲಿ ತಾಲೂಕಾ ಸಾಕ್ಷರತಾ ಸಂಯೋಜಕರಾದ ಸಾಧನಾ ಬರ್ಗಿ ಸ್ವಾಗತಿಸಿದರು. ತಾಲೂಕಾ ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮವನ್ನು ನಿರ್ವಹಿಸಿದರು.
Leave a Comment