
ಸಿದ್ದಾಪುರ:- ಅಕ್ರಮ ಮರಳುಗಾರಿಕೆ ಹಾಗೂ ಮರಳುಗಾರಿಕೆ ಸಂದರ್ಭದಲ್ಲಿ ಕೃಷಿ ಇಲಾಖೆ ನಿರ್ಮಿಸಿದ ಕಾಲು ಸೇತುವೆ ನಾಶಮಾಡಿದ ಬಗ್ಗೆ ವರದಿ ಪ್ರಕಟಿಸಿದ ಪ್ರಚಲಿತ ಮಾಸ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ನಾಗರಾಜ ನಾಯ್ಕರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಗ್ಗಿಲ್ಲದೆ ನಡೆದಿದೆ ಅಕ್ರಮ ಮರಳುಗಾರಿಕೆ :-
ಕಳೆದ ಹಲವಾರು ವರ್ಷದಿಂದ ನಿರಂತರವಾಗಿ ಸಿದ್ದಾಪುರ ತಾಲೂಕಿನ ವಿವಿಧ ಭಾಗಗಳಲ್ಲಿ ಅಕ್ರಮ ಮರಳುಗಾರಿಕೆ ರಾಜಾರೊಷವಾಗಿ ನಡೆಯುತ್ತಿದೆ. ಕೃಷಿ ಭೂಮಿ ಮತ್ತು ಹೊಳೆ (ನದಿ)ಗಳಲ್ಲಿ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ.
ಕಾಲು ಸೇತುವೆ ನಾಶ- ಜನರಿಗೆ ತೊಂದರೆ :-
ಅಕ್ರಮ ಮರಳುಗಾರಿಕೆಯಿಂದ
2ವರ್ಷಗಳ ಹಿಂದೆ ಮರಳು ತೆಗೆಯಲು ತೊಂದರೆಯಾಗುತ್ತದೆ ಎಂದು ಕೃಷಿ ಇಲಾಖೆ ಅಂದಾಜು 5ಲಕ್ಷ ವೆಚ್ಚದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ನಿರ್ಮಿಸಿದ್ದ ಕಾಲು ಸೇತುವೆಯನ್ನು ಈ ದುರುಳರು ನಾಶಪಡಿಸಿದ್ದರು.
ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆ ಮುರಿದ ಸೇತುವೆಗೆ ಮರದ ತುಂಡನ್ನ ಹಾಕಿ ಉಪಯೋಗಿಸಲಾಗುತ್ತಿದೆ.

ಇಲಾಖೆಯೇ ಪ್ರಕರಣ ದಾಖಲಿಸಿದ್ದರೂ ಆರೋಪಿಗಳ ಪತ್ತೆ ಇಲ್ಲ :-
ಕಾಲು ಸೇತುವೆ ನಾಶ ಪಡಿಸಿದ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕ್ರಷಿ ಇಲಾಖೆಯ ಅಧಿಕಾರಿಗಳು ಪ್ರಕರಣ ಧಾಖಲಿಸಿದ್ದರು. ಆದರೆ ಇಲ್ಲಿಯವರೆಗೂ ಆರೋಪಿಗಳ ಪತ್ತೆ ಇಲ್ಲ ಮಾತ್ರವಲ್ಲದೆ ತಮ್ಮ ಪ್ರಭಾವ ಬಳಸಿ ಆರೋಪಿಗಳು ತಪ್ಪಿಸಿಕೊಂಡು ರಾಜಾರೋಷವಾಗಿ
ತಿರುಗಾಡುತ್ತ ಕಾನೂನಿಗೆ ಸವಾಲು ಹಾಕುತ್ತಿದ್ದಾರೆ.
ವರದಿ ಪ್ರಕಟ – ಬೆದರಿಕೆ :-
ಈ ಕುರಿತು ಪ್ರಚಲಿತ ಮಾಸ ಪತ್ರಿಕೆಯಲ್ಲಿ ಪತ್ರಕರ್ತ ನಾಗರಾಜ ನಾಯ್ಕ ವಿವರವಾದ ವರದಿ ಮಾಡಿದ್ದರು.
ಇದರಿಂದ ಕೋಪಗೊಂಡ ಅಕ್ರಮ ಮರಳುಗಾರಿಕೆಯವರು ನಾಗರಾಜ ನಾಯ್ಕರಿಗೆ ಪೋನ್ ನಲ್ಲಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಪ್ರಕರಣ ದಾಖಲು :-
ಲೀಡ್ ಇಂಡಿಯಾ ಪಬ್ಲಿಷರ್ಸ್ ಅಸೋಸಿಯೇಷನ್ (ಲೀಫಾ) ಸಂಸ್ಥೆಯ ರಾಜ್ಯ ಕಾರ್ಯಕಾರಣಿ ಸಮೀತಿ ಸದಸ್ಯರು ಆಗಿರುವ ನಾಗರಾಜ ನಾಯ್ಕರಿಗೆ ಬಂದಿರುವ ಬೇದರಿಕೆ ಕರೆಯ ಬಗ್ಗೆ ಈಗಾಗಲೇ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Leave a Comment