• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಕ್ರಮ ಮರಳುಗಾರಿಕೆ ವಿರುದ್ದ ವರದಿ ಮಾಡಿದ ಪ್ರಚಲಿತ ಕಾರ್ಯನಿರ್ವಾಹಕ ಸಂಪಾದಕ ನಾಗರಾಜ ನಾಯ್ಕಗೆ ಬೆದರಿಕೆ – ಪ್ರಕರಣ ದಾಖಲು.

January 3, 2019 by Yogaraj SK Leave a Comment

watermarked IMG 20190103 WA0010 1
ಸಿದ್ದಾಪುರ:-  ಅಕ್ರಮ ಮರಳುಗಾರಿಕೆ ಹಾಗೂ ಮರಳುಗಾರಿಕೆ ಸಂದರ್ಭದಲ್ಲಿ ಕೃಷಿ ಇಲಾಖೆ ನಿರ್ಮಿಸಿದ ಕಾಲು ಸೇತುವೆ ನಾಶಮಾಡಿದ ಬಗ್ಗೆ ವರದಿ ಪ್ರಕಟಿಸಿದ  ಪ್ರಚಲಿತ ಮಾಸ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ನಾಗರಾಜ ನಾಯ್ಕರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಗ್ಗಿಲ್ಲದೆ ನಡೆದಿದೆ ಅಕ್ರಮ ಮರಳುಗಾರಿಕೆ :- 
ಕಳೆದ ಹಲವಾರು ವರ್ಷದಿಂದ ನಿರಂತರವಾಗಿ ಸಿದ್ದಾಪುರ ತಾಲೂಕಿನ ವಿವಿಧ ಭಾಗಗಳಲ್ಲಿ ಅಕ್ರಮ ಮರಳುಗಾರಿಕೆ ರಾಜಾರೊಷವಾಗಿ  ನಡೆಯುತ್ತಿದೆ. ಕೃಷಿ ಭೂಮಿ ಮತ್ತು ಹೊಳೆ (ನದಿ)ಗಳಲ್ಲಿ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ.
ಕಾಲು ಸೇತುವೆ ನಾಶ- ಜನರಿಗೆ ತೊಂದರೆ :- 
ಅಕ್ರಮ‌ ಮರಳುಗಾರಿಕೆಯಿಂದ
2ವರ್ಷಗಳ ಹಿಂದೆ ಮರಳು ತೆಗೆಯಲು ತೊಂದರೆಯಾಗುತ್ತದೆ ಎಂದು ಕೃಷಿ ಇಲಾಖೆ ಅಂದಾಜು 5ಲಕ್ಷ ವೆಚ್ಚದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ನಿರ್ಮಿಸಿದ್ದ ಕಾಲು ಸೇತುವೆಯನ್ನು ಈ ದುರುಳರು ನಾಶಪಡಿಸಿದ್ದರು.
ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆ ಮುರಿದ ಸೇತುವೆಗೆ ಮರದ ತುಂಡನ್ನ ಹಾಕಿ ಉಪಯೋಗಿಸಲಾಗುತ್ತಿದೆ.
watermarked IMG 20190103 WA0012
ಇಲಾಖೆಯೇ ಪ್ರಕರಣ ದಾಖಲಿಸಿದ್ದರೂ ಆರೋಪಿಗಳ ಪತ್ತೆ ಇಲ್ಲ :- 
ಕಾಲು ಸೇತುವೆ ನಾಶ ಪಡಿಸಿದ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕ್ರಷಿ ಇಲಾಖೆಯ ಅಧಿಕಾರಿಗಳು ಪ್ರಕರಣ ಧಾಖಲಿಸಿದ್ದರು. ಆದರೆ ಇಲ್ಲಿಯವರೆಗೂ  ಆರೋಪಿಗಳ ಪತ್ತೆ ಇಲ್ಲ ಮಾತ್ರವಲ್ಲದೆ  ತಮ್ಮ ಪ್ರಭಾವ ಬಳಸಿ ಆರೋಪಿಗಳು  ತಪ್ಪಿಸಿಕೊಂಡು ರಾಜಾರೋಷವಾಗಿ
ತಿರುಗಾಡುತ್ತ ಕಾನೂನಿಗೆ ಸವಾಲು ಹಾಕುತ್ತಿದ್ದಾರೆ.
ವರದಿ ಪ್ರಕಟ – ಬೆದರಿಕೆ :- 
ಈ ಕುರಿತು ಪ್ರಚಲಿತ ಮಾಸ ಪತ್ರಿಕೆಯಲ್ಲಿ ಪತ್ರಕರ್ತ  ನಾಗರಾಜ ನಾಯ್ಕ ವಿವರವಾದ ವರದಿ ಮಾಡಿದ್ದರು.
ಇದರಿಂದ ಕೋಪಗೊಂಡ ಅಕ್ರಮ ಮರಳುಗಾರಿಕೆಯವರು ನಾಗರಾಜ ನಾಯ್ಕರಿಗೆ ಪೋನ್ ನಲ್ಲಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಪ್ರಕರಣ ದಾಖಲು :- 
ಲೀಡ್ ಇಂಡಿಯಾ ಪಬ್ಲಿಷರ್ಸ್ ಅಸೋಸಿಯೇಷನ್ (ಲೀಫಾ) ಸಂಸ್ಥೆಯ  ರಾಜ್ಯ ಕಾರ್ಯಕಾರಣಿ ಸಮೀತಿ ಸದಸ್ಯರು ಆಗಿರುವ ನಾಗರಾಜ ನಾಯ್ಕರಿಗೆ ಬಂದಿರುವ ಬೇದರಿಕೆ ಕರೆಯ ಬಗ್ಗೆ ಈಗಾಗಲೇ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
watermarked IMG 20190103 WA0011 watermarked IMG 20190103 WA0009

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: SIDDAPURA, Trending Tagged With: 5ಲಕ್ಷ ವೆಚ್ಚದಲ್ಲಿ ಸಾರ್ವಜನಿಕರ ಅನುಕೂಲ, ಅಕ್ರಮ ಮರಳುಗಾರಿಕೆ ವಿರುದ್ದ ವರದಿ, ಕಾಲು ಸೇತುವೆ ನಾಶ, ಕೃಷಿ ಇಲಾಖೆ ಅಂದಾಜು, ಕೃಷಿ ಇಲಾಖೆ ನಿರ್ಮಿಸಿದ, ದೂರವಾಣಿ ಮೂಲಕ ಬೆದರಿಕೆ, ಪ್ರಕರಣ ದಾಖಲಿಸಿದ್ದರೂ ಆರೋಪಿಗಳ ಪತ್ತೆ ಇಲ್ಲ, ಪ್ರಕರಣ ದಾಖಲು, ಪ್ರಚಲಿತ ಕಾರ್ಯನಿರ್ವಾಹಕ ಸಂಪಾದಕ ನಾಗರಾಜ ನಾಯ್ಕ, ಬೆದರಿಕೆ, ಮಾಸ ಪತ್ರಿಕೆಯಲ್ಲಿ ಪತ್ರಕರ್ತ  ನಾಗರಾಜ ನಾಯ್ಕ, ಲೀಡ್ ಇಂಡಿಯಾ ಪಬ್ಲಿಷರ್ಸ್ ಅಸೋಸಿಯೇಷನ್, ಸಿದ್ದಾಪುರ ತಾಲೂಕಿನ ವಿವಿಧ ಭಾಗಗಳಲ್ಲಿ ಅಕ್ರಮ ಮರಳುಗಾರಿಕೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...