
ಹಳಿಯಾಳ:- ಭಾರತೀಯ ಜನತಾ ಪಕ್ಷ ಹಳಿಯಾಳ ತಾಲೂಕಾ ಘಟಕ ವತಿಯಿಂದ ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಮತ್ತು ಜೆಡಿಎಸ್ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಸಚಿವ ಪುಟ್ಟರಾಜ ಶೆಟ್ಟಿ ಭ್ರಷ್ಟಾಚಾರ ವನ್ನು ಖಂಡಿಸಿ ಮತ್ತು ಶಬರಿಮಲೆಯ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಆಕಾಶ ಕೊಟ್ಟಿದ್ದನ್ನು ನಿಷೇಧಿಸಬೇಕಾಗಿ ಆಗ್ರಹಿಸಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಮುಖಂಡ ಮಾಜಿ ಶಾಸಕ ಸುನಿಲ್ ಹೆಗಡೆ ನೇತೃತ್ವದಲ್ಲಿ ಇಲ್ಲಿಯ ಶೀವಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಭಾರತೀಯ ಜನತಾ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾಜಿ ನರಸಾನಿ, ನಗರ ಘಟಕದ ಅಧ್ಯಕ್ಷ ಚನ್ನಬಶವೆಶ್ವರ ಚರಂತಿಮಠ, ವಿ. ಎಂ. ಪಾಟೀಲ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಿಲ್ ಮುತ್ನಾಳೆ, ಪುರಸಭೆ ಸದಸ್ಯ ರಾದ ಉದಯ ಕುಮಾರ್ ಹೂಲಿ, ಸಂತೋಷ್ ಘಟಕಾಂಬಳೆ, ಚಂದ್ರಕಾಂತ್ ಕಮ್ಮಾರ್, ಶಾಂತಾ ಹಿರೇಕರ , ರಾಜೇಶ್ವರಿ ಹಿರೇಮಠ್, ರೂಪಾ ಗಿರಿ, ಸಂಗೀತ ಜಾದವ್, ಮುಖಂಡರಾದ ತುಕಾರಾಮ ಪಟ್ಟೆಕರ್, ಮಂಜುನಾಥ ಪಂಡಿತ್, ರಾಕೇಶ್ ಬಾಂಧೊಢಕರ್, ಸಂತಾನ ಸಾವಂತ್, ರಾಜು ಹಳೂಕರ್, ವಿಜಯಕುಮಾರ ಬೊಬಾಟಿ, ಉಮೇಶ ದೇಶಪಾಂಡೆ, ನಾರಾಯಣ ಅಂತೊೃಳಕರ, ಅನಿಲ ಗಿರಿ, ವಿಶ್ವನಾಥ್ ನಾಯಕೊಜಿ ಇತರರು ಇದ್ದರು.
Leave a Comment