• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನವ್ಯತೆ ಮತ್ತು ದಿವ್ಯತೆಯೊಂದಿಗೆ ಪುನಃ ಪ್ರತಿಷ್ಠಾಮಹೋತ್ಸವಕ್ಕೆ ಸಿದ್ಧವಾಗುತ್ತಿರುವ ಶ್ರೀ ಅಪ್ಸರಕೊಂಡ ಮಠ

January 16, 2019 by Gaju Gokarna Leave a Comment

watermarked hnr 16 PRESS REPORT.

ಹೊನ್ನಾವರ . ತಾಲೂಕಿನ ಅಪ್ಸರಕೊಂಡ ಗ್ರಾಮದಲ್ಲಿರುವ ಶ್ರೀ ಅಪ್ಸರಕೊಂಡ ಮಠವು 1954 ರಲ್ಲಿ ಶ್ರೀ ರಾಮಚಂದ್ರಾಪುರ ಮಠದ 35 ನೆಯ ಪೀಠಾಧಿಪತಿಗಳಾದ ಬ್ರಹ್ಮೀಭೂತ ಪರಮಪೂಜ್ಯ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು ಅಪ್ಸರಕೊಂಡ ಮಠವನ್ನು ಶಾಖಾಮಠವಾಗಿ ಸ್ವೀಕರಿಸಿದರು. ಅಲ್ಲಿಂದ ಅನೇಕ ಪರಿವರ್ತನೆಗಳನ್ನು ದಾಟಿ ಇಂದು ನವ್ಯತೆಯ, ದಿವ್ಯತೆಯ ನಿಸರ್ಗ ಮತ್ತು ಆಧ್ಯಾತ್ಮ ಎರಡನ್ನೂ ಒಳಗೊಂಡ ದೈವೀ ಅನುಭೂತಿ ನೀಡುವ ಧಾರ್ಮಿಕ ಕ್ಷೇತ್ರವಾಗಿ ಆನೇಕ ಭಕ್ತಾದಿಗಳನ್ನು , ಪ್ರವಾಸಿಗರನ್ನು ಸೆಳೆಯುತ್ತಿದೆ.
ಪರಮಪೂಜ್ಯ ಶ್ರೀ ಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಪೀಠಕ್ಕೆ ಬಂದ ನಂತರ ಶ್ರೀ ಮಠದ ದೈವೀನೆಲೆಗಳ ಕಲಾವೃದ್ಧಿಯ ಸಂಕಲ್ಪದಂತೆ, ಮಠಾಯತನ ಪದ್ದತಿಯನುಸಾರ ಶ್ರೀ ಉಗ್ರನರಸಿಂಹ, ಶ್ರೀ ಉಮಾಂಬಾಮಹಾಗಣಪತಿ ಹಾಗೂ ಶ್ರೀ ಗುರುಮೂರ್ತಿಗಳ ಪುನಃ ಪ್ರತಿಷ್ಠಾ ಕಾರ್ಯ ನಡೆಯಲಿದೆ. ನಿಃಶ್ರೇಯಸಿದ್ಧಿಗಾಗಿ ತಪಿಸಿದ ಯತಿವರೇಣ್ಯರಿಂದ ಆರಾಧಿüಸಲ್ಪಟ್ಟ ಶ್ರೀ ಉಗ್ರನರಸಿಂಹ ಇಲ್ಲಿಯ ಕ್ಷೇತ್ರಾಧಿಪತಿ.ಎಡಭಾಗದಲ್ಲಿ ಗಜಪೃಷ್ಠ ವಿನ್ಯಾಸದಲ್ಲಿ ಸಂಪೂರ್ಣ ಶಿಲಾಮಯ ಗರ್ಭಗುಡಿಯಲ್ಲಿ ಮಗುವನ್ನ ಮಡಿಲಲ್ಲಿಟ್ಟುಕೊಂಡ ಜಗಜ್ಜನನಿ ಶ್ರೀ ಉಮಾಂಬಾಮಹಾಗಣಪತಿ ಮಂದಿರ ಲೋಕಾರ್ಪಣೆಯಾಗಲಿದೆ. ನಿಸರ್ಗ ಸೌಂದರ್ಯದ ಮದ್ಯದಲ್ಲಿರುವ ಈ ದಿವ್ಯಸ್ಥಳದಲ್ಲಿ ತಪಸ್ಸನ್ನು ಮಾಡಿ ಲೋಕಹಿತವನ್ನು ಮಾಡಿದ ಪಾವನರಾದ ಗುರುವರ್ಯರಿಗೆ ಶ್ರೀ ಗುರುಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನಡೆಯಲಿದೆ.
ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ವಿಲಂಬ ಸಂವತ್ಸರದ ಪುಷ್ಯ ಶುಕ್ಲ ಏಕಾದಶಿ ದಿನಾಂಕ 17-01-2019 ಗುರುವಾರದಿಂದ ಪುಷ್ಯ ಶುಕ್ಲ ತ್ರಯೋದಶಿ ದಿನಾಂಕ 19-01-2019 ಶನಿವಾರದ ವರೆಗೆ ಸಪರಿವಾರ ಶ್ರೀ ದೇವತಾ ಪ್ರತಿಷ್ಠೆ,ಶಿಖರಕಲಶ ಪ್ರತಿಷ್ಠೆ, ಬ್ರಹ್ಮಕಲಷೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಪುಷ್ಯ ಶುಕ್ಲ ಏಕಾದಶಿ ದಿನಾಂಕ 17-01-2019 ಗುರುವಾರದಂದು ಗುರುದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಮಹಾಸಂಕಲ್ಪ, ಪುಣ್ಯಾಹವಾಚನ, ಮಧುಪರ್ಕ ಬ್ರಹ್ಮಕೂರ್ಚ ಹವನ, ಆಲಯಬಿಂಬ ಪರಿಗ್ರಹ,ನವಚಂಡಿ ಹವನಾಂಗ, ಸಪ್ತಶತಿ ಪಾರಾಯಣ ಪೂರ್ವಾಹ್ನದ ಅವಧಿಯಲ್ಲಿ ನಡೆಯಲಿದೆ. ಸಂಜೆ ಯಾಗಶಾಲಾ ಪ್ರವೇಶ, ಮಂಟಪ ಸಂಸ್ಕಾರ,ಸಪ್ತಶುದ್ಧಿ, ರಾಕ್ಷೋಘ್ನಹವನ , ವಾಸ್ತು ಹವನ, ವಾಸ್ತು ಬಲಿ ನಡೆಯಲಿದೆ. ಸಂಜೆ ಸಪ್ತಕ ಪ್ರಾಯೋಜಕತ್ವದಲ್ಲಿ ಖ್ಯಾತ ಶಾಸ್ತ್ರೀಯ ಗಾಯಕರಾದ ಸುಧಾಮ ದಾನಗೆರೆ ಮತ್ತು ಈ ಭಾಗದ ಶ್ರೇಷ್ಠ ಹೊಂದೂಸ್ತಾನಿ ಗಾಯಕರಾದ ವಿದ್ವಾನ್ ನಾಗವೇಣ ಹೆಗಡೆ ಮುಂತಾದವರಿಂದ ಶಾಸ್ರೀಯ ಸಂಗಿತ ಕಾರ್ಯಕ್ರಮ ನಡೆಯಲಿದೆ.ತಬಲಾದಲ್ಲಿ ಗುರುರಾಜ ಹೆಗಡೆ, ಅನಂತ ಮೂರ್ತಿ ಮತ್ತು ಸಂವಾದಿನಿಯಲ್ಲಿ ಸತೀಶ ಭಟ್ಟ ಸಾಥ ನೀಡಲಿದ್ದಾರೆ.

ಪುಷ್ಯ ಶುಕ್ಲ ದ್ವಾದಶಿ ಶುಕ್ರವಾರ ದಿನಾಂಕ 18-01-2019 ರಂದು ಶ್ರೀಗಳ ದಿವ್ಯಕರಕಮಲಗಳಿಂದ ಸಪರಿವಾರ ಶ್ರೀ ಉಗ್ರನರಸಿಂಹ, ಶ್ರೀ ಉಮಾಂಬಾಮಹಾಗಣಪತಿ ಹಾಗೂ ಶ್ರೀಗುರುಮೂರ್ತಿಗಳ ಪುನರ್ ಪ್ರತಿಷ್ಠೆ ಹಾಗೂ ಶಿಖರ ಕಲಶ ಪ್ರತಿಷ್ಠೆ ನಡೆಯಲಿದೆ. ಸಂಜೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀ ದೇವರಿಗೆ ಕಲಾನ್ಯಾಸ ತತ್ತ್ವಾನ್ಯಾಸ,ಪ್ರಾಣಪ್ರತಿಷ್ಠೆ,ಬ್ರಹ್ಮಕಲಶಸ್ಥಾಪನೆ ನಡೆಯಲಿದ್ದು ಶ್ರೀಗಳಿಂದ ಅನುಗ್ರಹ ಸಭೆ ನಡೆಯಲಿದೆ. ಈ ಸಭಾಕಾರ್ಯಕ್ರಮದಲ್ಲಿ ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷರಾದ ಡಾ.ಗಿರಿಧರ ಕಜೆ,ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಶ್ರೀಮತಿ ಈಶ್ವರಿ ಬೇರ್ಕಡವು ಮತ್ತು ಹೊನ್ನಾವರ ಮಂಡಲದ ಪ್ರಧಾನ ಗುರಿಕಾರರಾದ ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಭಟ್ಟರು ಉಪಸ್ಥಿತರಿರುತ್ತಾರೆ. ಈ ದಿನದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಶ್ರೀ ಶ್ರೀಪಾದಭಟ್ಟ ಕಡತೋಕಾ ಹಾಗೂ ಬಳಗದವರಿಂದ ಗೀತರಾಮಾಯಣ ಪ್ರಸ್ತುತಗೊಳ್ಳಲಿದೆ. ಸಂವಾದಿಯಾಗಿ ಶ್ರಿ ನೀರ್ನಳ್ಳಿ ಗಣಪತಿಯವರಿಂದ ರಾಮಯಣ ದರ್ಶನದ ಚಿತ್ರರಚನೆ ನಡೆಯಲಿದೆ.
ಪುಷ್ಯ ಶುಕ್ಲ ತ್ರಯೋದಶಿ ದಿನಾಂಕ 19-01-2019 ಶನಿವಾರದಂದು ನರಸಿಂಹ ಹವನ, ಪುರುಷಸೂಕ್ತ ಹವನ, ದುರ್ಗಾಶಾಂತಿ, ಮಹಾಪೂರ್ಣಾಹುತಿ, ಬ್ರಹ್ಮಕಲಶಾಭಿಷೇಕ, ಮಹಾಮಂಗಳಾರತಿ ನಡೆಯಲಿದೆ.
ಪ್ರತಿಷ್ಠಾಮಹೋತ್ಸವದ ಈ ಪುಣ್ಯಕಾರ್ಯಕ್ಕೆ ಅಗತ್ಯವುಳ್ಳ ಅಕ್ಕಿ, ಕಾಯಿ, ಬೇ¼,É ಬೆಲ್ಲ ಮುಂತಾದ ಸುವಸ್ತುಗಳನ್ನು ಸಮರ್ಪಿಸುವ ಅವಕಾಶ ಶ್ರೀ ನರಸಿಂಹ ದೇವಾ ಸೇವಾಸಮಿತಿ ನೀಡಿದೆ.
ಪಶ್ಚಿಮದಲ್ಲಿ ಭೋರ್ಗರೆಯುವ ಸಮುದ್ರ ತೀರ, ಪೂರ್ವಕ್ಕೆ ಸಹ್ಯಾದ್ರಿಯ ಶಿಖರ ಶ್ರೇಣ , ಪಕ್ಕದಲ್ಲಿ ತೆಂಗು-ಕಂಗು-ಬಾಳೆಗಳ ಹಸಿರಾದ ನಿಸರ್ಗ ಸೌಂದರ್ಯಮಯ ಮಧ್ಯದಲ್ಲಿ ,ಧಾರ್ಮಿಕ ಕ್ಷೇತ್ರವಾಗಿ ಶ್ರೀ ಅಪ್ಸರಕೊಂಡ ಮಠ ದಿವ್ಯತೆಯ, ಭವ್ಯತೆಯ ಪುಣ್ಯಭೂಮಿಯಾಗಿ ಪರಿವರ್ತನೆಯಾಗಿದೆ. ಈ ಪುಣ್ಯ ಭೂಮಿಯಲ್ಲಿ ಯತಿಶ್ರೇಷ್ಠರು ಆಗಿ ಹೋದ ಕುರುಹುಗಳು ಗುಹೆಯ ರೂಪದಲ್ಲಿ ಅಲ್ಲಲ್ಲಿ ಕಾಣಸಿಗಲಿದೆ. ಅಂತೆಯೇ ನಿಸರ್ಗರಮಣ ೀಯವಾಗಿ ಮಠದ ಸನಿಹದಲ್ಲಿ ಹಾದು ಹೋಗಿ ಜಲಪಾತದಂತೆ ಧುಮುಕುವ ಅಪ್ಸರತಿರ್ಥವು, ಸರ್ವರೋಗಹರವಾಗಿದ್ದು ಅಪ್ಸರೆಯರು ಸ್ನಾನಕ್ಕಾಗಿ ಬರುವ ಕುಂಡವಿದು ಎಂಬ ಪ್ರತೀತಿ ಇದೆ.
ಈ ಎಲ್ಲಾ ಪುಣ್ಯಕಾರ್ಯಗಳಿಗೆ ಶ್ರೀ ಮಠದ ಭಕ್ತಾದಿಗಳು ದಾನಿಗಳು, ಸೇವಾ ಬಿಂದುಗಳು, ಊರ ನಾಗರೀಕರು ತನು, ಮನ, ಧನ ಸೇವೆಗಳೂಂದಿಗೆ ಗುರು ದೇವತಾನುಗ್ರಹಕ್ಕೆ ಪಾತ್ರರಾಗಲು ಅಪ್ಸರಕೊಂಡ ಮಠದ ಶ್ರೀ ನರಸಿಂಹ ದೇವ ಸೇವಾಸಮಿತಿಯ ಅಧ್ಯಕ್ಷರಾದ ಸುಬ್ರಾಯ ಹೆಗಡೆ ್ಯ ಮತ್ತು ಸಮಿತಿಯ ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: nature of spirituality and spirituality, Natya, Sri Apsarcotta Math, Sri Sri Raghaveshwara Bharathi Mahaswamis, the 35th chief of the Ramachandrapura math, which is preparing for the celebration, with the patriarch Shri Madjagadguru Shankaracharya, ದಿವ್ಯತೆಯ ನಿಸರ್ಗ ಮತ್ತು ಆಧ್ಯಾತ್ಮ ಎರ, ನವ್ಯತೆ ಮತ್ತು ದಿವ್ಯತೆಯೊಂದಿಗೆ ಪುನಃ, ನವ್ಯತೆಯ, ಪರಮಪೂಜ್ಯ ಶ್ರೀ ಮದ್ಜಗದ್ಗುರು ಶಂಕರಾಚಾರ್ಯ, ಪ್ರತಿಷ್ಠಾಮಹೋತ್ಸವ, ರಾಮಚಂದ್ರಾಪುರ ಮಠದ 35 ನೆಯ ಪೀಠಾಧಿಪತಿ, ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ಸಿದ್ಧವಾಗುತ್ತಿರುವ ಶ್ರೀ ಅಪ್ಸರಕೊಂಡ ಮಠ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...