• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಂತೂ ಹಳಿಯಾಳದ ತೇರಗಾಂವ ಗ್ರಾಮದಲ್ಲಿ ಅಶ್ವಾರೂಢ ಶೀವಾಜಿ ಮೂರ್ತಿ ಪ್ರತಿಷ್ಠಾಪನೆ- ಸಕಲ ಸಮಾಜದವರು ಕಾರ್ಯಕ್ರಮದಲ್ಲಿ ಭಾಗಿ – ಕೇಸರಿಮಯವಾದ ತೇರಗಾಂವ ಗ್ರಾಮ

January 18, 2019 by Yogaraj SK Leave a Comment

Tergav shivaji murthy pratistapane

ಹಳಿಯಾಳ:- ಎಲ್ಲ ಸಮಾಜದವರು ಒಗ್ಗೂಡಿ ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಎಲ್ಲರಿಗೂ ಮಾದರಿಯಾಗಿದ್ದು, ಮುಂದೆ ಕೂಡ ಎಲ್ಲರೂ ಒಗ್ಗಟ್ಟಾಗಿ ಸಾಮಾಜಿಕ ಕಾರ್ಯಗಳನ್ನು ನೆರವೆರಿಸುವಂತೆ ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಮರಾಠಾ ಜಗದ್ಗುರು ಮಂಜುನಾಥ ಮಹಾರಾಜ ಕರೆ ನೀಡಿದರು.
ತಾಲೂಕಿನ ತೇರಗಾಂವ ಗ್ರಾಮದ ಶ್ರೀ ಛತ್ರಪತಿ ಶಿವಾಜಿ ಟ್ರಸ್ಟ ಕಮೀಟಿ ಹಾಗೂ ಕ್ಷತ್ರೀಯ ಮರಾಠಾ ಸಮಾಜ, ಸಕಲ ಸಮಾಜದವರು ಮತ್ತು ಸಮಸ್ತ ಗ್ರಾಮದ ಸಾರ್ವಜನಿಕರಿಂದ ಗ್ರಾಮದ ಬಸ್ ನಿಲ್ದಾಣ ಸಮೀಪದ ಕೆರೆಯ ಮೇಲೆ ನಿರ್ಮಿಸಲಾದ ಭವ್ಯ ಪೀಠದಲ್ಲಿ ಬೃಹತ್ ಅಶ್ವಾರೂಢ ಶೀವಾಜಿ ಪುಥ್ಥಳಿ ಪ್ರತಿಷ್ಠಾಪನೆ ಕಾರ್ಯದ ಬಳಿಕ ನಡೆದ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಹಿಂದೂ, ಮುಸ್ಲಿಂ, ಕ್ರೀಶ್ಚಿಯನ್, ಜೈನ್ ಹೀಗೆ ಧರ್ಮ, ಜಾತಿ ಭೇದ ಮರೆತು ರಾಷ್ಟ್ರಕ್ಕಾಗಿ ಹೋರಾಡಿದ್ದ ಶೀವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಎಲ್ಲರೂ ಒಂದಾಗಿ ಕಾರ್ಯಕ್ರಮ ಆಯೋಜಿಸಿರುವುದು ಮಾದರಿ ಕಾರ್ಯವಾಗಿದೆ. ತೇರಗಾಂವ ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಜಾತ್ರೆಯಂತೆ ಶೃಂಗಾರಗೊಂಡಿರುವುದು ಸಂತಸದ ವಿಷಯ ಎಂದು ಕಾರ್ಯಕ್ರಮದ ಬಗ್ಗೆ ಸ್ವಾಮಿಜಿಗಳು ಶ್ಲಾಘನೆ ವ್ತಕ್ತಪಡಿಸಿದರು.

Tergav shivaji murthy pratistapane

ದಿನಗಳ ಕಾಲ ಅದ್ದೂರಿಯಾಗಿ ನಡೆದ ಕಾರ್ಯಕ್ರಮ ತಾಲೂಕಿನೆಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಗ್ರಾಮವೆಲ್ಲ ಕೆಸರಿ ಪತಾಕೆಗಳು, ಭಗವಾ ಧ್ವಜ ಹಾಗೂ ತಳಿರು ತೊರಣಗಳಿಂದ ಶೃಂಗರಿಸಲ್ಪಟ್ಟಿದ್ದು ಗ್ರಾಮವೇ ಕೆಸರಿಮಯವಾಗಿ ಜಾತ್ರೆಯ ವಾತಾವರಣ ಸೃಷ್ಟಿಯಾಗಿದೆ. ದಿ.17 ರಂದು ಶಿವಾಜಿ ಮೂರ್ತಿಯ ಭವ್ಯ ಶೋಭಾಯಾತ್ರೆ ಸುಮಾರು 8 ಗಂಟೆಗಳ ಕಾಲ ಸಾವಿರಾರು ಯುವಕರ ಉಪಸ್ಥಿತಿಯಲ್ಲಿ ನಡೆಯಿತು. ದಿ.18 ಶುಕ್ರವಾರದಂದು ತೇರಗಾಂವ ಗ್ರಾಮದೇವಿ ದೇವಸ್ಥಾನದಿಂದ ಸುಮಂಗಲೆಯರಿಂದ ಕುಂಭ ಮೆರವಣ ಗೆ ಬಳಿಕ ರೋಹಿಣ ನಕ್ಷತ್ರ , ಕುಂಭ ಲಗ್ನದಲ್ಲಿ ಸಕಲ ಪೂಜಾ ವಿಧಿ ವಿಧಾನಗಳು, ಹೋಮ ಹವನಗಳನ್ನು ನೆರವೆರಿಸಿ ಶಾಸ್ರೋಕ್ತವಾಗಿ ಶೀವಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

Tergav shivaji murthy pratistapane
ಬಳಿಕ ವೇದಿಕೆ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ, ತೇರಗಾಂವ ಸಂಗೀತ ಬಳಗದಿಂದ ರಸಮಂಜರಿ ಕಾರ್ಯಕ್ರಮಗಳು ನಡೆದವು. ಸುತ್ತಮುತ್ತಲ ಹಳ್ಳಿಗಳು ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಶಿವಾಜಿ ಮಹಾರಾಜರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ತೇರಗಾಂವ ಗ್ರಾಮಕ್ಕೆ ಭೆಟಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಪ್ರಮುಖರಾಜ ಮಂಗಲಾ ಕಶೀಲಕರ, ಎನ್.ಎಸ್.ಜಿವೋಜಿ, ರಾಜು ಧೂಳಿ, ಸಂತೋಷ ರೆಣಕೆ, ವಿಎಮ್ ಘಾಡಿ, ಎನ್.ಜಿ.ಪಾಠನಕರ, ಮಹಾದೇವ ಶಿದಬಾನವರ, ಪ್ರಶಾಂತ ಬಾಳೆಕುಂದ್ರಿ, ದಾವಲಸಾಬ ಶೇಖ, ಶಂಕರ ರೆಣಕೆ, ಸುರೇಶ ಬೆಣಚೆಕರ,ವಿಜಯ ಶಿಂಧೆ, ಮಾರುತಿ ಬೊಸ್ಲೆ ಮೊದಲಾದವರು ಇದ್ದರು.

Tergav shivaji murthy pratistapane

watermarked IMG 20190118 WA0135 Tergav shivaji murthy pratistapane

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Trending, Haliyal News Tagged With: all societies participated in the event, and Hariyata Theragam Village, Ashwamurthy Shevajji Murthy Foundation, Chhatrapati Shivaji Trust Committee, Christian, Hindu, Jain etc. Dharma, Kshatriya Maratha Samaj, Maratha Jagadguru Manjunath Maharaja, muslim, Rashtrapuras Shri Chhatrapati Shivaji, Sakala Samaj, the festivals of Shivaji Maharaj, the Theragam village of Kasaragod, ಅಂತೂ, ಅಶ್ವಾರೂಢ ಶೀವಾಜಿ ಮೂರ್ತಿ ಪ್ರತಿಷ್ಠಾಪನೆ, ಕೇಸರಿಮಯವಾದ ತೇರಗಾಂವ ಗ್ರಾಮ, ಕ್ರೀಶ್ಚಿಯನ್, ಛತ್ರಪತಿ ಶಿವಾಜಿ ಟ್ರಸ್ಟ ಕಮೀಟಿ ಹಾಗೂ ಕ್ಷತ್ರೀಯ ಮರಾಠಾ ಸಮಾಜ, ಜಾತಿ ಭೇದ ಮರೆತು ರಾಷ್ಟ್ರಕ್ಕಾಗಿ ಹೋರಾಡಿದ್ದ, ಜೈನ್ ಹೀಗೆ ಧರ್ಮ, ಮರಾಠಾ ಜಗದ್ಗುರು ಮಂಜುನಾಥ ಮಹಾರಾಜ, ಮುಸ್ಲಿಂ, ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ, ಶೀವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ, ಸಕಲ ಸಮಾಜ, ಸಕಲ ಸಮಾಜದವರು ಕಾರ್ಯಕ್ರಮದಲ್ಲಿ ಭಾಗಿ, ಹಳಿಯಾಳದ ತೇರಗಾಂವ ಗ್ರಾಮ, ಹಿಂದೂ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...