ಹಳಿಯಾಳ: ಉದಯೋನ್ಮೂಖ ಕಬ್ಬಡ್ಡಿ ಪಟು ಓರ್ವ ಇತ್ತೀಚೆಗೆ ಸಿದ್ದಾಪುರದಲ್ಲಿ ನಡೆದ ಕಬ್ಬಡ್ಡಿ ಸ್ಪರ್ದೆಯಾಡುವ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಚಿಕಿತ್ಸೆಗಾಗಿ ಪಾಲಕರು-ಕ್ರೀಡಾಪ್ರೇಮಿಗಳು, ಗೌಳಿ ಸಮುದಾಯದವರು ಆರ್ಥಿಕ ಸಹಾಯಕ್ಕಾಗಿ ಸಾರ್ವಜನೀಕರ ಮೊರೆ ಹೊಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ತಟ್ಟಿಗೇರಾ ಗ್ರಾಮ ಪಂಚಾಯತ ವ್ಯಾಪ್ತಿಯ ಅಡಿಕೆಹೊಸೂರು ಗೌಳಿವಾಡಾ ಗ್ರಾಮದ 17 ವರ್ಷ ವಯಸ್ಸಿನ ಕ್ರೀಡಾಪಟು ಬಾಗು ಬಾಬು ಎಡಗೆ ಎಂಬುವವನೇ ಆಟದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉದಯೋನ್ಮೂಖ ಕ್ರೀಡಾಪಟುವಾಗಿದ್ದಾನೆ.
ಹಳಿಯಾಳದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ವ್ಹಿ.ಡಿ. ಹೆಗಡೆ ಕಾಲೇಜಿನಲ್ಲಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿರುವ ಇತ ಉತ್ತಮ ಕಬಡ್ಡಿ ಆಟಗಾರನಾಗಿದ್ದಾನೆ.
ಜ.6 ರಂದು ಸಿದ್ಧಾಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಕಿರಿಯರ ಕಬಡ್ಡಿ ತಂಡಕ್ಕೆ ಉತ್ತರಕನ್ನಡ ಜಿಲ್ಲೆಯಿಂದ ಪ್ರತಿಭಾವಂತ ಕಬಡ್ಡಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಬೆನ್ನು ಮುಳೆ ಭಾಗದಲ್ಲಿ ತೀವೃತರವಾದ ಪೆಟ್ಟು ಬಿದ್ದಿರುವ ಕಾರಣ ಶಸ್ತ್ರಚಿಕಿತ್ಸೆಗಾಗಿ ಲಕ್ಷಾಂತರ ರೂ. ಖರ್ಚಾಗಲಿದೆ ಎಂದು ಹೇಳಿದ್ದು ಬಡ ಪಾಲಕರನ್ನು ದಂಗುಬಡಿಸಿದೆ.
ಈಗಾಗಲೇ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸೂರಜ ನಾಯ್ಕ ಸೋನಿ, ತಾಲೂಕಾ ಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ, ವಿಆರ್‍ಡಿಎಂ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಆಸ್ಪತ್ರಗೆ ಭೇಟಿ ನೀಡಿದ್ದು ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ಇನ್ನೂ ಬಡಕುಟುಂಬದ ಈ ಹುಡುಗನ ಚಿಕಿತ್ಸೆಗೆ ನೆರವಾಗುವಂತೆ ಗೌಳಿ ಸಮುದಾಯದವರು ಹಾಗೂ ಆತನ ಕುಟುಂಬದವರು ಪ್ರಾರ್ಥಿಸಿದ್ದು ಸಹಾಯ ಮಾಡಲಿಚ್ಛಿಸುವರು ಬಾಬು ರಾಮು ಎಡಗೆ ಇವರ ಉಳಿತಾಯ ಖಾತೆ ಸಂಖ್ಯೆ: 03482210011120 ಸಿಂಡಿಕೇಟ್ ಬ್ಯಾಂಕ್ ಸಾಂಬ್ರಾಣ ಶಾಖೆ (ತಾ: ಹಳಿಯಾಳ) ಐಎಫ್‍ಎಸ್‍ಸಿ ಕೋಡ್: ಎಸ್‍ವೈಎನ್‍ಬಿ0000348ಗೆ ಆರ್ಥಿಕ ಸಹಾಯ ತಲುಪಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಮುಖರಾದ ಸುಭಾಷ ಕಾಮ್ರೇಕರ 9741888190, 9480628073 ಹಾಗೂ ವಿಠ್ಠಲ 9632197128 ಇವರನ್ನು ಸಂಪರ್ಕಿಸಲು ಕೊರಿದ್ದಾರೆ.
Leave a Comment