ಕಾರವಾರ:- ವರ್ಷಕ್ಕೊಮ್ಮೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕುರ್ಮಗಡದಲ್ಲಿ ನಡೆಯುವ ನರಸಿಂಹ ದೇವರ ಜಾತ್ರೆಗೆ ಭಕ್ತಾದಿಗಳು ತೆರಳುತ್ತಿದ್ದ ಬೊಟ್ ಮುಗುಚಿದ ಪರಿಣಾಮ ಸುಮಾರು ೧೦ ಕ್ಕೂ ಅಧಿಕ ಜನ ಅಸುನಿಗಿದ್ದು ಇನ್ನೂ ೧೦ ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿದೆ.
ಜಾತ್ರೆ ಪ್ರಯುಕ್ತ ಕಾರವಾರ ಹಾಗೂ ಹೊರ ರಾಜ್ಯಗಳಿಂದ ಬಂದ ಭಕ್ತರು ದೋಣಿಯ ಮೂಲಕ ಪ್ರಯಾಣ ಬೆಳೆಸಿದ್ದರು. ಆದರೇ ವಿಧಿಯಾಟವೇ ಬೆರೆ ಆಗಿತ್ತು
ಭಕ್ತರನ್ನು ತುಂಬಿಕೊಂಡು ಸಾಗುತ್ತಿದ್ದಾಗ ದೋಣಿ ಮುಗುಚಿದ್ದರಿಂದ ಸಾಲು ಸಾಲು ಭಕ್ತರು ಜಲ ಸಮಾಧಿಯಾಗಿದ್ದಾರೆ. ಎಷ್ಟು ಭಕ್ತರು ನೀರುಪಾಲಾಗಿದ್ದಾರೆ ಎಂಬ ಖಚಿತ ಮಾಹಿತಿ ತಿಳಿದು ಬರಬೇಕಿದೆ.
ಇನ್ನೂ ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಅವರು ಆರು ಜನ ಭಕ್ತರನ್ನು ರಕ್ಷಣೆ ಮಾಡಿದ್ದಾರೆಂದು ವರದಿಯಾಗಿದೆ.
ರೂಪಾಲಿ ಅವರು
ದೇವರ ದರ್ಶನಕ್ಕೆ ಪ್ರತ್ಯೇಕ ದೋಣಿಯಲ್ಲಿ ತೆರಳುತ್ತಿದ್ದರು.
ಅವಘಡವನ್ನು ಕಂಡ ಅವರು
ತಕ್ಷಣದಲ್ಲಿ ತಮ್ಮ ದೋಣಿ ಸಹಾಯದಿಂದ ಆರು ಭಕ್ತರನ್ನು ರಕ್ಷಣೆ ಮಾಡಿದ್ದಾರೆನ್ನಲಾಗಿದೆ..
ಇನ್ನೂ ನೀರಿನಿಂದ ರಕ್ಷಣೆ ಮಾಡಿದವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದ್ದು..
ಕಣ್ಮರೆಯಾದವರ ರಕ್ಷಣಾ ಕಾರ್ಯ ಭರದಿಂದ. ಸಾಗಿದೆ..
ರಾಜ್ಯದಲ್ಲಿ ಒಂದೆಡೆ ತ್ರಿವಿಧ ದಾಸೋಹಿ , ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಯವರನ್ನು ಕಳೆದುಕೊಂಡು ದುಃಖದಲ್ಲಿರುವ ಜನತೆಗೆ ಕಾರವಾರದ ಈ ದೊಡ್ಡ ದುರಂತಹ ಇನ್ನಷ್ಟು ನೊವು ತಂದಿದೆ.
ರಕ್ತ ಚಂದ್ರಗ್ರಹಣದ ಸೋಮವಾರ ದಿನ ರಾಜ್ಯದ ಪಾಲಿಗೆ ಕರಾಳ ದಿನವಾಗಿ ಪರಿಣಮಿಸಿರುವುದು ಅಷ್ಟೇ ಸತ್ಯ.
Leave a Comment