ಹಳಿಯಾಳ:- ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕ ಯೋಗಿ, ಶತಾಯುಷಿ ತುಮಕೂರಿನ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಹಳಿಯಾಳ ಪಟ್ಟಣದಲ್ಲಿ ಭಕ್ತಿಪೂರ್ವಕ ನಮನ ಸಲ್ಲಿಸಲಾಯಿತು.
ಪಟ್ಟಣದ ಶೀವಾಜಿ ವೃತ್ತದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೆಣದ ಬತ್ತಿಗಳನ್ನು ಬೆಳಗಿಸಿ ಶಿವೈಕ್ಯರಾದ ಪರಮಪೂಜ್ಯರಿಗೆ ಒಂದು ನಿಮಿಷದ ಮೌನಾಚರಣೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ವಿಲಾಸ ಕಣಗಲಿ, ಶಿರಾಜ ಮುನವಳ್ಳಿ, ಕರ್ನಾಟಕ ರಕ್ಷಣಾ ವೇದಿಕೆಯ ಬಸವರಾಜ ಬೆಂಡಿಗೆರಿಮಠ, ಚಂದ್ರಕಾಂತ ಗೊಂಧಳಿ, ಲಾಯನ್ಸ್ ಕ್ಲಬ್ ನ ಹಿರೆಮಠ, ಕ್ಷತ್ರೀಯ ಮರಾಠಾ ಮಹಿಳಾ ಮಂಡಳ, ಜೀಜಾಮಾತಾ ಸಂಘದ ಭಾರತಿ ಬಿರ್ಜೆ, ಶಾಂತಾ ಹಿರೆಕರ, ಪತ್ರಕರ್ತರು, ಪಿಎಸ್ ಐ ಆನಂದಮೂರ್ತಿ , ಮಂಜುನಾಥ ಸ್ವಾಮಿ ಹೀಗೆ ಹಲವರು ಭಾಗವಹಿಸಿ ಶ್ರೀಗಳಿಗೆ ಶೃದ್ದಾಂಜಲಿ ಸಲ್ಲಿಸಿದರು.
” ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ
ಕೂಡಲಸಂಗಮದೇವಯ್ಯಾ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ……..
Leave a Comment