ಹೊನ್ನಾವರ: ನವೋದಯ ಪ್ರಕಾಶನ, ಚಿತ್ರದುರ್ಗ ಇವರು ನಡೆಸುವ ನವೋದಯ ಕನ್ನಡ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಸ್ಥಳೀಯ ನ್ಯೂ ಇಂಗ್ಲಿಷ ಸ್ಕೂಲ್‍ನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ. ಪರೀಕ್ಷೆ ಬರೆದ ಎಲ್ಲಾ ಪ್ರೌಢಶಾಲೆಯ 158 ವಿದ್ಯಾರ್ಥಿಗಳು ಮತ್ತು ಪ್ರಾಥಮಿಕ ವಿಭಾಗದ 80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 100 % ಫಲಿತಾಂಶ ಬಂದಿರುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಹರ್ಷ ಭಟ್ಟ ಮತ್ತು ಗೀತಾ ಎಸ್. ಬರ್ಗಿ ಮಾರ್ಗದರ್ಶನ ಮಾಡಿದ್ದರು.
ಪ್ರಾಥಮಿಕ ವಿಭಾಗದಲ್ಲಿ ಧರಣ , ಅಜಯ, ಭಾವನಾ ತಾಲೂಕಾ ರ್ಯಾಂಕ್‍ಗಳನ್ನು, ತೇಜಸ್ವಿನಿ, ಸುಮನ್, ತರುಣ್, ರೋಹಿತ್ ಜಿಲ್ಲಾ ರ್ಯಾಂಕ್‍ಗಳನ್ನು, ಸುದೀಪ್ ರಾಜ್ಯ ರ್ಯಾಂಕ್ ಪಡೆದಿರುತ್ತಾರೆ. ಹಾಗೆ ಪ್ರೌಢಶಾಲಾ ವಿಭಾಗದಲ್ಲಿ ಶ್ರೀನಿಧಿ, ರಕ್ಷಿತಾ, ನಿಶಾ, ಕವನಾ, ವಾಣ , ಸನಾ, ಐಶ್ವರ್ಯ, ಮೋನಿಷಾ ತಾಲೂಕಾ ರ್ಯಾಂಕ್‍ಗಳನ್ನು, ಇನಿ, ಅನುಷಾ, ನಯನಾ, ಸವಿತಾ, ವೇದಾ, ತೇಜಸ್ವಿನಿ, ಮನಸ್ವಿ ಜಿಲ್ಲಾ ರ್ಯಾಂಕ್‍ಗಳನ್ನು, ಸ್ವಾತಿ ಹೆಗಡೆ ರಾಜ್ಯ ರ್ಯಾಂಕ್ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಮುಖ್ಯೋಪಾಧ್ಯಾಯರು, ಶಿಕ್ಷಕರು, ಆಡಳಿತ ಮಂಡಳಿಯ ಸದಸ್ಯರು, ಶಾಲಾ ಸಿಬ್ಬಂದಿಗಳು ಅಭಿನಂದಿಸಿರುತ್ತಾರೆ.
Leave a Comment