ಹೊನ್ನಾವರ: ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 40 ಕಂಪ್ಯೂಟರ್ ಇರುವ ಸುಸಜ್ಜಿತ ಲ್ಯಾಬ್ನ್ನು ಶಾಲೆಯ ಪೂರ್ವ ವಿದ್ಯಾರ್ಥಿ ಪಿ.ಬಿ. ಶಾನಭಾಗ್ ಸಿಂಧಾನಿ ಕಾಸರಕೋಡ ಇವರು ತಮ್ಮ ದೊಡ್ಡಪ್ಪ ಮಾದೇವ ಸ್ವಾಮಿ, ಪೂರ್ವಾಶ್ರಮದ ಹೆಸರು ಮಾಧವ ಶಾನಭಾಗ್ ಸಿಂಧಾನಿ ನೆನಪಿನಲ್ಲಿ ಕೊಡುಗೆಯಾಗಿ ನೀಡಿದ್ದಾರೆ.
ಉದ್ಯಮಿ ಕೇಶವ ಎಲ್. ಶಾನಭಾಗ ಸರಾಫ ದೀಪ ಹಚ್ಚಿ ಉದ್ಘಾಟಸಿ ಶುಭ ಕೋರಿದರು.
ಪಿ.ಬಿ ಶಾನಭಾಗ್ ಮಾತನಾಡಿ 1957-58 ನೇ ಸಾಲಿನಲ್ಲಿ ತಾನು ಕಲಿತ ಶಾಲೆಯ ನೆನಪು ಮಾಡುತ್ತಾ ಮಾದೇವ ಸ್ವಾಮಿಯವರ ಜೀವನಗಾಥೆ ವಿವರಿಸಿ ಶಾಲೆಯ ತನ್ನ ನಡುವಿನ ಅನ್ಯೋನ್ಯತೆಯನ್ನು ಭಾವನಾತ್ಮಕವಾಗಿ ಬಣ ್ಣಸಿದರು.
ಸಂಸ್ಥೆಯ ಅಧ್ಯಕ್ಷರಾದ ಜೆ.ಟಿ ಪೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧ್ಯಾಪಕರು ವಿ.ಎಸ್ ಅವಧಾನಿ ಸ್ವಾಗತಿಸಿದರು. ಶಿಕ್ಷಕ ಎಲ್.ಜಿ. ಭಟ್ ವಂದಿಸಿದರು. ಅಶೋಕ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ- ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾeರಿದ್ದರು.
Leave a Comment