• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • Story Archives
      • gadgets
      • APPLY LINK

ಹಳಿಯಾಳದ‌ ಜಿಲ್ಲಾ ಕುಸ್ತಿ ಅಖಾಡದಲ್ಲಿ ದಿ.26 ರಿಂದ 28 ರವರೆಗೆ 3 ದಿನಗಳ ಕಾಲ ರಾಜ್ಯ-ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ – 27 ಪ್ರಶಸ್ತಿಗಾಗಿ 500 ಪಟುಗಳಿಂದ ಸೆಣೆಸಾಟ‌.

January 25, 2019 by Yogaraj SK Leave a Comment

Haliyal state , national level kusti sports

ಹಳಿಯಾಳ: ಉತ್ತರ ಕರ್ನಾಟಕದಲ್ಲಿ ಕುಸ್ತಿ ಕ್ರೀಡೆಗೆ ಹೆಸರುವಾಸಿಯಾಗಿರುವ ಕುಸ್ತಿ ಪಟುಗಳ ತವರೂರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಜನವರಿ 26ರಿಂದ 28ರವರೆಗೆ ಮೂರು ದಿನಗಳ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಗಳು ಪಟ್ಟಣದ ಜಿಲ್ಲಾ ಕುಸ್ತಿ ಅಖಾಡದಲ್ಲಿ ನಡೆಯಲಿದ್ದು ಮಹಿಳೆಯರು ಸೇರಿ 500 ಕುಸ್ತಿ ಪಟುಗಳು ಕುಸ್ತಿಯ ರಸದೌತನ ಹಳಿಯಾಳಿಗರಿಗೆ ಉಣಬಡಿಸಲಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದ ಎದುರಿಗಿನ ಮೊತಿಕೆರೆಯ ದಡದಲ್ಲಿರುವ ಜಿಲ್ಲಾ ಕುಸ್ತಿ ಅಖಾಡದಲ್ಲಿ ಮೂರು ದಿನಗಳ ಕಾಲ ಒಟ್ಟೂ 27 ಟೈಟಲ್‍ಗಾಗಿ ರಾಜ್ಯ, ರಾಷ್ಟ್ರಮಟ್ಟದ ಜಟ್ಟಿಗಳು ಸೆಣೆಸಾಟ ನಡೆಸಲಿದ್ದು 18 ಲಕ್ಷಕ್ಕೂ ಅಧಿಕ ಬಹುಮಾನವನ್ನು ಘೋಷಿಸಲಾಗಿದೆ ಎಂದು ಕುಸ್ತಿ ತರಬೇತುದಾರ ಯಶವಂತ ಸ್ವಾಮೀಜಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆರವರ ಅಧ್ಯಕ್ಷತೆಯಲ್ಲಿಯ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಕರ್ನಾಟಕ ರಾಜ್ಯ ಕುಸ್ತಿ ಅಸೋಸಿಯೇಶನ್‍ನ ಜಂಟಿ ಆಶ್ರಯದಲ್ಲಿ ದಿ.ವಿಶ್ವನಾಥರಾವ್ ರಘುನಾಥರಾವ್ ದೇಶಪಾಂಡೆ ಸ್ಮರಣಾರ್ಥ ಪ್ರತಿವರ್ಷ ಈ ಪಂದ್ಯಾವಳಿ ಆಯೋಜಿಸಲಾಗುತ್ತಿದೆ.
ವಿವಿಧ ವಿಭಾಗದಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಗಳ ವಿವರ :-
ಮಹಾನ್ ಭಾರತ್ ಕೇಸರಿ:- ಪುರುಷರ ವಿಭಾಗದಲ್ಲಿ(75 ಕೆ.ಜಿ. ಮೆಲ್ಪಟ್ಟ) ರಾಷ್ಟ್ರ ಮಟ್ಟದ ಮಹಾನ್ ಕೇಸರಿ ಪ್ರಶಸ್ತಿಗಾಗಿ ಮೊದಲ ಬಹುಮಾನ 2.25ಲಕ್ಷ ನಗದು ಬಂಗಾರದ ಪದಕ, ಹಾಗೂ ಬೆಳ್ಳಿ ಗದೆ, ದ್ವೀತಿಯ ಬಹುಮಾನ, 1.10ಲಕ್ಷ.ರೂ ನಗದು, ಬೆಳ್ಳಿ ಪದಕ ಹಾಗೂ 3, 4ನೇ ಬಹುಮಾನ ತಲಾ 55ಸಾವಿರ ರೂ. ಮತ್ತು ಕಂಚಿನ ಪದಕ.
ರಾಷ್ಟ್ರ ಮಟ್ಟದ ವೀರ ರಾಣ ಕಿತ್ತೂರ ಚನ್ನಮ್ಮಾ:– ಈ ಪ್ರಶಸ್ತಿಗಾಗಿ 55 ಕೆ.ಜಿಗಿಂತ ಮೆಲ್ಪಟ್ಟ ಮಹಿಳಾ ವಿಭಾಗದಲ್ಲಿ ಪ್ರಥಮ 50 ಸಾವಿರ ರೂ., ದ್ವೀತಿಯ 25 ಸಾವಿರ ರೂ. ಮೂರನೇಯ ಮತ್ತು ನಾಲ್ಕನೆಯ ಸ್ಥಾನ ತಲಾ 15 ಸಾವಿರ ರೂ. ನಿಡಲಾಗುವುದು.
ಓನಕೆ ಓಬವ್ವಾ ಕರ್ನಾಟಕ ಕೇಸರಿ ಪ್ರಶಸ್ತಿ:- 55 ಕೆ.ಜಿ. ವಿಭಾಗದ ಮೇಲ್ಪಟ್ಟ ಈ ವಿಭಾಗದಲ್ಲಿ ವಿಜೇತರಿಗೆ 25 ಸಾವಿರ ರೂ. ದ್ವೀತಿಯ ಸ್ಥಾನ 15ಸಾವಿರ ರೂ. ಹಾಗೂ 3 ಮತ್ತು 4ನೇಯ ಸ್ಥಾನದಲ್ಲಿ ತಲಾ 10 ಸಾವಿರ ನಗದು.
ರಾಜ್ಯ ಮಟ್ಟದ ಮುಕ್ತ ಕುಸ್ತಿಗಳು:
ಕರ್ನಾಟಕ ಕಂಠೀರವ ಪ್ರಶಸ್ತಿ :- 74ಕೆ.ಜಿ. ವಿಭಾಗದಲ್ಲಿ 75 ಸಾವಿರ, ದ್ವಿತೀಯ 40ಸಾವಿರ, ತೃತೀಯ 20 ಸಾವಿರ. ಕರ್ನಾಟಕ ಕೇಸರಿ:- 74ಕೆ.ಜಿ ವಿಭಾಗದಲ್ಲಿ 50ಸಾವಿರ ಪ್ರಥಮ, 25ಸಾವಿರ ದ್ವಿತೀಯ, 15ಸಾವಿರ ತೃತೀಯ. ಕರ್ನಾಟಕ ಕುಮಾರ:- 70 ಕೆ.ಜಿ. ವಿಭಾಗದಲ್ಲಿ 35ಸಾವಿರ ಪ್ರಥಮ, 18ಸಾವಿರ ದ್ವಿತೀಯ, 12ತೃತೀಯ.
ಕರ್ನಾಟಕ ಕಿಶೋರ ಇಲ್ಲಿ 65 ಕೆಜಿ ವಿಭಾದದಲ್ಲಿ ಪ್ರಥಮ 20 ಸಾವಿರ, ದ್ವಿತೀಯ 15ಸಾವಿರ, ತೃತೀಯ 10ಸಾವಿರ ಹಾಗೂ 61 ಕೆ.ಜಿ. ವಿಭಾಗದಲ್ಲಿ ಕರ್ನಾಟಕ ಚಾಂಪಿಯನ್ ಪ್ರಶಸ್ತಿಗಾಗಿ ಪ್ರಥಮ 15ಸಾವಿರ,ದ್ವಿತೀಯ 10ಸಾವಿರ, ತೃತೀಯ 8ಸಾವಿರ ಬಹುಮಾನ ನಿಗದಿಪಡಿಸಲಾಗಿದೆ.
ಜೂನಿಯರ್ ವಿಭಾಗ: ಪುರುಷರ ಹಾಗೂ ಮಹಿಳೆಯರ ವಿಭಾದಲ್ಲಿ 29,32,35,38,42,48,51,55,ಕೆ.ಜಿ ವಿಭಾಗದಲ್ಲಿ ಕುಸ್ತಿ ನಡೆಸಲಾಗುವುದು.
ದೇಹ ತೂಕ(17 ವರ್ಷ ಒಳಗಿನ) ಕಿರಿಯ ಪೈಲ್ವಾನರ ಮತ್ತು ಬಾಲಕಿಯರ ದೇಹದ ತೂಕವನ್ನು ಜ.26ರಂದು ಬೆಳಿಗ್ಗೆ 9ರಿಂದ 11ಘ.ವರೆಗೆ ನಡೆಸಲಾಗುವುದು ಮೊದಲ ಹಂತದ ಕುಸ್ತಿಗಳು ಮ್ಯಾಟ್ ಮೆಲೆ ನಡೆದರೆ. ಅಂತಿಮ ಹಂತದ ಜಂಗೀ ಕುಸ್ತಿಗಳು ಮಣ ್ಣನ ಮೇಲೆ ನಡೆಸಲಾಗುವುದು ಎಂದು ಯಶವಂತ ಸ್ವಾಮಿ ತಿಳಿಸಿದರು.
Haliyal state , national level kusti sports

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: 1.10 Lacs Cash, 2.25 Lakh Cash, 500 crores Ti-field athletes, 55 thousand, at the banks of Motikere, Deshpande commemorates each year, First Prize, flood lighting, Gold Medal, Haliyal state, haliyalada the wrestling arena, home town of the superstars of wrestling, Karnataka Kanteerava Award, national level kusti sports, National Level Sakshi Award, National Level Veera Rana Kittur Chinnamma, Omka Obavva Karnataka Kesari Award, rasadautana wrestling, Second Prize, senesata., Silver Medal and 3 4th prize, Silver Strike, the 26 to 28 for 3 days until the state and national levels, the 27 500 runners for the title, wrestling arena, wrestling coach Yashwant Swamiji, wrestling sport in North Karnataka, wrestling tournament, Wrestling tournaments details

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Olive Ridley Turtles Honavar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬೃಹತ್ ನೇಮಕಾತಿ 2023 Central Bank of India Huge Recruitment 2023 Apply Online for 5000 Posts

March 23, 2023 By Sachin Hegde

KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today

March 21, 2023 By Sachin Hegde

ದನದ ಮಾಂಸ ಸಾಗಾಟ ಉಪನ್ಯಾಸಕನ ಪ್ರಾಚಾರ್ಯ ಬಂಧನ

March 20, 2023 By Sachin Hegde

ಭಾರತೀಯ ವಾಯುಪಡೆ ನೇಮಕಾತಿ 2023 Indian airforce new Recruitment 2023 Apply Online for Agniveervayu Posts

March 19, 2023 By Sachin Hegde

ಶ್ರೀ ಸತ್ಯಸಾಯಿ ಕರಿಕಾನ ಪರಮೇಶ್ವರಿ ಆಂಗ್ಲ ಮಾಧ್ಯಮ ಶಾಲೆ ನೇಮಕಾತಿ 2023

March 19, 2023 By Sachin Hegde

ಕರ್ನಾಟಕ ಅರಣ್ಯ ಇಲಾಖೆ ಆನೆ ಕವಾಡಿಗ ನೇಮಕಾತಿ 2023 KFD New recruitment 2023 – Apply for Ane Kavadiga posts

March 18, 2023 By Sachin Hegde

© 2023 Canara Buzz · Contributors · Privacy Policy · Terms & Conditions · Member of Digital Avatar

 

Loading Comments...