ೂನ್ನಾವರ: `ಶ್ರೀರಾಮ ಮಂತ್ರ ಪಠಣೆಯಿಂದ ವಿಶೇಷ ಶಕ್ತಿ ಪ್ರಾಪ್ತಿಯಾಗುತ್ತದೆ’ ಎಂದು ಶ್ರೀ ಜ್ಞಾನೇಶ್ವರೀ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ತಾಲೂಕಾ ದೈವಜ್ಞ ವಾಹಿನಿ, ತಾಲೂಕಾ ದೈವಜ್ಞ ಮಾತೃವಾಹಿನಿಯ ಸಂಯುಕ್ತ ಆಶ್ರಯದಲ್ಲಿ ಶ್ರೀ ಕ್ಷೇತ್ರ ಕರ್ಕಿ ಶ್ರೀ ಜ್ಞಾನೇಶ್ವರೀ ಸಭಾಭವನದಲ್ಲಿ ಭಾನುವಾರ ನಡೆದ ವಾಹಿನಿಯ 12ನೇ ಸಮಾವೇಶದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚ ನೀಡಿದರು. ನಮ್ಮ ಸಮಾಜಕ್ಕೆ ಶ್ರೀರಾಮನ ಕೃಪೆ ದೊರೆಯಬೇಕು. ಅದಕ್ಕಾಗಿ ಶ್ರೀರಾಮ ಜಯ ರಾಮ ಮಂತ್ರದ ದೀಕ್ಷೆಯನ್ನು ಸಾಮೂಹಿಕವಾಗಿ ನೀಡಿ, ಶ್ರೀರಾಮ ಕೋಟಿ ಜಪಕ್ಕೆ ಚಾಲನೆ ನೀಡಿದರು.
ಸಮಾವೇಶದಲ್ಲಿ ಮುಂದಿನ ಯೋಚನೆ, ಯೋಜನೆ ಕುರಿತು ಚಿಂತನ-ಮಂಥನ ನಡೆಯುತ್ತಿದೆ. ಶ್ರೀಮಠದ ಕಾರ್ಯಕ್ಕೆ ಎಲ್ಲರೂ ತಮ್ಮ ಕಾರ್ಯವೆಂದು ಭಾಗಿಯಾಗಬೇಕು. ಶ್ರೀರಾಮ ಮಂತ್ರ ಜಪಿಸುವುದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಮುಂದಿನ ಪೀಳಿಗೆಯವರಿಗೂ ಒಳ್ಳೆಯದಾಗುತ್ತದೆ. ಈ ಮಂತ್ರವನ್ನು ಪಠಿಸಿ ಬರೆದಿಡಬೇಕು. ತಿಂಗಳಿಗೊಮ್ಮೆ ಸಾಮೂಹಿಕವಾಗಿ ಪಠಿಸಿ ಗಾಯತ್ರಿ ಮಂತ್ರ ಪಠಿಸಿ ನಂತರ ರಾಮ ಮಂತ್ರ ಪಠಿಸಿದರೆ ಮಂತ್ರದಲ್ಲಿ ವಿಶೇಷ ಶಕ್ತಿ, ಸಾಮಥ್ರ್ಯ ಪ್ರಾಪ್ತಿಯಾಗುತ್ತದೆ. ನಮ್ಮ ಬಗ್ಗೆ ಯಾರು ಏನೇ ಹೇಳಿದರೂ ಕಿವಿಗೊಡದೇ ಸಮಾಜದ ಬದಲಾವಣೆಯೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದರು.
ಸರ್ಕಾರಿ ಪ್ರೌಢ ಶಾಲೆಯ ಅಧ್ಯಾಪಕ ಶ್ರೀಧರ.ಜಿ.ಶೇಟ್ ಶಿರಾಲಿ ಮಾತನಾಡಿ ದೇಶ ವಿದೇಗಳಲ್ಲಿ ಹಂಚಿ ಹೋಗಿರುವ ನಮ್ಮ ಸಮಾಜ ಬಾಂಧವರನ್ನು ಏಕೀಕರಣಗೊಳಿಸಿ ದೈವಜ್ಞ ಬ್ರಾಹ್ಮಣ ಸಮಾಜದ ಕೀರ್ತಿ ನಾಡಿಗೆ ಪಸರಿಸುವಂತೆ ಮಾಡಿದ ಕೀರ್ತಿ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಇವರು ಧನಾತ್ಮಕ ಚಿಂತನೆಗೆ ಪ್ರೇರಣ ನೀಡಿದ್ದಾರೆ. ವಾಹಿನಿಯು ಕ್ರೀಡಾ ಪ್ರತಿಭೆಗೆ, ಸಾಧಕರಿಗೆ ಪುರಸ್ಕಾರ ಹಮ್ಮಿಕೊಂಡಿದೆ. ಈ ಕಾರ್ಯ ಮುಂದಿನ ಪೀಳಿಗೆಗೆ ಫಲ ನೀಡುತ್ತದೆ. ನಮ್ಮ ಮಠ ನಮ್ಮ ಶ್ರೀ ಬಗ್ಗೆ ಅಭಿಮಾನ ಹೊಂದಬೇಕು. ಸದ್ಭಾವನೆ, ಭಕ್ತಿಯಿಂದ ಕಾರ್ಯ ಮಾಡಬೇಕು. ಅಪಪ್ರಚಾರ ಮಾಡಿ ಯಾರೋ ಕಳಿಸಿದ ಮೊಬೈಲ್ ಸಂದೇಶವನ್ನು ಇನ್ನೊಬ್ಬರಿಗೆ ಕಳಿಸುವ ಕಾರ್ಯ ಮಾಡದೇ ಉದಾಸೀನತೆ ತೋರಬೇಕು. ಮಕ್ಕಳಿಗೆ ಮೊಬೈಲ್‍ನಿಂದ ದೂರವಿರಿಸಿ. ಮಕ್ಕಳು ಫೇಸ್‍ಬುಕ್ ಮತ್ತು ತಂದೆ ಪಾಸ್‍ಬುಕ್‍ನಲ್ಲಿ ಕಾಲ ಕಳೆಯಬೇಡಿ. ಸಮಾಜದಿಂದ ಪಡೆದುದನ್ನು ಸಮಾಜದ ಒಳಿತಿಗಾಗಿ ಧಾರೆ ಎರೆಯಿರಿ. ಗಾಳಿಪಟ ಗಗನದೆತ್ತರಕ್ಕೆ ಹಾರುವುದು ಕಾಣುತ್ತೇವೆ. ಸೂತ್ರಧಾರ ಎಳೆದು ಮತ್ತೆ ಬಿಟ್ಟಾಗ ಮತ್ತೆ ಮೇಲಕ್ಕೇರುತ್ತದೆ. ಹಾಗೆ ಮಕ್ಕಳಿಗೆ ಸಂಸ್ಕಾರ ನೀಡಿ ಹದ್ದುಬಸ್ಸಿನಲ್ಲಿಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ. ಚಾಂದನಿ ವಿನಾಯಕ ರಾಯ್ಕರ್ ಮಾತನಾಡಿ ವಿವಿಧ ಕ್ಷೇತ್ರದಲ್ಲಿ ನಮ್ಮ ಸಮಾಜದವರು ಇನ್ನೂ ಹೆಚ್ಚಿನ ಸಾಧನೆ ಮಾಡಿ ಸಮಾಜಕ್ಕೆ ಕೀರ್ತಿ ತನ್ನಿ ಎಂದರು.
ಶ್ರೀ ಸತ್ಯನಾರಾಯಣ ಪೂಜೆಯನ್ನು ಶ್ರೀಗಳು ನೆರವೇರಿಸಿದರು.
ವಾಹಿನಿಯ ಗೌರವಾಧ್ಯಕ್ಷ ಸತ್ಯನಾರಾಯಣ ಪಿ. ಶೇಟ್, ಉರ್ಮಿಳಾ ಶೇಟ್ ಉಪಸ್ಥಿತರಿದ್ದರು. ವಾಹಿನಿಯ ಅಧ್ಯಕ್ಷ ಕೃಷ್ಣಕುಮಾರ ಪ್ರಾಸ್ತಾವಿಕ ಮಾತನಾಡಿದರು. ದಿವಾಕರ ಸ್ವಾಗತಿಇಸಿದರು. ಮಾಣೇಶ್ವರ ವಂದಿಸಿದರು. ಮೋಹನ ರಾಯ್ಕರ ನಿರ್ವಹಿಸಿದರು.
Leave a Comment