
ಹಳಿಯಾಳ :- ಕಳೆದ ತಿಂಗಳು ಸಿದ್ದಾಪುರದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ
ತಾಲೂಕಿನ ಅಡಿಕೆಹೊಸೂರ ಗೌಳಿವಾಡಾ ಗ್ರಾಮದವನಾದ ಉದಯೋನ್ಮುಖ ಕಬ್ಬಡಿಪಟು ಬಾಗು ಬಾಬು ಎಡಗೆ ( 18 ವರ್ಷ ) ಶನಿವಾರ ತಡರಾತ್ರಿ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಸಿದ್ದಾಪುರದಲ್ಲಿ ಅವಘಡ ನಡೆದ ಬಳಿಕ ತೀವೃ ಅಸ್ವಸ್ಥನಾಗಿದ್ದ ಬಾಗುವನ್ನು ತುರ್ತು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನರ ತಜ್ಞ ಡಾ.ಕ್ರಾಂತಿ ಕಿರಣ ಚಿಕಿತ್ಸೆ ನೀಡಿದ್ದರಲ್ಲದೇ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿತ್ತು.
ಶಸ್ತ್ರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿಯನ್ನು ವ್ಯಯಿಸಲಾಗಿತ್ತು.
ಆಸ್ಪತ್ರೆಗೆ ಸಚಿವ ಆರ್ ವಿ ದೇಶಪಾಂಡೆ ಅವರು ಭೆಟಿ ನೀಡಿದ್ದರು.
ಆದರೇ ಶನಿವಾರ ಏಕಾಏಕಿ ಬಾಗುವಿನ ಉಸಿರಾಟದಲ್ಲಿ ತೀರಾ ತೊಂದರೆ ಕಂಡು ಬಂದಿದ್ದು ಆತನನ್ನು ಪಾಲಕರು ಮನೆಗೆ ಕರೆದುಕೊಂಡು ಬಂದಿದ್ದು.. ತನ್ನ ಮನೆಯಲ್ಲಿ ಶನಿವಾರ ತಡರಾತ್ರಿ ಬಾಗುವಿನ ಪ್ರಾಣಪಕ್ಷಿ ಹಾರಿಹೊಗಿದೆ.
ಕ್ರೀಡಾಪಟುವಿನ ನಿಧನದಿಂದ ಗ್ರಾಮವೆಲ್ಲ ದುಃಖದಲ್ಲಿ ಮುಳುಗಿದ್ದು ಹರೆಯದ ಹುಡುಗನನ್ನು ಕಳೆದುಕೊಂಡ ಬಾಗುವಿನ ಬಡ ಪಾಲಕರ ಆಕ್ರಂದನ ಎಲ್ಲರ ಮನ ಕುಲುಕವಂತಾಗಿದೆ.

Leave a Comment