ದಾಂಡೇಲಿ: ಹುಬ್ಬಳ್ಳಿಯಯಿಂದ ದಾಂಡೇಲಿ ವರೆಗೆ 15 ದಿನಗಳಲ್ಲಿ ಪ್ರಯಾಣ ಕರ ರೈಲು ಪ್ರಾರಂಭಿಸದೆ ಇದ್ದರೆ ದಾಂಡೇಲಿಗೆ ಬರುವ ಗೂಡ್ಸ ರೈಲನ್ನು ತಡೆಹಿಡಿದು “ರೈಲ್ ರೋಕೊ” ನಡೆಸುವುದಾಗಿ ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿ ಖಡಕ್ ಎಚ್ಚರಿಕೆಯನ್ನು ನೀಡಿದೆ.
ಸಮೀತಿಯ ಪದಾಧಿಕಾರಿಗಳು ಹುಬ್ಬಳ್ಳಿ ಜನರಲ್ ಮ್ಯಾನೇಜರ ಸೌತ್ ವೇಷ್ಟರ್ನ ರೈಲ್ವೆ, ರೈಲ್ವೆ ಮಂತ್ರಿಗಳಿಗೆ, ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ, ರಾಜ್ಯ ಸಚಿವ ಆರ್.ವಿ.ದೇಶಪಾಂಡೆ, ಪ್ರಲ್ಹಾದ ಜೋಶಿ ಸಂಸದರು, ಜಿಲ್ಲಾಧಿಕಾರಿಗಳು ಕಾರವಾರ ಅವರಿಗೆ ಬರೆದ ಮನವಿ ಪತ್ರವನ್ನು ದಾಂಡೇಲಿ ತಹಶಿಲ್ದಾರ ಅವರಿಗೆ ಸಲ್ಲಿಸುವ ಮೂಲಕ ಹೋರಾಟ ಸಮೀತಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ದಾಂಡೇಲಿ ತಹಶಿಲ್ದಾರರಾದ ಶೈಲೇಶ ಪರಮಾನಂದ ಮನವಿ ಸ್ವೀಕರಿಸಿಕೊಂಡು ಸರಕಾರಕ್ಕೆ ಕಳಿಸಿಕೊಡಲಾಗುದೆಂದು ತಿಳಿಸಿದರು.
ಕೆಲಸ ಮುಗಿದಿದ್ದರು ರೈಲು ಪ್ರಾರಂಭಿಸಲು ಮೀನಾಮೇಷ:-
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಿಂದ ಅಳ್ನಾವರ ವರೆಗೆ ಸ್ವತಂತ್ರ ಪೂರ್ವದಲ್ಲಿಯೆ ಜಿಲ್ಲೆಯ ಪ್ರಪ್ರಥಮ ಪ್ರಯಾಣ ಕರ ರೈಲು ಪ್ರಾರಂಭಿಸಲಾಗಿತ್ತು. ರೈಲು ಪ್ರಾರಂಭವಾದ ನಂತರ ಅಂದಿನ ರಾಜಕಿಯ ಮುಖಂಡರ ಇಛ್ಚಾ ಶಕ್ತಿಯ ಕೊರತೆಯಿಂದ ರೈಲು ಅಭಿವೃದ್ದಿಯಾಗದೆ ಕುಂಟುತ್ತ ಸಾಗಿತು ಹೀಗೆಯೆ ಕೆಲ ವರ್ಷಗಳ ನಂತರ ಪ್ರಯಾಣ ಕರ ರೈಲು ನಿಲ್ಲಿಸಲಾಯಿತು ಅನಂತರ ಹಲವಾರು ಸಂಘಟನೆಗಳು ಹಾಗೂ ನಾಗರಿಕರು ರೈಲು ಆರಂಭಿಸಲು ಮನವಿ ನೀಡಿದರು. ಇದರ ಫಲವಾಗಿ ಮೂರು ವರ್ಷಗಳ ಹಿಂದೆ ಲೋಕಸಭಾ ಸದಸ್ಯರಾದ ಪ್ರಲ್ಹಾದ ಜೋಶಿ ಅವರ ಪ್ರಯತ್ನದಿಂದ ದಾಂಡೇಲಿಯಿಂದ ಹುಬ್ಬಳ್ಳಿಗೆ ರೈಲು ಆರಂಭಕ್ಕೆ ಮರುಜೀವ ಸಿಕ್ಕಂತಾಯಿತು.
ಹಿಂದಿನ ರಾಜ್ಯ ಸರಕಾರದ ರೈಲ್ವೆ ಮಂತ್ರಿಗಳಾದ ಸದಾನಂದ ಗೌಡ ದಾಂಡೇಲಿಯ ಅಂಬೇವಾಡಿಯಿಂದ ಧಾರವಾಡಕ್ಕೆ ರೈಲು ಆರಂಭಿಸಲು ರೈಲ್ವೆ ಬಜೆಟ್‍ನಲ್ಲಿ ಘೋಷಣೆ ಮಾಡಿದರು. ಆದರೆ ರಾಜಕೀಯ ಇಚ್ಚಾ ಶಕ್ತಿಯ ಕೋರತೆಯಿಂದ ಇದುವರೆಗೆ ರೈಲು ಪ್ರಾರಂಭಿಸದೆ ಕಾಲಹರಣ ಮಾಡಲಾಗುತ್ತಿದೆ ದಾಂಡೇಲಿ ರೈಲು ನಿಲ್ದಾಣಕ್ಕೆ ಸಂಬಂಧ ಪಟ್ಟ ಎಲ್ಲಾ ಕೇಲಸ ಕಾರ್ಯಗಳು ಮುಗಿದರು ಸಹ ರೈಲು ಪ್ರಾರಂಭಿಸಲು ಮಿನಾಮೇಷ ಎಣ ಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ರೈಲು ಪ್ರಾರಂಭಿಸದೆ ಇದ್ದರೇ ಗೂಡ್ಸ್ ರೈಲ ರೋಕೊ ಎಚ್ಚರಿಕೆ:-
ಈ ವಿಷಯದ ಬಗ್ಗೆ ಹುಬ್ಬಳ್ಳಿಯ ರೈಲ್ವೆ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ರಾಜಕೀಯ ನಾಯಕರಿಗೆ, ಸಚಿವರಿಗೆ, ಶಾಸಕರಿಗೆ ಆಗ್ರಹಿಸಿದರು ಸಹ ಇದು ವರೆಗೆ ರೈಲು ಪ್ರಾರಂಭಿಸದೆ ಜನರಿಗೆ ದ್ರೋಹ ಎಸಗಲಾಗುತ್ತಿದೆ ಎಂದು ಆಪಾದಿಸಿರುವ ಹೋರಾಟ ಸಮೀತಿಯವರು ಮುಂಬರುವ 15 ದಿನಗಳಲ್ಲಿ ದಾಂಡೇಲಿಯಿಂದ ಹುಬ್ಬಳ್ಳಿಯ ವರೆಗೆ ರೈಲು ಪ್ರಾರಂಭಿಸಲು ಅಂತಿಮ ನಿರ್ಣಯ ಕೈಗೊಳ್ಳದೆ ಇದ್ದಲ್ಲಿ ದಾಂಡೇಲಿಗೆ ಬರುವ ಗೂಡ್ಸ್ ರೈಲನ್ನು ತಡೆ ಹಿಡಿದು ರೈಲ್ ರೋಕೊ ನಡೆಸುವದಾಗಿ ದಾಂಡೇಲಿ ಸಮಗ್ರ ಅಭೀವೃದ್ದಿ ಸಮಿತಿಯ ಪದಾಧಿಕಾರಿಗಳು ತಾವು ರವಾನಿಸಿದ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ರೈಲ ರೋಕೊದಿಂದ ಯಾವುದೇ ರೀತಿಯ ತೊಂದರೆ ಉಂಟಾದರೆ ಸಮಿತಿಯು ಜವಾಬ್ದಾರಿ ತೇಗೆದು ಕೊಳ್ಳದೆ ಸಂಬಂಧ ಪಟ್ಟ ಅಧಿಕಾರಿಗಳೆ ಜವಾಬ್ದಾರರಾಗುತ್ತಾರೆಂದು ಸಮಿತಿ ತಿಳಿಸಿದೆ. ಈ ಸಂದರ್ಭದಲ್ಲಿ ಅಧ್ಯಕ್ಷ ಅಕ್ರಮ್ ಖಾನ್, ಅಶೋಕ ಪಾಟೀಲ, ಬಲವಂತ ಬೊಮ್ನಳ್ಳಿ, ಅಬ್ದುಲ್ ವಹಾಬ್ ಬಾಂಸರಿ, ಟಿ.ಎಸ್.ನಾಯ್ಕ, ರಮೇಶ ನಾಯ್ಕ, ಸಬಸ್ಟಿಂಗ್ ಡಿಮೆಲ್ಲೊ, ವಿ.ಎ.ಕೊನಾಪುರಿ, ಸುನೀಲ ಪಡವ¯ಕರ, ನಗರ ಸಭಾ ಸದಸ್ಯರಾದ ರಮಾ ರವೀಂದ್ರ, ಪದ್ಮಜಾ ಜನ್ನು, ಮುಜಿಬಾ ಚಬ್ಬಿ, ಮೀನಾಕ್ಷಿ ಬಡಿಗೇರ, ಚಂದ್ರಕಾಂತ ನಾಡಗೇರ, ಪ್ರವೀಣ ಕೋಠಾರಿ, ಇಲಿಯಾಸ ಕಾಟಿ, ಹರೀಶ ನಾಯ್ಕ, ಎಮ್.ಆರ್.ನಾಯ್ಕ, ಜಿ.ಪಿ.ಪೇರುಮಾಳ ಅಲ್ಲದೆ ಅನೇಕ ಮುಖಂಡರು ಹಾಗೂ ಹೀರಿಯ ನಗರಿಕರು ಉಪಸ್ಥಿಸರಿದ್ದರು.
Boss if train started, people will start using the train services at 10% cost of what they R paying to Ksrtc bus service which will be loss to Karnataka government, hence they R not supporting, plz note I pay only 10 rs. From central to tambaram which is 60 kms. Hence Karnataka govt. Not supporting, plz note I am born nd bought up in Dandeli, but feel pity about this, though we have railway line past 50 years plus but we R not benefitted, b serious in ur fight, support will b from all Dandeli born people even though we r not right there