ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪೂರ್ವ ವಿದ್ಯಾರ್ಥಿಯಾದ ನಿರ್ಮಲಾ ಹೆಗಡೆ ಚಿನ್ನದ ಪದಕದ ಗರಿ
ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಒಟ್ಟು ಒಂಬತ್ತು ಪದಕಗಳನ್ನು ಹೊನ್ನಾವರ ತಾಲೂಕಿನವರಾದ ನಿರ್ಮಲಾ ತಿಮ್ಮಣ್ಣ ಹೆಗಡೆ ಪ್ರಥಮ ರ್ಯಾಂಕ್ ಗಳಿಸುದರೊಂದಿಗೆ ಪಡೆದುಕೊಂಡಿದ್ದು ಫೆಬ್ರವರಿ 4ರಂದು ಧಾರವಾಡದಲ್ಲಿ ನಡೆದ ಘಟಿಕೋತ್ಸವದಲ್ಲಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದರು. ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ಮುಗಿಸಿದ್ದು ಉನ್ನತ ವ್ಯಾಸಾಂಗವನ್ನು ಕರ್ನಾಟಕ ವಿಶ್ವ ವಿದ್ಯಾಲಂiÀi ಧಾರವಾಡದಲ್ಲಿ ಮಾಡಿರುತ್ತಾಳೆ. ಹೊನ್ನಾವರ ಸರ್ಕಾರಿ ಪ್ರಥಮ ಕಾಲೇಜಿನ ಪೂರ್ವ ವಿದ್ಯಾರ್ಥಿಯಾಗಿದ್ದು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ನಾಗೇಶ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
congratulations Nirmala… god bless you… keep doing well…