• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

ಸಮಾಜಕ್ಕಾಗಿ ನಾವೇನು ಮಾಡಿದ್ದೇವೆ ಎಂಬುದುವುದನ್ನು ನಾವೆಲ್ಲರೂ ಅರಿತು ಜೀವನ ನಡೆಸಬೇಕಿದೆ- ನಾಗರತ್ನ ರಾಮಗೌಡ

February 10, 2019 by Yogaraj SK Leave a Comment

ಹಳಿಯಾಳ:- ಮನುಷ್ಯನ ಜೀವಿತದ ಅವಧಿಯಲ್ಲಿ ಕೊನೆಗೆ ಗಣನೆಗೆ ಬರುವುದು ಆತ ಏನು ಮಾಡಿದ್ದಾನೆಂಬುದು ಅನ್ನುವುದನ್ನು ಅರಿತು ಜನರು ಜೀವನ ಸಾಗಿಸಬೇಕಾಗಿದೆ. ಸಮಾಜಕ್ಕಾಗಿ ಏನಾದರು ಮಾಡಬೇಕೆಂಬುವ ಛಲದೊಂದಿಗೆ ಗುರಿ ಇಟ್ಟುಕೊಂಡು ಮುನ್ನುಗ್ಗಿದರೇ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಬೆಳಗಾವಿಯ ಆಶ್ರಯ ಫೌಂಡೇಶನ್‍ನ ಸಂಸ್ಥಾಪಕಿ ನಾಗರತ್ನ ರಾಮಗೌಡಾ ಹೇಳಿದರು.

ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ವತಿಯಿಂದ ಹಮ್ಮಿಕೊಂಡ ಹಳಿಯಾಳ ಹಬ್ಬ ಕಾರ್ಯಕ್ರಮದ ಅಂಗವಾಗಿ ಛತ್ರಪತಿ ಶೀವಾಜಿ ಮಹಾರಾಜರ ಮೈದಾನದಲ್ಲಿ ಹಾಕಲಾದ ಭವ್ಯ ವೇದಿಕೆಯಲ್ಲಿ ಸಾಂಕೃತೀಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜ ನಮಗೇನು ನೀಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಮಾಡಿದ್ದೇವೆ ಎನ್ನುವುದು ಮುಖ್ಯವಾಗಿದೆ ಸಮಾಜ ಸೇವೆ ಮಾಡುವಲ್ಲಿಯ ಖುಷಿ ಮತ್ತೇಲ್ಲೂ ಸಿಗಲ್ಲ ಎಂದ ನಾಗರತ್ನ ತಾವು ಎಚ್‍ಐವಿ ಸೊಂಕಿತರಾಗಿದ್ದರು ಎಂದಿಗೂ ಎದೆ ಗುಂದದೆ ಸಮಾಜಕ್ಕಾಗಿ ಏನಾದರು ಮಾಡಬೇಕೆಂಬ ಛಲದಿಂದ ರಾಜ್ಯ ಸರ್ಕಾರದ ಸಹಾಯವಿಲ್ಲದೇ ಎಚ್‍ಐವಿ ಪಿಡಿತರಿಗಾಗಿ ಬೆಳಗಾವಿಯಲ್ಲಿ ಆಶ್ರಯ ಫೌಂಡೇಶನ್ ಸ್ಥಾಪಿಸಿದ್ದು ಎಚ್‍ಐವಿ ಪಿಡಿತರಿಗೆ ಸಹಾಯದ ಹಸ್ತ ಚಾಚಲಾಗಿದೆ ಎಂದರು. ಹಳಿಯಾಳ ಹಬ್ಬದಂತ ಬೃಹತ್ ವೇದಿಕೆ ಕಾರ್ಯಕ್ರಮವನ್ನು ನನ್ನಿಂದ ಉಧ್ಘಾಟಿಸಿರುವುದು ಸಮಾಜಕ್ಕೆ ಮಾದರಿ ಕಾರ್ಯವನ್ನು ವಿ.ಆರ್.ಡಿಎಮ್ ಟ್ರಸ್ಟ್ ಮಾಡಿದೆ ಎಂದು ಶ್ಲಾಘಿಸಿದರು.

ಟ್ರಸ್ಟ್‍ನ ಧರ್ಮದರ್ಶಿ ಪ್ರಸಾದ ದೇಶಪಾಂಡೆ ಮಾತನಾಡಿ ನಾಗರತ್ನ ಅವರು ಮಹಿಳೆಯರಿಗೆ ಸ್ಪೂರ್ತಿದಾಯಕರಿದ್ದಾರೆ. ಕಳೆದ 6 ವರ್ಷಗಳಿಂದ ಸತತವಾಗಿ ಹಳಿಯಾಳ ಹಬ್ಬ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಸ್ಥಳೀಯ ಕಲಾವಿದರಿಗೆ ಹಾಗೂ ಉದಯೋನ್ಮುಖ ಪ್ರತಿಭೆಗಳಿಗೆ ಪ್ರೊತ್ಸಾಹ ನೀಡುವ ಮಹದಾಸೆ ಟ್ರಸ್ಟ್‍ನದ್ದಾಗಿದೆ. ಮುಂದಿನ ವರ್ಷ ಇನ್ನೂ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ಘೊಷಿಸಿದರು.

ಟ್ರಸ್ಟ್‍ನ ಧರ್ಮದರ್ಶಿ ರಾಧಾಬಾಯಿ ದೇಶಪಾಂಡೆ, ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಕಟ್ಟಿ ವೇದಿಕೆಯ ಮೇಲಿದ್ದರು.

ಮೊದಲ ದಿನದ ಹಳಿಯಾಳ ಹಬ್ಬದಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕøತೀಕ ಕಾರ್ಯಕ್ರಮಗಳು, ಬೆಂಗಳೂರಿನ ಪ್ರಹ್ಲಾದ ಆಚಾರ್ಯ ಅವರಿಂದ ಶ್ಯಾಡೋ ಪ್ಲೇ, ಮುಂಬಯಿಯ ಡಾನ್ಸ್ ಪ್ಲಸ್-3 ಖ್ಯಾತಿಯ ಟ್ಯೂಟಿಕ್ಸ್ ಕ್ರ್ಯೂ ನೃತ್ಯ ಸಂಜೆ, ಸದಾಶಿವಗಡದ ರಿಧಂ ಹಾರ್ಟ ಬೀಟ್ಸ್ ನವರಿಂದ ಅಲ್ರ್ಟಾ ವೈಲೆಟ್ ನೃತ್ಯಗಳು, ಝೀ ಸರಿಗಮಪ 2017ರ ವಿಜೇತ ವಿಶ್ವಪ್ರಸಾದ ಅವರಿಂದ ಗೀತ ಗಾಯನ ಹಾಗೂ ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಕಟ್ಟಿ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ಸಚಿವ ಆರ್.ವಿ.ದೇಶಪಾಂಡೆ ಅವರು ಕಲಾವಿದರುಗಳಿಗೆ ಸನ್ಮಾನಿಸಿ ಗೌರವಿಸಿದರು.

Related Posts :

ಅಖಿಲ ಕರ್ನಾಟಕ ಸ್ಪ...
ಹೆತ್ತಮ್ಮನಿಂದಲೇ 25...
ಪತ್ರಕರ್ತ ನಿಲೇಶ ಆ...
ಹೊನ್ನಾವರÀಕ್ಕೆ ಪ್...

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: aimed at the goal, Chhatrapati Shivaji Maharaj's ground, HIV infected, Nagaratna Ram Gowda, the life of man, we all need to know and live, what we have done for society

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,399,258 visitors

Footer

JSW has proposed another port at Honavar

July 26, 2021 By Sachin Hegde

ಭಾವಕವಿ , ಸಾಹಿತಿ, ಭಟ್ಕಳದ ಉಮೇಶ ಮುಂಡಳ್ಳಿಯವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಘೋಷಣೆ

July 5, 2022 By Sachin Hegde

ಆರ್ತಿ ಬೈಲ್ ನಲ್ಲಿ ಪಲ್ಟಿಯಾಗಿದ್ದಟ್ಯಾಂಕ‌ರ ನ್ನು ಕ್ರೇನ್ ಮೂಲಕ ತೆರವು ಗೊಳಿಸಿ ಸಂಚಾರ ಸುಗಮ

July 5, 2022 By Jayaraj Govi

ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2022

July 5, 2022 By Deepika

ಪತಿಯಿಂದಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

July 4, 2022 By Deepika

ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

July 4, 2022 By Deepika

ಜಿಮ್ ಸ್ಥಾಪನೆಗೆ ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ

July 4, 2022 By Deepika

© 2022 Canara Buzz · Contributors · Privacy Policy · Terms & Conditions

 

Loading Comments...
 

    loading Cancel
    Post was not sent - check your email addresses!
    Email check failed, please try again
    Sorry, your blog cannot share posts by email.