• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಇವರೆಗೆ ಬೆಳಕು ಕಂಡಿಲ್ಲ ಜಿಲ್ಲೆಯ ಈ ನಾಲ್ಕೂ ಗ್ರಾಮಗಳು‌ – ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ದಿ‌.13 ರಂದು ಉಪವಾಸ ಸತ್ಯಾಗ್ರಹ

February 12, 2019 by Yogaraj SK Leave a Comment

watermarked IMG 20190203 WA0015

ವರದಿ :- ಗಣಪತಿ ವಾಗಳ್ಳಿ 

ಯಲ್ಲಾಪುರ:

ದೇಶದ ವಿವಿಧ ಮೂಲೆಗಳ ಕತ್ತಲು ನಿವಾರಿಸಿ ಬೆಳಕು ನೀಡುವ ಕೈಗಾ ಅಣುಸ್ಥಾವರದ ಬುಡದಲ್ಲಿಯೇ ಸುಮಾರು ಮೂರ್ನಾಲ್ಕು ಗ್ರಾಮಗಳು ಇದುವರೆಗೂ ವಿದ್ಯುತ್ ಸಂಪರ್ಕ ಸಿಗದೇ, ಅಲ್ಲಿನ ನಿವಾಸಿಗಳು ಕತ್ತಲೆಯಲ್ಲಿ ದಿನಕಳೆಯುವಂತಾಗಿದೆ.
ತಾಲೂಕಿನ ಗಡಿ ಪ್ರದೇಶವಾದ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಮೆಗುಳೆ, ಲೆಕ್ಕೆಮನೆ, ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಅತ್ತಿಸವಲು, ಕಬ್ಬಿನಗುಳೆ ಮುಂತಾದ ಗ್ರಾಮಗಳ ನಿವಾಸಿಗಳು ಸ್ವಾತಂತ್ರ್ಯ ಲಭಿಸಿ ಇಷ್ಟು ವರ್ಷಗಳು ಕಳೆದರೂ ಮೂಲಭೂತ ಸೌಕರ್ಯವಾದ ವಿದ್ಯುತ್ ಸಂಪರ್ಕ ವಿಲ್ಲದೇ ಪರದಾಡುವಂತಾಗಿದೆ. ಕಾಟಾಚಾರಕ್ಕೆ ಕಂಬ, ತಂತಿ, ಟ್ರಾನ್ಸ್‍ಫಾರ್ಮಗಳನ್ನು ಜೋಡಿಸಿ ಸುಮಾರು ನಾಲ್ಕು ವರ್ಷಗಳು ಕಳೆದರೂ ಈ ಗ್ರಾಮಕ್ಕೆ ಸಂಪರ್ಕ ನೀಡಲು ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಈ ಕಡೆ ಮುಖ ಮಾಡದೇ ಇರುವುದು ಅವರಿಗೆ ಜನರ ಮೇಲೆ ಇರುವ ಕಾಳಜಿಯನ್ನು ತೋರಿಸುತ್ತದೆ. ಅಂಕೋಲಾ ತಾಲೂಕು ವ್ಯಾಪ್ತಿಯ 18 ಹಾಗೂ ಕಾರವಾರ ತಾಲೂಕಿನ 14 ಮನೆಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕ ನೀಡಿಲ್ಲ. ಈ ಕುರಿತು ಅಧಿಕಾರಿಗಳು ಗಮನಹರಿಸಿ ಆದಷ್ಟು ಶೀಘ್ರದಲ್ಲಿ ಸಂಪರ್ಕ ನೀಡಬೇಕು ಎಂದು ಈ ಭಾಗದ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.

The four villages in the district have not been lighted yet
ಮೀಟರ್ ಅಳವಡಿಕೆ, ಆದರೆ ವಿದ್ಯುತ್ ಇಲ್ಲ………….
ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಈ ಭಾಗಕ್ಕೆ ಕಂಬ, ಟ್ರಾನ್ಸಫಾರ್ಮರ್ ಹಾಗೂ ಮನೆಗಳಿಗೆ ಮೀಟರ್ ಅಳವಡಿಕೆ ಮಾಡಿದ್ದಾರೆ. ಕಾಟಾಚಾರಕ್ಕೆ ಕಂಬಗಳನ್ನು ಅಳವಡಿಸಿದ್ದಾರೆ. ದೇಶಕ್ಕೆ ಬೆಳಕು ನೀಡಲು ಈ ಭಾಗದ ಹಲವಾರು ಸಾರ್ವಜನಿಕರು ತಮ್ಮ ಭೂಮಿಗಳನ್ನು ತ್ಯಾಗ ಮಾಡಿದ್ದಾರೆ. ಆದರೆ “ದೀಪದ ಬುಡದಲ್ಲಿ ಕತ್ತಲು” ಎಂಬಂತಾಗಿದೆ. ಈ ಬಗ್ಗೆ ಹಲವಾರು ಬಾರಿ ಮನವಿ ನೀಡಿ, ವಿದ್ಯುತ್ ಸಂಪರ್ಕ ನೀಡಲು ವಿನಂತಿಸಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಈ ಭಾಗದ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

The four villages in the district have not been lighted yet
ಚಿಮಣಿಯಲ್ಲಿ ಓದು…….
ತಾಲೂಕು ಕೇಂದ್ರದಿಂದ ಸುಮಾರು 45 ರಿಂದ 50 ಕಿ.ಮೀ ದೂರದಲ್ಲಿರುವ ಈ ಗ್ರಾಮಗಳು ಹಲವಾರು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ತಾಲೂಕು ಕೇಂದ್ರಗಳು ದೂರವಾಘಿರುವುದರಿಂದ ಸರಿಯಾದ ರಸ್ತೆಗಳು ಇಲ್ಲದಿರುವ ಕಾರಣ ವಿದ್ಯಾರ್ಥಿಗಳು ನಡೆದುಕೊಂಡು ಶಾಲೆಗೆ ತೆರಳಬೇಕಾಗಿದೆ. ಶಾಲಾ ಅವಧಿ ಮುಗಿದ ತಕ್ಷಣ ಮನೆಗೆ ವಾಪಸ್ಸಾಗುವುದು ಸಂಜೆಯಾಗುತ್ತದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳ ಕಷ್ಟ ಹೇಳತೀರದು. ಶಾಲೆ-ಕಾಲೇಜುಗಳಿಂದ ಬಂದ ತಕ್ಷಣ ಅಭ್ಯಾಸಗಳನ್ನು ಮುಗಿಸಿಕೊಳ್ಳಬೇಕು. ಇಲ್ಲದಿದ್ದರೇ ರಾತ್ರಿ ವೇಳೆ ಚಿಮಣಿ ದೀಪದಲ್ಲಿ ಓದುವ ಪರಿಸ್ಥಿತಿಯಿದ್ದು, ಪರೀಕ್ಷೆ ಸಮಯದಲ್ಲಿ ಮತ್ತಷ್ಟು ತೊಂದರೆಯಾಗುತ್ತಿದೆ. ಸ್ಥಳೀಯ ನಿವಾಸಿಗಳಿಗೆ ಹೊರ ಪ್ರಪಂಚದಲ್ಲಿ ನಡೆಯುತ್ತಿರುವ ಆಗು-ಹೋಗುಗಳನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ.
ಆದಷ್ಟು ಶೀಘ್ರದಲ್ಲಿ ಈ ಭಾಗದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದೇ ಇದ್ದರೆ, ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿದಷ್ಕರಿಸಿ, ಚುನಾವಣಾ ಸಮಯದಲ್ಲಿ ಮತ ಕೇಳಲು ಆಗಮಿಸುವ ಎಲ್ಲ ಪಕ್ಷದ ನಾಯಕರಿಗೆ ಗೇರಾವ್ ಹಾಕಲು ನಿರ್ಧರಿಸುತ್ತೇವೆ. ಕೈಗಾ-ಇಳಕಲ್ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ 63 ರನ್ನು ಒಂದು ದಿನ ಸಂಪೂರ್ಣ ಬಂದ್ ಮಾಡಿ, ಪ್ರತಿಭಟನೆ ನಡೆಸುತ್ತೇವೆ ಎಂದು ಈ ಭಾಗದ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

The four villages in the district have not been lighted yet

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: and transfers for about four years, aṅkōlā tālūkina haṭṭikēri grāma pan̄cāyata vyāptiya śameguḷe, At night, beḷaku nīḍuva kaigā aṇusthāvara, border area, cimaṇi dīpadalli ōduva paristhiti, dark at the lamp, deprived of infrastructure, dēśada vividha mūlegaḷa kattalu, di‌.13 Randu, dīpada buḍadalli kattalu, fasting, firing, gaḍi pradēśavāda, grāmagaḷa nivāsigaḷu, has not seen light yet The villagers have been demanding basic infrastructure, ivarege beḷaku kaṇḍilla jilleya ī nālkū grāmagaḷu‌, kabbinaguḷe muntāda, kāravāra tālūkina mallāpura grāma pan̄cāyata vyāptiya attisavalu, kāṭācārakke kamba, lekkemane, mūlabhūta saukaryagaḷinda van̄cita, mūlabhūta saulabhyakke āgrahisi, on 13th, Rātri vēḷe, svātantrya labhisi, tanti, The four villages in the district have not been lighted yet, the Hattikere village gram panchayat of Angola Taluk, The lighting kyga nuclear power plant, the situation of reading in Chimani lamp, ṭrāns‍phārmagaḷannu jōḍisi sumāru nālku varṣa, upavāsa satyāgraha, wire, ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಮೆಗುಳೆ, ಇವರೆಗೆ ಬೆಳಕು ಕಂಡಿಲ್ಲ ಜಿಲ್ಲೆಯ ಈ ನಾಲ್ಕೂ ಗ್ರಾಮಗಳು‌, ಉಪವಾಸ ಸತ್ಯಾಗ್ರಹ, ಕಬ್ಬಿನಗುಳೆ ಮುಂತಾದ, ಕಾಟಾಚಾರಕ್ಕೆ ಕಂಬ, ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಅತ್ತಿಸವಲು, ಗಡಿ ಪ್ರದೇಶವಾದ, ಗ್ರಾಮಗಳ ನಿವಾಸಿಗಳು, ಚಿಮಣಿ ದೀಪದಲ್ಲಿ ಓದುವ ಪರಿಸ್ಥಿತಿ, ಟ್ರಾನ್ಸ್‍ಫಾರ್ಮಗಳನ್ನು ಜೋಡಿಸಿ ಸುಮಾರು ನಾಲ್ಕು ವರ್ಷ, ತಂತಿ, ದಿ‌.13 ರಂದು, ದೀಪದ ಬುಡದಲ್ಲಿ ಕತ್ತಲು, ದೇಶದ ವಿವಿಧ ಮೂಲೆಗಳ ಕತ್ತಲು, ಬೆಳಕು ನೀಡುವ ಕೈಗಾ ಅಣುಸ್ಥಾವರ, ಮೂಲಭೂತ ಸೌಕರ್ಯಗಳಿಂದ ವಂಚಿತ, ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ, ರಾತ್ರಿ ವೇಳೆ, ಲೆಕ್ಕೆಮನೆ, ಸ್ವಾತಂತ್ರ್ಯ ಲಭಿಸಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...