
ಗೋಕರ್ಣ: ಜಮ್ಮು ಕಾಶ್ಮೀರದ ಪುಲ್ವಾಮಾ ಬಳಿ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಭಾರತೀಯ ಸೇನೆಯ ವೀರ ಯೋಧರ ಆತ್ಮಕ್ಕೆ ಇಲ್ಲಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಶ್ರೀ ರಾಘವೇಶ್ವರ ಭಾರತೀ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ
ಶನಿವಾರ ಶಾಂತಿ ಕೋರಿದರು.
ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮೆಣಬತ್ತಿ ಕೈಯಲ್ಲಿ ಹಿಡಿದು ಮೌನಾಚರಣೆ ನಡೆಸಿ ವೀರ ಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಶಾಲಾ ಮುಖ್ಯಾಧ್ಯಾಪಕಿ ಉಷಾ ನಾಯಕ, ಸಹ ಶಿಕ್ಷಕಿ ವೃಂದಾ ಗಾಂವಕರ, ಮಣಿಪ್ರಭ ಗೌಡ, ಸಹ ಶಿಕ್ಷಕ ರಮೇಶ ನಾಯಕ ಹಾಗೂ ದೈಹಿಕ ಶಿಕ್ಷಕ ಮತ್ತು ಸ್ಕೌಟ್ ಮಾಸ್ಟರ್ ನಿತ್ಯಾನಂದ ಗೌಡ ಮತ್ತಿತರರು ಪಾಲ್ಗೊಂಡಿದ್ದರು
Leave a Comment