ಹಳಿಯಾಳ :- ದೇಶದ ಅನ್ನ ತಿಂದು, ಇಲ್ಲಿಯ ಎಲ್ಲ ಸವಲತ್ತುಗಳನ್ನು ಪಡೆದು ಆರಾಮದಾಯಕ ಜೀವನ ನಡೆಸಿ ವೈರಿ ರಾಷ್ಟ್ರ ಪಾಪಿ ಪಾಕಿಸ್ತಾನದ ಪರ ಘೊಷಣೆ ಕೂಗುವವರನ್ನು ಹಾಗೂ ಸೈನ್ಯದ ವಿರುದ್ದ ಮಾತನಾಡುವವರ ಮೇಲೆ ಮೋದಲು ಕಠೋರ ಕಾನೂನು ಕ್ರಮ ಕೈಗೊಂಡು ದೇಶದಿಂದ ಗಡಿಪಾರು ಮಾಡಬೇಕಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು.
ಪಟ್ಟಣದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಹುತಾತ್ಮ ಸೈನಿಕರ ಹೆಸರಲ್ಲಿ ಪೂಜೆ ಸಲ್ಲಿಸಿ ಅವರ ಆತ್ಮಗಳಿಗೆ ಶಾಂತಿ ಕೊರಿ ಬಳಿಕ ನಡೆದ ಶೃಧ್ದಾಂಜಲಿ ಸಭೆಯಲ್ಲಿ ಹುತಾತ್ಮರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ಬಳಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯನ್ನು ಕಟುವಾಗಿ ಖಂಡಿಸಿದ ಅವರು ನೆರಾನೆರ ಯುದ್ದದಲ್ಲಿ ಹೊರಾಟ ನಡೆಸುವ ತಾಕತ್ತಿಲ್ಲದ ನಪುಂಸಕ ಪಾಪಿಸ್ತಾನ ಉಗ್ರರ ಮೂಲಕ ಹೇಡಿ ಕೃತ್ಯ ನಡೆಸುತ್ತಿದೆ ಎಂದು ಕಿಡಿಕಾರಿದರು. ಎಲ್ಲರೂ ಒಗ್ಗಟ್ಟಾಗಿ ದೇಶದಲ್ಲಿರುವ ವಿರೋದಿಗಳನ್ನು ಮೊದಲು ವಿರೋಧಿಸಬೇಕಾಗಿರುವ ಕಾರ್ಯವಾಗಬೇಕಿದೆ ಎಂದು ಅವರು ಹೇಳಿದರು.
ಮಾಜಿ ಕಮಾಂಡರ್ ಉಮಾಕಾಂತ ದೇಶಪಾಂಡೆ, ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ಮಂಗೇಶ ದೇಶಪಾಂಡೆ, ವಾಸು ಪೂಜಾರಿ, ಅನಿಲ ಮುತ್ನಾಳೆ, ಉದಯ ಹೂಲಿ, ಸಂತೋಷ ಘಟಕಾಂಬಳೆ, ಶಾಂತಾ ಹಿರೆಕರ, ವಿಜಯ ಬೋಬಾಟಿ ಮೊದಲಾದವರು ಇದ್ದರು.
Leave a Comment