ಹಳಿಯಾಳ:- ಯುವಜನರು ಹಾಗೂ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಫೇ.23 ಹಾಗೂ 24 ರಂದು 2 ದಿನಗಳ ಕಾಲ ಹಳಿಯಾಳದಲ್ಲಿ “ನಮ್ಮ ಊರು ನಮ್ಮ ಖಗಸಂಕುಲ” ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಬೆಂಡಿಗೇರಿಮಠ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಕರವೇ, ಅರ್ಬನ್ ಯುಥ್ ಕ್ಲಬ್ ಹಾಗೂ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಪಕ್ಷಿ ಪ್ರಭೇದಗಳ ವೈಜ್ಞಾನಿಕ ದಾಖಲೀಕರಣ ಹಾಗೂ ಕಾರ್ಯಾಗಾರವನ್ನು ಕಾರವಾರದ ಕೈಗಾದ ಕೈಗಾ ಬರ್ಡರ್ಸ ಸಂಸ್ಥೆಯು ನಡೆಸಿಕೊಡಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪಟ್ಟಣದ ಸುತ್ತಲಿನ ಕೆರೆಗಳು, ಐತಿಹಾಸಿಕ ಕೊಟೆ, ತಾಲುಕಾ ಕ್ರೀಡಾಂಗಣ, ಮರಡಿ ಗುಡ್ಡ, ಅರಣ್ಯ ಇಲಾಖೆ, ಹೊರಗಿನ ಗುತ್ತಿಗೆರೆ ಕೆರೆ, ದಾಂಡೇಲಿ ರಸ್ತೆ ಮುಂತಾದ ಸ್ಥಳಗಳಲ್ಲಿ ಪಕ್ಷಿ ವೀಕ್ಷಣೆ ಹಾಗೂ ಗಣತಿ ನಡೆಯಲಿದೆ ಎಂದಿರುವ ಬಸವರಾಜ ಈ ಹಿಂದೆ 2017ರಲ್ಲಿ ನಡೆಸಲಾದ ಗಣತಿಯಲ್ಲಿ ಒಟ್ಟೂ 118 ಹಕ್ಕಿ ಪ್ರಭೇದಗಳನ್ನು ಈ ಭಾಗದಲ್ಲಿ ಗುರುತಿಸಲಾಗಿತ್ತು ಎಂದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಕರವೇಯ ಮಹೇಶ ಆನೆಗುಂದಿ- 9535659128 ಮತ್ತು ಶ್ರೀಶೈಲ್ – 9060051234 ಗೆ ಸಂಪರ್ಕಿಸುವಂತೆ ಬೆಂಡಿಗೇರಿಮಠ ಕೊರಿದ್ದಾರೆ.
Leave a Comment