• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದಲ್ಲಿ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಜಿಗಳ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಸ್ವಾಮೀಜಿಗಳಿಂದ ಚಾಲನೆ,ಒಂದು ತಿಂಗಳ ಕಾಲ ನಡೆಯಲಿರುವ ಪ್ರವಚನ

February 20, 2019 by Yogaraj SK Leave a Comment

Siddeswara swami pravachana prog- inauguration

ಹಳಿಯಾಳ: ನುಡಿಗಳನ್ನು ನಡೆಯಲ್ಲಿ ಇಟ್ಟುಕೊಂಡಾಗ ಮಾತ್ರ ಜೀವನ ಪಾವನವಾಗುತ್ತದೆ ಹಾಗೂ ಮನುಷ್ಯನ ಕೊನೆಯಲ್ಲಿ ಧರ್ಮ ಮತ್ತು ಸೇವೆ ಎರಡೆ ಬರುವುದು ಎಂದು ಅಂಬಿಕಾನಗರದ ಶ್ರೀ 108 ಷ.ಬ್ರ.ಶ್ರೀ ಗುರು ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಫೆ.19 ರಿಂದ ಒಂದು ತಿಂಗಳ ಕಾಲ ವಿಜಯಪುರ ಜ್ಞಾನ ಯೋಗಾಶ್ರಮದ ತಪಸ್ವಿ ಸಿದ್ದೇಶ್ವರ ಸ್ವಾಮಿಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಉಧ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿದಿನ ಬೆಳಿಗ್ಗೆ 6.30ರಿಂದ 7.30ರ ವರೆಗೆ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಮನುಷ್ಯ ಏನು ಗಳಿಸಬೇಕೊ ಅದನ್ನು ಬಿಟ್ಟು ಬೇರೆಯೇ ಗಳಿಸುವಲ್ಲಿ ಮಗ್ನನಾಗಿದ್ದಾನೆ. ಲೌಖಿಕತೆಯೆಡೆಗೆ ವಾಲಿದ್ದಾನೆ ಎಂದ ಶ್ರೀಗಳು ಪ್ರತಿಯೊಬ್ಬರು ಗುಣದಿಂದ ಬಾಳಬೇಕು ಹಾಗೂ ಮನಸ್ಸು ಶುದ್ದಿ ಮುಖ್ಯವಾಗಿದೆ ಎಂದರು.
ಉಪ್ಪಿನ ಭೇಟಗೆರಿಯ ಮನಿಪ್ರ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಮಾತನಾಡಿ ಜ್ಞಾನ, ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಗೆ ಹೆಸರಾದ ಹಾಗೂ ಋ(ರು)ಷಿ ಮುನಿಗಳು-ಸಾಧು ಸಂತರು ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವ ಮಹಾನ್ ಪವಿತ್ರ ಭಾರತ ದೇಶವಾಗಿದೆ. ಉಳವಿಯ ಕ್ಷೇತ್ರ ಹಳಿಯಾಳ ಧರ್ಮ ಕಾರ್ಯಗಳಿಗೆ ಹೆಸರಾಗಿರುವುದು ಸಂತಸದ ಸಂಗತಿಯಾಗಿದೆ ಎಂದ ಅವರು ನಡೆ ನುಡಿ ಎರಡನ್ನು ಪರಿಪೂರ್ಣವಾಗಿ ಅಳವಡಿಸಿಕೊಂಡಿರುವ ಸಿದ್ದೇಶ್ವರ ಸ್ವಾಮಿಜಿಗಳು ಒಂದು ತಿಂಗಳ ಕಾಲ ಪ್ರವಚನ ನೀಡಲಿದ್ದಾರೆಂದರೇ ಇದು ಈ ಭಾಗದವರ ಸೌಭಾಗ್ಯವೆಂದು ನುಡಿದು ಶುಭ ಕೊರಿದರು.
ಮನಗುಂಡಿ ಮಹಾಮನೆಯ ಬಸವಾನಂದ ಮಹಾಸ್ವಾಮಿಗಳು ಮಾತನಾಡಿ ದೇಶ ಶ್ರೀಮಂತಿಕೆಯೆಡೆಗೆ ವಾಲುತ್ತಿದೆ. ಮನುಷ್ಯನ ದುರಾಸೆಗಳು ಹೆಚ್ಚಾಗಿವೆ. ಕಾಡು ನಾಶವಾಗುತ್ತಿದೆ ಈ ಮೂಲಕ ಮಾನವನಿಂದ ವಿನಾಶಕಾರಿ ವಾತಾವರಣ ಸೃಷ್ಠಿಯಾಗಿದೆ. ಮನುಷ್ಯ 400 ವರ್ಷ ಕೂಡ ಸುಸ್ಥಿರವಾಗಿ ಬದುಕಲು ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕೆಕೆ ಹಳ್ಳಿ ನಿತ್ಯಾನಂದ ಆಶ್ರಮದ ಸುಬ್ರಹ್ಮಣ್ಯ ಸ್ವಾಮಿ, ಧಾರವಾಡ ರಾಮಕೃಷ್ಣ ಆಶ್ರಮದ ವಿಜಯಾನಂದ ಸ್ವಾಮಿಜಿ, ಆನಂದಾಶ್ರಮದ ರುದ್ರಾಕ್ಷಿಬಾಬಾ ಮಾತನಾಡಿ ಸಿದ್ದೇಶ್ವರ ಸ್ವಾಮಿಗಳ ಸಾಮಾಜಿಕ, ಆಧ್ಯಾತ್ಮಿಕ ಕಾರ್ಯಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿ ಅವರ ಪ್ರವಚನ ಕೇಳಲು ಹಳಿಯಾಳಿಗರು ಪುಣ್ಯ ಮಾಡಿದ್ದಿರೆಂದರು.
ಸಿದ್ದಾರೂಢ ಮಠ ಯಡೋಗಾದ ನಿರ್ಮಲಾನಂದ ಮಾತಾಜಿ, ಮನಗುಂಡಿಯ ಸುಗುಣಾ ತಾಯಿ, ಗದಗನ ಗಂಗಮ್ಮಾ ತಾಯಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ಮಾಜಿ ಶಾಸಕ ಸುನೀಲ್ ಹೆಗಡೆ, ಮುಖಂಡ ಮಂಗೇಶ ದೇಶಪಾಂಡೆ, ಮುಸ್ಲಿಂ ಧರ್ಮಗುರು ಮುಫ್ತಿ ಫಯಾಜ ಅಮ್ಮದ ಖಾಸ್ಮಿ(ಇಟ್ಟಂಗಿವಾಲೆ), ಹಿರಿಯ ಆಧ್ಯಾತ್ಮಿಕ ಚಿಂತಕ ಎಮ್.ಎನ್.ತಳವಾರ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ ವೇದಿಕೆಯ ಮೇಲಿದ್ದರು.
ಸಿದ್ದೇಶ್ವರ ಸ್ವಾಮಿಗಳ ಆಧ್ಯಾತ್ಮಿಕ ಪ್ರವಚನ ಸೇವಾ ಸಮೀತಿಯ ಶ್ರೀಕಾಂತ ಹೂಲಿ ಸ್ವಾಗತ ಭಾಷಣ, ಟಿಸಿ ಮಲ್ಲಾಪುರಮಠ ಶ್ರೀಗಳ ಪರಿಚಯ, ಸ್ವಾಗತ ಮಾಡಿದರು ಹಾಗೂ ಶೀವದೇವ ದೇಸಾಯಿಸ್ವಾಮಿ ನಿರೂಪಿಸಿ-ವಂದಿಸಿದರು.

Siddeswara swami pravachana prog- inauguration

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: ānandāśramada rudrākṣibābā, chatrapati śivāji krīḍāṅgaṇa, Chhatrapati Shivaji Stadium, dhāravāḍa rāmakr̥ṣṇa āśramada vijayānanda svāmiji, haḷiyāḷadalli jñānayōgi siddēśvara svāmijigaḷa ādhyātmika kāryakrama, Keke haḷḷi nityānanda āśramada subrahmaṇya svāmi, KK Halli Subramanya Swami of Nityananda Ashram, manuṣyana koneyalli dharma, ondu tiṅgaḷa kāla naḍeyaliruva pravacana, One Month Discourse, Rudrakshabha of Anandasrama, sēve eraḍe, Shri Guru Ishwar Panditaradika Shivacharya, Spiritual Program of Knowledge Siddheshwara Swamiji in Hailala, śrī guru īśvara paṇḍitārādhya śivācārya, svāmījigaḷinda cālane, Swamiji Duration, Vijayananda Swamiji of Dharwad Ramakrishna Ashram, Vijayapura Jnana Yogashram, Vijayapūra jñāna yōgāśrama

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...