
ಶಿರಸಿ :- ನಿಧಿಗಾಗಿ ಸ್ವಂತ ಅಜ್ಜಿಯನ್ನೇ ಮೊಮ್ಮಗ ಕೊಲೆ ಮಾಡಿದ ದುರ್ಘಟನೆ ತಾಲೂಕಿನ ಬದನಗೋಡ ಗ್ರಾಮದಲ್ಲಿ ನಡೆದಿದೆ.
ಯಲ್ಲವ್ವ ಗೊಲ್ಲರ್ 75 ಮೊಮ್ಮಗನಿಂದ ಕೊಲೆಯಾದ ವೃದ್ದೆ ಅಜ್ಜಿ ಆಗಿದ್ದು ಮೊಮ್ಮಗ ರಮೇಶ್ ಗೊಲ್ಲರ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ನಿನ್ನ ರಾತ್ರಿ ವೇಳೆ ಮಲಗಿದ್ದ ತನ್ನ ಅಜ್ಜಿಯ ಕುತ್ತಿಗೆಯನ್ನು ಕಡಿದು ಘೋರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ.
ನಂತರ ಸಾರ್ವಜನಿಕರೇ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
*ಬಲಿ ಕೆಳಿತ್ತಂತೆ* :-
ಕನಸಲ್ಲಿ ಬಂದು ಹುಲಿಯಮ್ಮ ದೇವರು ಬಲಿ ಕೇಳಿತ್ತಂತೆ.
ರಮೇಶ್ ಗೊಲ್ಲರ್ ಗೆ ಈ ಹಿಂದೆ ರಾತ್ರಿ ಮಲಗಿದ್ದಾಗ ಹುಲಿಯಮ್ಮ ದೇವರು ಈತನ ಕನಸಿನಲ್ಲಿ ಬಂದು ನಿನಗೆ ನಿಧಿ ಸಿಗುತ್ತದೆ ಅದಕ್ಕಾಗಿ ನೀನು ಐದು ನರಬಲಿ ಕೊಡಬೇಕು ಎಂದು ಹೇಳಿತ್ತಂತೆ ಹೀಗಾಗಿ ನಿಧಿಯ ಆಸೆಗೆ
ಈಹಿಂದೆ ಮಳಗಿ ಡ್ಯಾಮ್ ಬಳಿ ಬಾಲಕನೋರ್ವವನನ್ನು ಕೊಲೆ ಮಾಡಿದ್ದ ಆರೋಪಿ ಮುಂಡಗೋಡಿನಲ್ಲಿ ಬಂಧಿತನಾಗಿದ್ದಾನೆ.
ಈ ವೇಳೆ ಪೊಲೀಸರ ಚಡಿ ಏಟಿಗೆ ತಾನು ಕೊಲೆ ಮಾಡಿರುವ ವೃತ್ತಾಂತವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾನೆ ಆರೋಪಿ.
ನಂತರ ಬೇಲ್ ಮೂಲಕ ಇತ್ತೀಚೆಗೆ ಹೊರ ಬಂದಿದ್ದ ಆರೋಪಿ ನಾಲ್ಕು ಜನರನ್ನು ಬಲಿ ನೀಡಲು ಊರಿನಲ್ಲಿಯೇ ಕತ್ತಿ ಹಿಡಿದು ತಿರುಗುತಿದ್ದ ,ಆದರೇ ಎರಡನೇ ಬಲಿಯಾಗಿ ತನ್ನ ಅಜ್ಜಿಯನ್ನೇ ಈ ಕಿರಾತಕ ಮೊಮ್ಮಗ ಕುತ್ತಿಗೆ ಕಡಿದು ಬಲಿ ನೀಡಿದ್ದಾನೆ.
ಘಟನೆ ಸಂಬಂಧ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತಿದ್ದಾರೆ.
Leave a Comment