• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶಿವಾಜಿ ಮಹಾರಾಜರು ಇನ್ನೂ 10 ವರ್ಷ ಕಾಲ ಬದುಕಿದ್ದರೇ‌ ಬ್ರಿಟಿಷರು ದೇಶಕ್ಕೆ ಕಾಲಿಡುತ್ತಿರಲಿಲ್ಲ– ಎಸ್.ಎಲ್.ಘೊಟ್ನೇಕರ

February 21, 2019 by Yogaraj SK Leave a Comment

GOVT shivaji jayanti

ಹಳಿಯಾಳ:- ಜಾತಿ-ಮತ-ಪಂಥ ಎನ್ನದೇ ಎಲ್ಲಾ ಸಮುದಾಯದ ಜನರನ್ನು ಒಟ್ಟೂಗೂಡಿಸಿಕೊಂಡು ಬಲಾಢ್ಯ ಸೈನ್ಯವನ್ನು ಕಟ್ಟುವುದರ ಮೂಲಕ ಇಡೀ ವಿಶ್ವಕ್ಕೆ ಮಾದರಿ ನಾಯಕನಾಗಿದ್ದ, ಛತ್ರಪತಿ ಶಿವಾಜಿ ಮಹಾರಾಜರು ಇನ್ನೂ 10 ವರ್ಷಗಳ ಕಾಲ ಬದುಕಿದ್ದರೇ ಬ್ರಿಟಿಷರು ಭಾರತ ದೇಶಕ್ಕೆ ಕಾಲಿಡುವ ದುಸ್ಸಾಹಸವನ್ನೇ ಮಾಡುತ್ತಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಅಭಿಪ್ರಾಯಪಟ್ಟರು.
ತಾಲೂಕಾ ಆಡಳಿತ, ತಾಲೂಕಾ ಪಂಚಾಯತ್, ಪುರಸಭೆ ಮತ್ತು ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಘೊಟ್ನೇಕರ ಛತ್ರಪತಿ ಶಿವಾಜಿ ಮಹಾರಾಜರು ಯಾವುದೇ ಒಂದು ಧರ್ಮ-ಜಾತಿಗೆ ಸೀಮಿತರಲ್ಲ ಅವರು ವಿಶ್ವಮಾನವರು ಎಂದರು. ಅಲ್ಲದೇ ಜಗತ್ತಿನಲ್ಲೇ ಅತೀ ಹೆಚ್ಚು ಶಿವಾಜಿ ಪುತ್ಥಳಿಗಳನ್ನು ಕಾಣಬಹುದಾಗಿದ್ದು ಅವರ ಶೂರತನ ಹಾಗೂ ಆದರ್ಶ ನಾಯಕತ್ವಕ್ಕೆ ಸಾಕ್ಷಿ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಮಾಯಪ್ಪಾ ಪಾಟೀಲ್ ಮಾತನಾಡಿ ನೈತಿಕತೆಗೆ ಹೆಸರೇ ಶೀವಾಜಿ ಮಹಾರಾಜರು, ಜಗತ್ತಿಗೆ ಆದರ್ಶ ಪುರುಷರಾಗಿದ್ದು ಮಾನವತಾ ಧರ್ಮದ ಪ್ರತೀಕ ಶಿವಾಜಿ ಎಂದು ಅವರ ಜೀವನ ಚರಿತ್ರೆಯ ರೋಚಕ ಕ್ಷಣಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಶಿಕ್ಷಕ ನಿಂಗಪ್ಪಾ ದೊಡ್ಡಮನಿ, ಐಟಿ ಉದ್ಯಮಿ ನಾರಾಯಣ ಟೋಸೂರು, ಮಿಸ್ ಕರ್ನಾಟಕ ಪ್ರೀತಿ ಚೋರ್ಲೆಕರ, ಜಾನಪದ ಕಲಾವಿದೆ ಶಕುಂತಲಾ ಜಾಧವ, ರಂಗಭೂಮಿ ಕಲಾವಿದ ಅರುಣ ಗೊಂಧಳಿ ಮತ್ತು ಕೃಷಿಕ ನೀಲಕಂಠ ಬಿರ್ಜೆ, ಶಾಂತಾರಾಮ ಸಾಂಬ್ರೇಕರ ಅವರನ್ನು ಸನ್ಮಾನಿಸಲಾಯಿತು.
ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ತಹಶೀಲದಾರ ವಿದ್ಯಾಧರ ಗುಳಗುಳಿ, ತಾಪಂ ಅಧಿಕಾರಿ ಡಾ. ಮಹೇಶ್ ಕುರಿಯವರ, ಜಿಪಂ ಸದಸ್ಯರಾದ ಕೃಷ್ಣಾ ಪಾಟೀಲ್, ಮಹೇಶ್ರಿ ಮಿಶ್ಯಾಳಿ, ಲಕ್ಷ್ಮೀ ಕೋರ್ವೆಕರ,ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೆಕರ ಮತ್ತು ಸಿಪಿಐ ಬಿ.ಎಸ್.ಲೋಕಾಪೂರ, ಸುರೇಂದ್ರ ಬಿರ್ಜೆ ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Canara News Tagged With: 10 varṣa kāla badukiddarē‌ briṭiṣaru dēśakke kāliḍuttiralilla, agriculturist Neelakanta Birje, Arun Gondali, Aruṇa gondhaḷi, balāḍhya sain'ya, briṭiṣaru bhārata dēśakke kāliḍuva dus'sāhasa, did not enter the country, es.El.Ghoṭnēkara, jāti-mata-pantha ennadē, kr̥ṣika nīlakaṇṭha birje, śāntārāma sāmbrēkara, Shantaram Sambhakara, śivāji mahārājaru, SL Gothenka, the British were not entering the country of India, the caste-religion, the Shivaji Maharaj, the superior army, who had lived for 10 years

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...