ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 100ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ
ಹೊತ್ತಿಕೊಂಡಿದ್ದು ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿ ಹರಡಿದ್ದು ನೂರಾರು ಕಾರುಗಳು ಬೆಂಕಿಯ ರೌದ್ರ ನರ್ತನಕ್ಕೆ ಸುಟ್ಟು ಬುದಿಯಾಗುತ್ತಿದ್ದು – ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.
ಬೆಂಕಿ ದುರ್ಘಟನೆಯ ಪರಿಣಾಮ ದಟ್ಟ ಹೊಗೆ ಆವರಿಸಿದ್ದರಿಂದ ಏರ್ ಶೋ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಪಾರ್ಕಿಂಗ್ ಗೇಟ್ ನಂಬರ್ 5ರಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ.
ಹೆಚ್ಚಾಗಿದೆ ಎನ್ನಲಾಗಿದ್ದು ಬೆಂಕಿ ಹೊತ್ತಲು ಕಾರಣ ತನಿಖೆ ಯಿಂದ ಹೊರಬರಬೇಕಿದೆ.
ಘಟನಾ ಸ್ಥಳದಲ್ಲಿ ಬೀಗಿ ಪೋಲಿಸ್ ಬಂದೊಬಸ್ತ ಮಾಡಲಾಗಿದ್ದು ವಾಹನ ಮಾಲಕರು ಕಂಗಾಲಾಗಿದ್ದಾರೆ.

Leave a Comment