• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆದ ಪಕ್ಷಿ ವೀಕ್ಷಣೆ ಕಾರ್ಯಾಗಾರ- ವಿದ್ಯಾರ್ಥಿಗಳಿಂದ ಪಕ್ಷಿ ವೀಕ್ಷಣೆ

February 25, 2019 by Yogaraj SK Leave a Comment

 pakshi vikshane karyagara

ಹಳಿಯಾಳ :- ಇಂದಿನ ಆಧುನಿಕ ಯುಗದಲ್ಲಿ ಪಕ್ಷಿಗಳ ಅಳಿವು ಮತ್ತು ಉಳಿವು ಮಾನವನ ಹವ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಮಾನವನು ಪಕ್ಷಿಗಳ ಉಳಿವಿಗಾಗಿ ಶ್ರಮಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಕರೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ, ದಿ.ಅರ್ಬನ್ ಯುಥ್ ಕ್ಲಬ್, ಅರಣ್ಯ ಇಲಾಖೆ ಮತ್ತು ಕೈಗಾ ಬರ್ಡರ್ಸ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಪಟ್ಟಣದಲ್ಲಿ ನಡೆದ “ನಮ್ಮ ಊರು ನಮ್ಮ ಖಗಸಂಕುಲ” ಪಕ್ಷೀ ವಿಕ್ಷಣೆ ಮತ್ತು ಗಣತಿ ಕಾರ್ಯಾಗಾರದ ಸಭಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಪಕ್ಷಿ ವೀಕ್ಷಣೆಯ ಹವ್ಯಾಸವು ಅತ್ಯಂತ ಉತ್ತಮ ಹವ್ಯಾಸವಾಗಿದ್ದು ಮುಂದಿನ ಯುವ ಜನಾಂಗದಲ್ಲಿ ಇದನ್ನು ಉಳಿಸಿಕೊಂಡು ಹೊಗಬೇಕಾಗಿದೆ ಎಂದರು.
ಹಳಿಯಾಳ ಅರಣ್ಯ ಇಲಾಖೆಯ ಡಿಎಫ್‍ಒ ಡಿ.ಯತೀಶಕುಮಾರ ಮಾತನಾಡಿ, ಪಕ್ಷಿಗಳ ಗಣತಿ ಪ್ರತಿವರ್ಷ ಮಾಡಬೇಕಾಗಿದೆ. ಅದಕ್ಕೆ ಪಕ್ಷಿ ತಜ್ಞರ ಅವಶ್ಯಕತೆಯಿದ್ದು ಕೆಲವು ಪಕ್ಷಿಗಳು ವಿನಾಶದ ಅಂಚಿಗೆ ತಲುಪಿದ್ದು ಮುಂದಿನ ದಿನಗಳಲ್ಲಿ ಅವುಗಳನ್ನು ಇಂತಹ ಕಾರ್ಯಾಗಾರ ಮತ್ತು ಗಣತಿ ಕಾರ್ಯಗಳ ಮೂಲಕ ಗುರುತಿಸಿ ರಕ್ಷಣೆ ನೀಡಬೇಕಾಗಿದ್ದು ಅರಣ್ಯ ಇಲಾಖೆಯೊಂದಿಗೆ ಕರವೇ ಯಂತಹ ಸಂಘಟನೆಗಳು ಕೈ ಜೋಡಿಸಬೇಕಾಗಿದೆ ಎಂದರು.

 pakshi vikshane karyagara
ಪಕ್ಷಿ ವೀಕ್ಷಣೆ :- ಪಕ್ಷಿ ವೀಕ್ಷಣೆಗಾಗಿ 4 ತಂಡಗಳನ್ನು ರಚಿಸಿ ಅಳ್ನಾವರ ರಸ್ತೆಯ ಹೊರಗಿನಗುತ್ತಿಗೇರಿ ಕೇರೆ, ಸಕ್ಕರೆ ಕಾರ್ಖಾನೆ ಬಳಿಯ ಹುಲ್ಲಟ್ಟಿ ಕೆರೆ ಪ್ರದೇಶ, ಗುಡ್ನಾಪೂರ ಕೆರೆಯ ಅಲ್ಲೋಳ್ಳಿ ಪ್ರದೇಶ ಮತ್ತು ತುಳಜಾಭವಾನಿ ದೇವಸ್ಥಾನದ ದೇವಿಕೇರೆ ಹಾಗೂ ಐತಿಹಾಸಿಕ ಕೋಟೆ ಕೆರೆ, ಶಿವಾಜಿ ಕ್ರೀಡಾಂಗಣ, ಮರಡಿಗುಡ್ಡ ಉದ್ಯಾನವನ, ಕಿಲ್ಲಾ ಗಾರ್ಡನ್ ಪ್ರದೇಶಗಳು ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಪಕ್ಷಿಗಳ ವೀಕ್ಷಣೆ ಮತ್ತು ಗಣತಿ ಕಾರ್ಯ ನಡೆಯಿತು.

pakshi vikshane karyagara
127 ಪ್ರಭೇಧಗಳ ವೀಕ್ಷಣೆ :– ಸುಮಾರು 55ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಕಾರ್ಯಾಗಾರದಲ್ಲಿ ಕೈಗಾದಿಂದ ಆಗಮಿಸಿದ್ದ ಪಕ್ಷಿ ತಜ್ಞರಾದ ಮಹಾಂತೇಶ ಓಶೀಮಠ, ಜಿ.ಮೋಹನದಾಸ್ ನೇತೃತ್ವದ ತಂಡವು ವಿದ್ಯಾರ್ಥಿಗಳಿಗೆ ಪಕ್ಷಿಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಪಕ್ಷಿ ಸಂಕುಲಗಳ ಜೀವನ, ಆಹಾರ ಪದ್ದತಿ ವಿವರಣೆ ನೀಡಿ ಪಕ್ಷಿ ವೀಕ್ಷಣೆಯ ವಿಧಾನ ಮತ್ತು ತಂತ್ರಗಳನ್ನು ವಿವರಿಸಿದರು. ಎಲೋ ಬಿಲ್ಡ್ ಬ್ಯಾಬಲರ್, ಎಲೋ ಕ್ರೌನ್‍ಡ್ ವುಡ್ ಪ್ಯಾಕರ್, ಹಾರ್ನಬಿಲ್. ಓರಿಯಂಟಾಲ್ ಟರಟಲ್ ಡೌವ್, ಚಿಕ್ಕ ಸಿಪಾಯಿ ಕೊಕ್ಕರೆ, ಬಿಳಿ ಸಿಫೀಲೆ ಸೇರಿದಂತೆ 127ಕ್ಕೂ ಅಧಿಕ ಪಕ್ಷಿ ಪ್ರಬೇಧಗಳ ವೀಕ್ಷಣೆ ನಡೆಯಿತು.

watermarked 2 2

ಪ್ರತಿಜ್ಞೆ :- ಇದೇ ಸಂದರ್ಭದಲ್ಲಿ ಪಕ್ಷಿ ವೀಕ್ಷಣೆ ಮಾಡಿ ಗಣತಿ ಮಾಡಿದ ವಿದ್ಯಾರ್ಥಿಗಳಿಗೆ ಕರವೇಯಿಂದ ಪ್ರಮಾಣ ಪತ್ರಗಳನ್ನು ವಿತರಿಸುವುದರ ಜೊತೆಗೆ ಪರಿಸರಕ್ಕೆ ಸಂಬಂಧಿಸಿದಂತೆ ಪರಿಸರದ ಶುಚಿತ್ವವನ್ನು ಕಾಪಾಡುತ್ತೇವೆ.ಪಶು ಪಕ್ಷಿಗಳಿಂದ ಸಹನಶೀಲತೆಯಿಂದ ವ್ಯವಹರಿಸುತ್ತೇವೆ, ಜೀವ ಸಂಕುಲಗಳ ಜೀವಿಸುವ ಹಕ್ಕನ್ನು ಸಮರ್ಥಿಸುತ್ತೇವೆ ಎಂದು ಪ್ರತಿಜ್ಞೆ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಿಧ್ಯಾಧರ ಗುಳಗುಳಿ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡೀಗೇರಿಮಠ, ಮಹೇಶ ಆನೇಗುಂದಿ, ಸುಧಾಕರ ಕುಂಬಾರ, ಶ್ರೀಶೈಲ್ ಮಠದೇವರು, ವಿನೋದ ದೊಡ್ಡಮನಿ, ಚಂದ್ರಕಾಂತ ದುರ್ವೆ, ಸುರೇಂದ್ರ ಬಿರ್ಜೆ, ಕಿರಣ, ಚಂದ್ರಕಾಂತ ಅರಶಿಣಗೇರಿ, ಶರತಕುಮಾರ ಆನೇಗುಂದಿ ಇದ್ದರು.

watermarked 25 hly 2 1 watermarked 3

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: 127 prabhēdhagaḷa vīkṣaṇe, 127 species of bird watchers, 127 species of bird watching, 127 ಪ್ರಭೇಧಗಳ ವೀಕ್ಷಣೆ, 127kkū adhika pakṣi prabēdhagaḷa vīkṣaṇe, 127ಕ್ಕೂ ಅಧಿಕ ಪಕ್ಷಿ ಪ್ರಬೇಧಗಳ ವೀಕ್ಷಣೆ, aitihāsika kōṭe kere, araṇya ilākhe, biḷi siphīle sēridante, bird, bird watching from the students, Birding and Census The Raksha, cikka sipāyi kokkare, di.Arban yuth klab, Elō bilḍ byābalar, Elo Build Babler, Elo Crowd Wood Packer, elō kraun‍ḍ vuḍ pyākar, goddess of tuljabawani temple, Gudnapur lake onion area, guḍnāpūra kereya allōḷḷi pradēśa, haḷiyāḷadalli yaśasviyāgi naḍeda, hārnabil. Ōriyaṇṭāl ṭaraṭal ḍauv, historic fort lake, Hornbill. 127 species of bird species, huddle lake area, hullaṭṭi kere pradēśa, kaigā barḍars sansthegaḷa jaṇṭi āśraya, karnāṭaka rakṣaṇā vēdike, killā gārḍan pradēśa, killa garden area, mānavana havyāsa, maraḍiguḍḍa udyānavana, marshy garden, nam'ma ūru nam'ma khagasaṅkula, Need For Bird Experts, oriental tarval downtown, Our Place Our Climate, pakṣi tajñara avaśyakate, pakṣi vīkṣaṇe, pakṣī vīkṣaṇe kāryāgāra, pakṣī vikṣaṇe mattu gaṇati kāryāgāra, Shivaji stadium, śivāji krīḍāṅgaṇa, small sepoy stork, the bird watching workshop, the extinction of the birds in the era, the Forest Department, the human hobby, the joint shelter of the Kaiga borders, the Karnataka Defense Forum, the survival of the bird, the Urban Youth Club, tuḷajābhavāni dēvasthānada dēvikēre, uḷivu, vidyārthigaḷinda pakṣi vīkṣaṇe, white caffeine Viewing, yugadalli pakṣigaḷa aḷivu, ಅರಣ್ಯ ಇಲಾಖೆ, ಉಳಿವು, ಎಲೋ ಕ್ರೌನ್‍ಡ್ ವುಡ್ ಪ್ಯಾಕರ್, ಎಲೋ ಬಿಲ್ಡ್ ಬ್ಯಾಬಲರ್, ಐತಿಹಾಸಿಕ ಕೋಟೆ ಕೆರೆ, ಕರ್ನಾಟಕ ರಕ್ಷಣಾ ವೇದಿಕೆ, ಕಿಲ್ಲಾ ಗಾರ್ಡನ್ ಪ್ರದೇಶ, ಕೈಗಾ ಬರ್ಡರ್ಸ್ ಸಂಸ್ಥೆಗಳ ಜಂಟಿ ಆಶ್ರಯ, ಗುಡ್ನಾಪೂರ ಕೆರೆಯ ಅಲ್ಲೋಳ್ಳಿ ಪ್ರದೇಶ, ಚಿಕ್ಕ ಸಿಪಾಯಿ ಕೊಕ್ಕರೆ, ತುಳಜಾಭವಾನಿ ದೇವಸ್ಥಾನದ ದೇವಿಕೇರೆ, ದಿ.ಅರ್ಬನ್ ಯುಥ್ ಕ್ಲಬ್, ನಮ್ಮ ಊರು ನಮ್ಮ ಖಗಸಂಕುಲ, ಪಕ್ಷಿ ತಜ್ಞರ ಅವಶ್ಯಕತೆ, ಪಕ್ಷಿ ವೀಕ್ಷಣೆ, ಪಕ್ಷಿ ವೀಕ್ಷಣೆ ಕಾರ್ಯಾಗಾರ, ಪಕ್ಷೀ ವಿಕ್ಷಣೆ ಮತ್ತು ಗಣತಿ ಕಾರ್ಯಾಗಾರ, ಬಿಳಿ ಸಿಫೀಲೆ ಸೇರಿದಂತೆ, ಮರಡಿಗುಡ್ಡ ಉದ್ಯಾನವನ, ಮಾನವನ ಹವ್ಯಾಸ, ಯುಗದಲ್ಲಿ ಪಕ್ಷಿಗಳ ಅಳಿವು, ವಿದ್ಯಾರ್ಥಿಗಳಿಂದ ಪಕ್ಷಿ ವೀಕ್ಷಣೆ, ಶಿವಾಜಿ ಕ್ರೀಡಾಂಗಣ, ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆದ, ಹಾರ್ನಬಿಲ್. ಓರಿಯಂಟಾಲ್ ಟರಟಲ್ ಡೌವ್, ಹುಲ್ಲಟ್ಟಿ ಕೆರೆ ಪ್ರದೇಶ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...