ದಿ ದೇವರಾಜ ಅರಸು ಜನ್ನಶನಾಮನೋತ್ಸವ ಆಚರಣಿ ಸಂಧರ್ಭದಲ್ಲಿ ಅವರು ಜಾರಿಗೆ ತಂದ ಗೇಣಿದಾರರ ಸಾಗುವಳಿ ಪದ್ದತಿಯ ಪಹಣಿಯನ್ನು ಸರಿಪಡಿಸುವಂತೆ ಆಗ್ರಹಿಸಿ ದೇವರಾಜ ವಿಕಾಸ ವೇದಿಕೆ ಹೊನ್ನಾವರ ಇವರ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಮಾಜಿ ಮುಖ್ಯಮಂತಿ ದಿವಗಂತ ದೆವರಾಜ ಅರಸು ರಾಜ್ಯ ಕಂಡ ಅತ್ಯತ್ತಮ ಮುಖ್ಯಮಂತ್ರಿಯಲ್ಲಿ ಒರ್ವರು. ಆ ಕಾರಣದಿಂದ ಅವರ ಜನ್ಮದಿನವನ್ನು ಸರ್ಕಾರ ಪ್ರತಿವರ್ಷ ಆಚರಿಸುತ್ತಾ ಬಂದಿದೆ. ಅವರ ಜನ್ಮಶತಮಾನೋತ್ಸವದ ವರ್ಷಂಪ್ರತಿಯಂತೆ ಆಚರಿಸಬೇಕೆಂದು ಸರ್ಕಾರ ನಿರ್ಧಾರಮಾಡಿದೆ. ಆದರೆ ಇತ್ತಿಚಿಗೆ ಆಳ್ವಿಕೆ ಮಾಡಿದ ರಾಜ್ಯದ ಎಲ್ಲಾ ಪಕ್ಷದ ಸರ್ಕಾರಗಳು ವಿಫಲವಾಗಿರುದು ವಿಷಾಧನಿಯ. ಅವರು ತಂದ ಮಹತ್ವಾಕಾಂಕ್ಷಿ ಯೋಜನೆಯಾದ ಸಾಗುವಳಿದಾರರ ಗೇಣಿ ಪಹಣಿಯಲ್ಲಿ ಕರ್ನಾಟಕ ಸರ್ಕಾರ ಎಂದು ನಮೋದಾಗಿರದನ್ನು ಇದುವರೆಗೂ ಸರಿಪಡಿಸಲು ಆಗದೆ ಇರುವುದು ಇವರ ಕಾಳಜಿಯನ್ನು ತೋರಿಸುತ್ತದೆ. ಇದನ್ನು ಕೂಡಲೇ ಸರಿಪಡಿಸಿ ಬಡವರಿಗೆ ಗೇಣಿ ಹೊಂದಿರುವ ರೈತರಿಗೆ ನ್ಯಾಯ ಒದಗಿಸಬೇಕಿದೆ. ಭಾ ಸುಧಾರಣಾ ಕಾಯ್ದೆಯನ್ನು ಸರಿಪಡಿಸಿ ಪಟ್ಟಾ ನೀಡುದಲ್ಲದೆ ಆಡಳಿತ ವ್ಯವಸ್ಥೆಯ ಇಚ್ಚಾಶಕ್ತಿಯ ಕೊರತೆಯಿಂದ ತಾಂತ್ರೀಕ ದೋಷದ ಸಮಸ್ಯೆ ಸಮಸ್ಯೆಯಾಗಿಯೇ ಕಾಡುತ್ತಿದೆ. ಬಹುಮಾಲೀಕತ್ವ ಹೊಂದಿದ ಪಹಣಿಯಲ್ಲಿ ಗೇಣಿದಾರರಿಗೆ ಸಾಗುವಳಿದಾರರಿಗೆ ತಮ್ಮ ಹೆಸರು ಡಿಲಿಟ್ ಆಗಿದ್ದು ಇದನ್ನು ಸರಿಪಡಿಸುವ ಕೆಲಸ ಮಾಡುವುದಿಲ್ಲ. ಅರ್ಜಿ ನಮೂನೆ 7 ಮತ್ತೊಮ್ಮೆಅರ್ಜಿ ತುಂಬಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಹೊನ್ನಾವರ ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿ ತಹಶೀಲ್ದಾರ ವಿ.ಆರ್.ಗೌಡ ಮಾತನಾಡಿ ನಿಮ್ಮ ಬೇಡಿಕೆ ಸಮಂಜಶವಾಗಿದ್ದು ಈಗಾಗಲೇ ಸಹಾಯಕ ಆಯುಕ್ತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸುತ್ತೇವೆ. ಈಗಾಗಲೇ 200ಂಕ್ಕಿಂತ ಅರ್ಜಿ ತಡೆಹಿಡಿಯಲಾಗಿದ್ದು ಸಹಾಯಕ ಆಯುಕ್ತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇವೆ. ಸರ್ಕಾರ ಹಂತದ ವಿವಿಧ ಬೇಡಿಕೆ ಇರುದರಿಂದ ಅದನ್ನು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದರು.
ದೇವರಾಜ ಅರಸು ವೇದಿಕೆಯ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಮಾತನಾಡಿ ಸರ್ಕಾರಗಳ ಜನಪ್ರತಿನಿಧಿಗಳ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ ಈ ಸಮಸ್ಯೆ ಇನ್ನೂ ಜೀವಂತವಾಗಿದೆ. ಮುಂದಿನ ದಿನದಲ್ಲಿ ಅರಸುರವರ ಶತಮಾನೊತ್ಸವ ಒಳಗಾಗಿ ಅವರು ತಂದ ಯೋಜನೆಯ ಉಪಯೋಗ ರಾಜ್ಯದ ಜನತೆಗೆ ಆಗುವಂತೆ ನೋಡಿಕೊಳ್ಳವ ಜವಬ್ದಾರಿ ಸರ್ಕಾರದ ಮೇಲಿದೆ ಈ ಬಗ್ಗೆ ಕೂಡಲೇ ಗಮನಹರಿಸಿ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶಂಕರ ಗೌಡ ಗುಣಮಂತೆ, ಐ.ವಿ.ನಾಯ್ಕ ಮುಗ್ವಾ, ಜಿ.ಎಸ್.ನಾಯ್ಕ ಕುದ್ರಗಿ, ಎಂ.ಡಿ.ನಾಯ್ಕ ಆರೋಳ್ಳಿ, ಕೇಶವ ನಾಯ್ಕ ಮಾಗೋಡ, ವಿ.ಜಿ.ನಾಯ್ಕ ಹೊನ್ನಾವರ, ಎಂ.ಜಿನಾಯ್ಕ ನಗರೆ, ಗಜಾನನ ನಾಯ್ಕ ಉಪ್ಪೂಣಿ ಉಪಸ್ಥಿತರಿದ್ದರು.
Leave a Comment