• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ತಂದೆ ತಾಯಂದಿರು ತಮ್ಮ ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸಿಕೊಡಬೇಕು;ಗ್ರಾ.ಪಂ ಅಧ್ಯಕ್ಷ ಮಾಬ್ಲ ನಾಯ್ಕ

February 28, 2019 by Vishwanath Shetty Leave a Comment

watermarked 28 hnr 1 a

ಹೊನ್ನಾವರ: ತಾಲೂಕಿನ ಖರ್ವಾ ಕೊಳಗದ್ದೆಯಲ್ಲಿ ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆ ಖರ್ವಾ ಕೊಳಗದ್ದೆ ಇವರ ಆಶ್ರಯದಲ್ಲಿ 16ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೆಳನ ಮತ್ತು ಸನ್ಮಾನ ಸಮಾರಂಭ ಕೊಳಗದ್ದೆಯ ಸಿದ್ದಿವಿನಾಯಕ ಪ್ರೌಢಶಾಲೆಯ ಆವಾರದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಖರ್ವಾ ಗ್ರಾ.ಪಂ ಅಧ್ಯಕ್ಷ ಮಾಬ್ಲ ನಾಯ್ಕ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ತಂದೆ ತಾಯಂದಿರು ತಮ್ಮ ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸಿಕೊಡಬೇಕು. ಅವರಲ್ಲಿರುವ ಪ್ರತಿಭೆ ಹೊರಬರಲು ಹೆಚ್ಚು ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು. ಕಳೆದ 16 ವರ್ಷಗಳಿಂದ ಯಶಸ್ವಿನಿ ಸಂಘ ಸಾಂಸ್ಕ್ರತಿಕ ಕಾರ್ಯಕ್ರಮಗಳ ಆಯೋಜಿಸಿ ಸಾಧಕರನ್ನು ಸನ್ಮಾನಿಸುತ್ತಿದೆ. ಸಂಘದ ಕಾರ್ಯಚಟುಚಟಿಕೆ ಇದೇ ರೀತಿ ಮುಂದುವರೆದು ಸಂಘದಲ್ಲಿ ಒಗ್ಗಟ್ಟು ಮೂಡಲಿ, ಯಶಸ್ವಿನಿ ಸಂಘ ಯಶಸ್ವಿಯಾಗಿ ಮುನ್ನುಗಲಿ ಎಂದು ಶುಭ ಹಾರೈಸಿದರು.
ಇದೇ ಸಂಧರ್ಬದಲ್ಲಿ ಊರಿನ ರೈತಾಪಿ ಹಿರಿಯ ನಾಗರಿಕ ಪಾಂಡುರಂಗ ಕೇಶವ ಮೇಸ್ತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ರಾಷ್ಟ್ರಮಟ್ಟದಲ್ಲಿ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸದ ಯೋಗಪಟು ಪ್ರಜ್ವಲ್ ಮಂಜುನಾಥ ನಾಯ್ಕ ಅವರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.
ಕೊಳಗದ್ದೆ ಸಿದ್ದಿವಿನಾಯಕ ಪ್ರೌಢಶಾಲೆಯ ದೈಹಿಕ ಶಿಕ್ಷಕ ಆರ.ಎಸ್ ನಾಯ್ಕ ಮಾತನಾಡಿ, ಎಲ್ಲಿಒಯವರೆಗೆ ಸದೃಡ ಸಮಾಜ ನಿರ್ಮಾಣವಾಗುವುದಿಲ್ಲವೋ ಅಲ್ಲಿಯವರೆಗೆ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗುವುದು ಕಷ್ಟಸಾಧ್ಯ. ಸಮಾಜ ಒಂದು ಶಕ್ತಿಯಾಗಿದೆ ಅಲ್ಲಿಂದ ಪ್ರತಿಭೆ ಎಂಬ ಹೂವುಗಳು ಅರಳುತ್ತದೆ. ಅಂದು ಬ್ರಿಟಿಷ್‍ರಿಂದಲು ಒಡೆಯಲಾಗದ ಸಮಾಜ ಮೊಬೈಲ್ ಎಂಬ ವೈರಸ್‍ನಿಂದ ಛಿದ್ರಛಿದ್ರವಾಗುತ್ತಿದೆ.ಅದರಲ್ಲು ಯುವ ಸಮೂಹ ಮೊಬೈಲ್ ದಾಸರಾಗುತ್ತಿದ್ದಾರೆ ತಂದೆತಾಯಂದಿರು ಅಸಹಾಯಕರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ ಅಧ್ಯಕ್ಷ ಟಿ.ಎಚ್ ಗೌಡ ಮಾತನಾಡಿ ಅಳಿಯುತ್ತಿರುವ ಪುರಾತನ ಸಂಸ್ಕ್ರತಿಯನ್ನು ಉಳಿಸಬೇಕು ಎನ್ನುವ ದ್ರಷ್ಟಿಯಿಂದ ನಮ್ಮ ಸಂಘ ಅಳಿಲು ಸೇವೆ ಸಲ್ಲಿಸುತ್ತಿದೆ. ಅದೇ ರಿತಿ ಉರನಾಗರಿಕರ ಸಹಕಾರವು ಹೆಚ್ಚಿದೆ ಇದೇ ರೀತಿ ಮುಂದಿನ ದಿನಗಳಲ್ಲು ಸಹಕರಿಸಿ ಎಂದು ಕೋರಿದರು.
ಮೋಹನ್ ನಾಯ್ಕ ಪ್ರಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಸುಬ್ರಹ್ಮಣ್ಯ ಹೆಗಡೆ ಹಡಿನಬಾಳ, ಸಿದ್ದಿವಿನಾಯಕ ದೇವಾಲಯದ ಮೋಕ್ತೆಸರರಾದ ಮುಕುಂದ ಶ್ಯಾನಭಾಗ, ಯಶಸ್ವಿನ ಸಾಂಸ್ಕ್ರತಿಕ ವೇದಿಕೆಯ ನಿರ್ದೇಶಕ ಗಜಾನನ ನಾಯ್ಕ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಯಶಸ್ವಿನ ಸಾಂಸ್ಕ್ರತಿಕ ವೇದಿಕೆ ಕಲಾವಿದರಿಂದ ಹಾಗೂ ಅತಿಥಿ ಕಲಾವಿದರಿಂದ “ಪಾಪಿ ತಂದೆಗೆ ಪಣ್ಯದ ಮಗಳು”ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಂಡು ಜನಮನಸೂರೆಗೊಂಡಿತು. ಡಿ.ಬಿ ಮೂರಾರಿ ಕಾರ್ಯಕ್ರಮ ನಿರೂಪಿಸಿದರು.ಅಶೋಕ್ ರಾಥೋಡ್ ವಂದಿಸಿದರು.

watermarked 28 hnr 1 b

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Canara News Tagged With: Dad, grā.Paṁ adhyakṣa mābla nāyka, Gram Pom President Mabla Naika, gurutisi avarige sūkta vēdike odagisikoḍabēku, Hashwani Cultural Platform, hiriya nāgarika pāṇḍuraṅga kēśava mēsta, Identify and Support Forum, Kharva, kharvā koḷagadde, Kharva Pond, koḷagadde, Mobail, MOBILE, Mothers, pond, Senior Citizen Panduranga Keshava Mesta, Talents in Their Children, tam'ma tam'ma makkaḷalliruva pratibhe, tande tāyandiru, vairas‍ninda chidrachidra, Virus, yaśasvini sānskratika vēdike, ಕೊಳಗದ್ದೆ, ಖರ್ವಾ, ಖರ್ವಾ ಕೊಳಗದ್ದೆ, ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸಿಕೊಡಬೇಕು, ಗ್ರಾ.ಪಂ ಅಧ್ಯಕ್ಷ ಮಾಬ್ಲ ನಾಯ್ಕ, ತಂದೆ ತಾಯಂದಿರು, ತಮ್ಮ ತಮ್ಮ ಮಕ್ಕಳಲ್ಲಿರುವ ಪ್ರತಿಭೆ, ಮೊಬೈಲ್, ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆ, ವೈರಸ್‍ನಿಂದ ಛಿದ್ರಛಿದ್ರ, ಹಿರಿಯ ನಾಗರಿಕ ಪಾಂಡುರಂಗ ಕೇಶವ ಮೇಸ್ತ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...