ಕಾರವಾರದ ಅಬಕಾರಿ ಮತ್ತು ಪೋಲಿಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಹುದುಗಿಸಿಟ್ಟ ಲಕ್ಷಾಂತರ ಮೌಲ್ಯದ ಗೋವಾ ಮದ್ಯ ವಶಕ್ಕೆ ಪಡೆದಿದ್ದಾರೆ. ಸರಿ ಸುಮಾರು
7 ಲಕ್ಷ 36 ಸಾವಿರ ಮೌಲ್ಯದ 2440 ಲೀಟರ್ ಅಕ್ರಮ ಮದ್ಯ ಈಗ ಅಬಕಾರಿ ಇಲಾಖೆಯಲ್ಲಿದೆ.ಕಾರವಾರದ ಅಮದಳ್ಳಿ ಗ್ರಾಮದಲ್ಲಿ ಅಮದಳ್ಳಿ ಹೆದ್ದಾರಿ ಪಕ್ಕದ ಮನೆಯೊಂದರ ಹಿಂಬದಿಯಲ್ಲಿ ದಾಸ್ತಾನು ಇರಿಸಿದ್ದ ಫಾಗ್ ಫೇನ್ನಿ, ಲೈಟ್ ಹಾರ್ಸ್ ವಿಸ್ಕಿ, ರಾಯಲ್ ಕ್ಲಾಸಿಕ್ ವಿಸ್ಕಿ ಹಾಗೂ ಮ್ಯಾಡ್ಗೋಲ್ ವಿಸ್ಕಿ ಗೋವಾ ಮದ್ಯ ಇರುವ ಮಾಹಿತಿ ಮೇರೆಗೆ ರಾಜ್ಯ ವಿಚಕ್ಷಣ ದಳದ ಜಂಟಿ ಆಯುಕ್ತರ ನಿರ್ದೇಶನದ ಸೂಚನೆಯಂತೆ ತಡರಾತ್ರಿ ದಾಳಿ ನಡಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಈ ಲಿಕ್ಕರ್ ಹಂಚಲು ಪ್ಲ್ಯಾನ್ ಮಾಡಿಕೊಂಡು ಇಷ್ಟೊಂದು ಮದ್ಯ ಸಂಗ್ರಹಿಸಿ ಇಡಲಾಗಿತ್ತು ಎಂದು ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಭಂದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅಬಕಾರಿ ಉಪಾಯುಕ್ತ ಮಂಜುನಾಥ, ಡಿ ಎಸ್ ಪಿ ಮಾರಿಹಾಳ ನೆತೃತ್ವದಲ್ಲಿ ಕಾರ್ಯಾಚರಣೆ ನೆಡಿಸಿದ್ದಾರೆ.
Leave a Comment