ಹಳಿಯಾಳ :- ವಿಧಾನ ಪರಿಷತ್ ಮಾಜಿ ಸದಸ್ಯ ವಿ,ಡಿ, ಹೆಗಡೆ ಅವರನ್ನ ಕೇಂದ್ರ ಸಚಿವರ ಅನಂತಕುಮಾರ್ ಹೆಗಡೆ ಅವರು ಹಳಿಯಾಳದ ಅವರ ಮನೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಮಾಜಿ ಶಾಸಕ ಸುನಿಲ ಹೆಗಡೆ ಅವರ ತಂದೆಯಾಗಿರುವ ವಿಡಿ ಹೆಗಡೆ ಅವರು
ಕಳೆದ ಕೆಲ ದಿನಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಅವರು ಹಳಿಯಾಳದ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು.
ಶನಿವಾರ ಕೇಂದ್ರ ಸಚಿವರು ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನಿಲ್ ಹೆಗಡೆ, ಮಂಗೇಶ್ ದೇಶಪಾಂಡೆ , ಅನಿಲ ಮುತ್ನಾಳ್, ಶಿವಾಜಿ ನರಸಾನಿ, ಸಂತಾನ ಸಾವಂತ, ವಿಜಯ ಬೋಬಾಟಿ, ಅಪ್ಪು ಚರಂತಿಮಠ, ಉಲ್ಲಾಸ ಬಿಡಿಕರ ಹಾಗೂ ಇತರ ಮುಖಂಡರು ಇದ್ದರು.


Leave a Comment