• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಭಾವನೆಗಳನ್ನು ಕೆರಳಿಸುವುದೇ ಬಿ.ಜೆ.ಪಿ ಯ ಕೆಲಸವಾಗಿದೆ ;ಭೀಮಣ್ಣ ನಾಯ್ಕ

March 5, 2019 by Gaju Gokarna Leave a Comment

watermarked hnr 05 Training Camp Report.2

ಹೊನ್ನಾವರ : ರಾಷ್ಟ್ರೀಯತೆ ಮತ್ತು ಧರ್ಮಾಭಿಮಾನ ತಮ್ಮ ಪಕ್ಷದ ಸ್ವತ್ತಿನಂತೆ ಬಿ.ಜೆ.ಪಿ ವರ್ತಿಸುತ್ತಿದ್ದು ಸಮಾಜದಲ್ಲಿ ಭಾವನೆಗಳನ್ನು ಕೆರಳಿಸಿ ಮತವಾಗಿ ಪರಿವರ್ತಿಸಲು ದೊಡ್ಡ ಮಟ್ಟದ ಹುನ್ನಾರ ನಡೆಯುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಆರೋಪಿಸಿದರು.

ಅವರು ಕುಮಟಾದ ವೈಭವ ಹೊಟೇಲ್ ಸಭಾಭವನದಲ್ಲಿ ನಡೆದ ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧ್ಯಕ್ಷರು ಮತ್ತು ಏಜಂಟರುಗಳ ತರಬೇತಿ ಮತ್ತು ಸಿದ್ಧತಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೇಸ್ ಕೊಟ್ಟ ಕೊಡುಗೆ ಮತ್ತು ಕಾಂಗ್ರೇಸ್ ನಾಯಕರು ಹೋರಾಡಿದ ರೀತಿಯನ್ನು ಕಾರ್ಯಕರ್ತರಿಗೆ ಎಳೆಎಳೆಯಾಗಿ ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಶಂಭು ಶೆಟ್ಟಿ ಶಿಬಿರಾರ್ಥಿಗಳಿಗೆ ನಾಯಕನಾದವನ ಪ್ರಮುಖ ಕೌಶಲ್ಯಗಳ ಕುರಿತು ತರಬೇತಿ ನೀಡಿದರು. ಆಲೋಚನೆ, ಭಾವನೆ, ದೃಡಿಕರಿಸುವುದು, ಸಂವಹನ, ಪ್ರಭಾವ ಬೀರುವುದು, ತೀರ್ಮಾನ ಮಾಡುವುದು, ಸಮಸ್ಯೆ ಬಗೆಹರಿಸುವುದು ಮತ್ತು ಸಮಾಲೋಚಿಸುವುದು. ಈ ಪ್ರಮುಖ ವಿಷಯಗಳ ಕುರಿತು ಸವಿಸ್ತಾರವಾದ ಉಪನ್ಯಾಸ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಯಲ್ಲಾಪುರದ ದತ್ತಾತ್ರೇಯ ಗಾಂವಕರ ಮಾತನಾಡಿ ಮತಗಟ್ಟೆ ಕಾರ್ಯಕರ್ತರು ಒಬ್ಬರೇ ಯಾವುದೇ ನೀರ್ಣಯ ಕೈಗೊಳ್ಳದೇ ಸಮಿತಿಯ ಸದಸ್ಯರೆಲ್ಲಾ ಸೇರಿ ಯಾವ ರೀತಿಯ ನೀರ್ಣಯ ಕೈಗೊಳ್ಳಬೇಕೆಂಬ ಕುರಿತು ಬೂತ್ ಅಧ್ಯಕ್ಷರಿಗೆ ತರಬೇತಿ ನೀಡಿದರು.

ಕೆ.ಪಿ.ಸಿ.ಸಿ ಕಾರ್ಯದರ್ಶಿ ಅಬ್ಬಾಸ್ ತೋನ್ಸೆ ಮಾತನಾಡಿ ಕಾಂಗ್ರೇಸ್ ಪಕ್ಷದಲ್ಲಿ ನಾವೆಲ್ಲಾ ಯಾಕಾಗಿ ಕೆಲಸ ಮಾಡಬೇಕು ಅನ್ನುವುದರ ಕುರಿತು ವಿವರಿಸುತ್ತಾ ದೇಶದ ಸ್ವಾತಂತ್ರ್ಯ ಸಂಗ್ರಾನದಿಂದ ಇಂದಿನವರೆಗೂ ಎಲ್ಲಾ ಜಾತಿ, ಧರ್ಮದವರನ್ನು ಒಂದಾಗಿ ಕರೆದುಕೊಂಡು ಹೋಗುವ ಶಕ್ತಿ ಇದ್ದರೆ ಅದು ಕಾಂಗ್ರೇಸ್‍ಗೆ ಮಾತ್ರ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ವೀಶೇಷ ತರಬೇತಿಯೊಂದಿಗೆ ಆಗಮಿಸಿದ ಜಿಲ್ಲಾ ಪಂಚಾಯತ ಸದಸ್ಯ ರತ್ನಾಕರ ನಾಯ್ಕ, ಶಿರಶಿಯ ಜ್ಯೋತಿ ಪಾಟಿಲ್ ಮುಂಬರುವ ಚುನಾವಣೆಗೆ ಯಾವ ರೀತಿ ಸಿದ್ಧರಾಗಿರಬೇಕೆಂದು ವಿವರಿಸಿದರು.

ಕಾಂಗ್ರೇಸ್ ಪಕ್ಷದಲ್ಲಿ ನಡೆದ ಈ ವಿನೂತನ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಸಿದ್ಧತಾ ಶಿಬಿರದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ತಾರಾ ಗೌಡ , ಜಿಲ್ಲಾ ಸೇವಾದಳದ ಅಧ್ಯಕ್ಷ ಆರ್.ಎಚ್.ನಾಯ್ಕ, ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಯಾದ ಹೊನ್ನÀಪ್ಪ ನಾಯ್ಕ, ನಾಗೇಶ ನಾಯ್ಕ, ತಾಲೂಕಾ ಮಹಿಳಾ ಅಧ್ಯಕ್ಷೆ ಸುರೇಖಾ ವಾರೇಕರ, ಯುವ ಕಾಂಗ್ರೇಸ್ ಮುಖಂಡ ರವಿಕುಮಾರ ಶೆಟ್ಟಿ ಉಪಸ್ಥಿತರಿದ್ದರು.

ಹೊನ್ನಾವರ ಬ್ಲಾಕ್ ಕಾಂಗ್ರೇಸಿನ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಟಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿ.ಎಲ್ ನಾಯ್ಕ ವಂದಿಸಿದರು.

watermarked hnr 05 Training Camp Report.1

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: Agent training, bhāvanegaḷannu keraḷisuvudē, Bhimanna Naika, bhīmaṇṇa nāyka, bi.Je.Pi ya kelasavāgide, BJP activists, BJP behaves like party property, BJP's work, Congress General Secretary Shambhu Shetty Shivaratri, dharmābhimāna, ējaṇṭarugaḷa tarabēti, fanatics, kāṅgrēs pradhāna kāryadarśi śambhu śeṭṭi śibirārthi, kumaṭāda vaibhava hoṭēl sabhābhavana, Kumta's grand hotel conference, Matagaṭṭe kāryakartaru, nationalism, pakṣada svattinante bi.Je.Pi vartisuttiddu, raging emotions, rāṣṭrīyate, sid'dhatā śibira, Siddha camp, ಏಜಂಟರುಗಳ ತರಬೇತಿ, ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಶಂಭು ಶೆಟ್ಟಿ ಶಿಬಿರಾರ್ಥಿ, ಕುಮಟಾದ ವೈಭವ ಹೊಟೇಲ್ ಸಭಾಭವನ, ಧರ್ಮಾಭಿಮಾನ, ಪಕ್ಷದ ಸ್ವತ್ತಿನಂತೆ ಬಿ.ಜೆ.ಪಿ ವರ್ತಿಸುತ್ತಿದ್ದು, ಬಿ.ಜೆ.ಪಿ ಯ ಕೆಲಸವಾಗಿದೆ, ಭಾವನೆಗಳನ್ನು ಕೆರಳಿಸುವುದೇ, ಭೀಮಣ್ಣ ನಾಯ್ಕ, ಮತಗಟ್ಟೆ ಕಾರ್ಯಕರ್ತರು, ರಾಷ್ಟ್ರೀಯತೆ, ಸಿದ್ಧತಾ ಶಿಬಿರ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...