ವರದಿ:
M S Shobith Mudkani
ಹೊನ್ನಾವರ: ಮಹಾಶಿವರಾತ್ರಿಯನ್ನು ಸೋಮವಾರ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಅಂತೆಯೇ ಮೂಡ್ಕಣಿಯ ಶಂಭುಲಿಂಗೇಶ್ವರ ದೇವಸ್ಥಾನದಲ್ಲೂ ಶಿವರಾತ್ರಿ ವೈಭವ ಕಳೆಗಟ್ಟಿತ್ತು.
ಬೆಳಿಗ್ಗೆಯಿಂದ ಪೂಜೆ ಪುನಸ್ಕಾರಗಳು ಪ್ರಾರಂಭಗೊಂಡು ರಾತ್ರಿಯ ತನಕ ನಡೆಯಿತು. ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಧಾನ ಅರ್ಚಕ ನರಸಿಂಹ ಭಟ್ ಇವರ ಅಧ್ವೈರ್ಯದಲ್ಲಿ ನಡೆಯಿತು.
ಸಂಜೆ 6 ಗಂಟೆಯಿಂದ ಸತೀಶ್ ನಾಯ್ಕ ಮೂಡ್ಕಣಿ ಇವರ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಟಿ.ಟಿ. ನಾಯ್ಕ, ಶ್ರೀಧರ ನಾಯ್ಕ, ವೆಂಕಟ್ರಮಣ ನಾಯ್ಕ, ಎಂ.ಟಿ.ಹೆಗಡೆ, ಪಿ.ಟಿ. ನಾಯ್ಕ ಇತರರು ಉಪಸ್ಥಿತರಿದ್ದರು.

Leave a Comment