• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಜಾಥಾಕ್ಕೆ ಚಾಲನೆ, ಎಲ್ಲರೂ ಸಾಮಾನ್ಯ ಕಾನೂನು ಜ್ಞಾನ ಹೊಂದುವುದು ಅಗತ್ಯ – ನ್ಯಾಯಾಧೀಶೆ ಶಿಲ್ಪಾ ಎಚ್‌ಎ.

March 5, 2019 by Yogaraj SK Leave a Comment

watermarked 05HYL2EP

haliyal:-

ಕಾನೂನು ಜ್ಞಾನವಿಲ್ಲದ ವಿದ್ಯಾವಂತರೂ ಸಹ ಅನೇಕ ಬಾರಿ ಶೋಷಣೆಗೆ ಒಳಗಾಗುತ್ತಾರೆ ಶೋಷಣೆಯನ್ನು ತಡೆಯಬೇಕಾದರೆ ಜನಸಾಮಾನ್ಯರು ದೈನಂದಿನ ಕಾನೂನನ್ನು ಹೊಂದುವುದು ತೀರಾ ಅಗತ್ಯ ವೆಂದು ನ್ಯಾಯಾಧೀಶೆ ಶಿಲ್ಪಾ ಎಚ್ ಎ ಹೇಳಿದರು.  ಮಂಗಳವಾರದಂದು ಇಲ್ಲಿನ ತಹಶೀಲ್ದಾರ ಕಾರ್ಯಾಲದ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ, ಕಂದಾಯ ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರು ದೈನಂದಿನ ಕಾನೂನನ್ನು ಅರಿತು ಸಮಾಜದಲ್ಲಿ ಆಗುವ ಅಪರಾಧ ತಡೆಗಟ್ಟುವಲ್ಲಿ ಸಹಕರಿಸಿರಿ ಮಹಿಳೆಯರು ತಮ್ಮ ಹಕ್ಕುಗಳನ್ನು  ಕಾನೂನು ರಿತ್ಯ ಅರಿತು ಪಡೆಯಿರಿ. ವ್ಯಾಜ್ಯಗಳನ್ನು ದಾಖಲಿಸುವ ಮುನ್ನ ರಾಜಿಸಂದಾನದ ಮೂಲಕ ಪರಸ್ಪರವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಿರಿ ಎಂದು ಲೋಕ ಅದಾಲತ್ ಹಾಗೂ ಕಾನೂನು ಪ್ರಾಧಿಕಾರ ಸೇವಾದಿಂದ ಸಿಗುವ ಕಾನೂನು  ಸೌಲಭ್ಯದ ಕುರಿತು ವಿವರಿಸಿದರು.

ನ್ಯಾಯಧೀಶ ಬಸವರಾಜ ಸನದಿ ಮಾತನಾಡಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ತಾಲೂಕಿನಾದ್ಯಂತ ಮೂರು ದಿನಗಳ ಕಾಲ ಜಾಥಾ ಸಂಚರಿಸಲಿದೆ ಜಾಥಾದ ಸದುಪಯೋಗ ಪಡೆದುಕೊಳ್ಳಿ ಮತದಾನದ ಹಕ್ಕು ಸಹ ಪ್ರಾಮುಖ್ಯ, ದೇಶ ಮುನ್ನಡೆಸುವಲ್ಲಿ ಒಳ್ಳೆಯ ಅಭ್ಯರ್ಥಿಗಳಿಗೆ ನಿಮ್ಮ ಮತದಾನದ ಹಕ್ಕು ಚಲಾಸಿವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯ  ಎಂದು ವಿವಿಧ ಕಾನೂನುಗಳ ಕುರಿತು ವಿವರಿಸಿದರು.

ಸಹಾಯಕ ಸರಕಾರಿ ವಕೀಲ ಅಜಿತ್ ಜನಗೌಡಾ, ಪೊಲೀಸ್ ದೂರು, ವಕೀಲ ಸಂಗೀತಾ ಕಾಮ್ರೇಕರ ಜೀವನಾಂಶ ಮಹಿಳೆ ಆಸ್ತಿಯ ಹಕ್ಕು ಕುರಿತು ಉಪನ್ಯಾಸ ನೀಡಿದರು. ತಹಶೀಲ್ದಾರ ವಿದ್ಯಾಧರ ಗುಳಗುಳಿ, ಸಿಪಿಆಯ್ ಬಿ ಎಸ್ ಲೋಕಾಪುರ  ಉಪಸ್ಥಿತರಿದ್ದು ಮಾತನಾಡಿದರು. ವಕೀಲ ಸಂಘದ ಅಧ್ಯಕ್ಷ ಎ ಎಮ್ ಪಾಟೀಲ್, ತಾಲೂಕ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಡಾ. ಮಹೇಶ ಕುರಿಯರ. ವಕೀಲ ಎಮ್ ವಿ ಅಷ್ಟೇಕರ, ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು, ರಮೇಶ ಪಾಟೀಲ್ ನಿರೂಪಿಸಿದರು. ಕಾರ್ಯಕ್ರಮದ ಮುನ್ನ ಕಾನೂನು ಸೇವಾ ಪ್ರಾಧಿಕಾರದ ಸಾಕ್ಷರತಾ ಜಾಥಾಕ್ಕೆ ಹಿರಿಯ ನ್ಯಾಯಾಧೀಶೆ ಶಿಲ್ಪಾ ಎಚ್ ಎ ಚಾಲನೆ ನೀಡಿದರು, ನ್ಯಾಯಾಧೀಶ ಬಸವರಾಜ ಸನದಿ ಮತ್ತಿತರರ  ವಕೀಲ ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಮಾ. 6 ರಂದು ಬಿ.ಕೆ.ಹಳ್ಳಿ, ಬಾಣಸಗೇರಿ, ಲಯನ್ಸ ಸಂಸ್ಥೆ ಹಳಿಯಾಳ, ಮಾ.7 ರಂದು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ, ಹವಗಿ, ಶಿವಾಜಿ ಗಲ್ಲಿ ಹಳಿಯಾಳ, ಮಾ.8 ರಂದು ಚವ್ಹಾಣ ಪ್ಲಾಟ್ನ ಶ್ರೀ ಶಕ್ತಿ ಭವನ,  ನ್ಯಾಯಾಲಯದ ಆವರಣದಲ್ಲಿ ಕಾನೂನು ಸಾಕ್ಷರಥಾ ಜಾಥಾ ನಡೆಯಲಿದೆ.

watermarked 05HYL1EP

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: all legal law Need to have, and many times exploitation, anēka bāri śōṣaṇe, driving to the state law enforcement jatha, educational students without legal knowledge, ellarū sāmān'ya kānūnu jñāna honduvudu agatya, Judge Shilpa HA, kandāya, kānūnu jñānavillada vidyāvantarū, kānūnu sēvā samiti vakīlara saṅgha, law service committee lawyer's association, Lawyer Sangeeta Kamarekar's livelihood, n'yāyādhīśe śilpā ec‌e, polīs dūru, rājya kānūnu sēvā prādhikārada jāthākke cālane, revenue, saha, Sarakāri vakīla ajit janagauḍā, vakīla saṅgītā kāmrēkara jīvanānśa mahiḷe āstiya hakku kuritu, various departments, vividha ilākhe, Woman's property rights

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...