ಹಳಿಯಾಳ :- ಗುರುವಾರ ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ದೇವರ ಜಾತ್ರಾ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು. ಜಾತ್ರೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
ಪಟ್ಟಣದ ಬಸ್ ನಿಲ್ದಾಣ ಸಮೀಪದ ಜಿಲ್ಲಾ ಕುಸ್ತಿ ಅಖಾಡ ಪಕ್ಕದಲ್ಲಿರುವ ಶ್ರೀ ಮೈಲಾರಲಿಂಗ ದೇವರ ಜಾತ್ರಾ ಉತ್ಸವ ಗುರುವಾರ ಬೆಳಿಗ್ಗೆ 7 ಗಂಟೆಗೆ ಮೈಲಾರಲಿಂಗ ದೇವರಿಗೆ ಅಭಿಷೇಕದ ಬಳಿಕ 10 ಗಂಟೆಯಿಂದ ಪಲ್ಲಕ್ಕಿ ಉತ್ಸವ ಮೇರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ಕೊಣ್ಣೂರಿನ ಶ್ರೀ ಚಕ್ರ ಮಹಿಳಾ ಡೊಳ್ಳು ಕುಣಿತ ಸಂಘದಿಂದ ಡೊಳ್ಳು ಕುಣಿತ ಹಾಗೂ ಪುರುಷರ ಡೊಳ್ಳು ಕುಣಿತದೊಂದಿಗೆ ಭಕ್ತರಿಂದ ಬಾರಕೊಲಿಂದ ಹೊಡೆದುಕೊಳ್ಳುವ, ಭಂಡಾರ ಎರಚುವ ಭಕ್ತಿಯ ಪರಾಕಾಷ್ಟೇಗಳು ಕಂಡು ಬಂದವು.
ಒಂದು ದಿನ ಮಾತ್ರ ನಡೆಯುವ ಈ ಜಾತ್ರೆಯಲ್ಲಿ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಾಂತರ ಭಾಗದ ಸಾವಿರಾರು ಜನತೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.
Leave a Comment