ಹಾವು ಎಂಬ ಪದ ಕೇಳಿದರೆ, ಕನಸಿನಲ್ಲಿ ಬಂದರೆ ಬಯಬೀಳುತ್ತೇವೆ. ಸ್ವಲ್ಪ ದಿನ ಜ್ಚರ ಬಂದರೂ ಅತಿಶಯೋಕ್ತಿ ಎನಿಸುವುದಿಲ್ಲ. ಇನ್ನೂ ಹಾವು ನೇರವಾಗಿ ನಮ್ಮ ಮುಂದೆ ಬಂದರಂತೂ ಕತೆ ಮುಗಿದೇ ಹೋಯ್ತು. ಜೀವವನ್ನು ಕೈಯಲ್ಲಿ ಹಿಡಿದುಕೊಂಡು ದೇವ್ರೇ ದೇವ್ರೇ ಎಂದು ಎಷ್ಟು ಸಲಿ ಹೇಳುತ್ತೇವೋ ದೇವರೇ ಬಲ್ಲ.
ಆದರೆ *(ಗೋಕರ್ಣ)* ತದಡಿಯ ಸ್ನೇಕ್ ಅಶೋಕ ನಾಯ್ಕ ಈ ಮೇಲಿನ ಎಲ್ಲಾ ಮಾತುಗಳಿಗೆ ಅಪವಾದ. ಸತ್ತಮುತ್ತಲಿನ ಊರನವರೆಲ್ಲಾ ಅವರ ಹೆಸರನ್ನು ಕೇಳದವರು ವಿರಳವೇ ಎನ್ನಬೇಕು. ಗೋಕರ್ಣ, ಹನೇಹಳ್ಳಿ, ಬಂಕಿಕೊಡ್ಲ, ಗಂಗಾವಳಿ, ಮುಂತಾದ ಕಡೆ ಎಲ್ಲಿಯೇ ಹಾವು ಕಾಣಿಸಲಿ ತಕ್ಷಣಕ್ಕೆ ನೆನಪಿಗೆ ಬರುವುದು ಸ್ನೇಕ್ ಅಶೋಕ ನಾಯ್ಕ.
ಹಾವು ಹಿಡಿಯುವುದನ್ನು ಹವ್ಯಾಸ ಮಾಡಿಕೊಂಡಿರುವ ಇವರು ಶುಕ್ರವಾರ ಗುಂಡಬಾಳದಲ್ಲಿ ರಾತ್ರಿ 11 ಗಂಟೆಗೆ 12 1/2 ಉದ್ದದ ಕಾಳಿಂಗ ವಿಷ ಸರ್ಪವನ್ನು ತಮ್ಮ ಕೈಚಲಕದಿಂದು ಹಿಡಿಯುವ ಮೂಲಕ ವನ್ಯಜೀವಿಗಳಾಗಲಿ, ಉರಗಗಳೇ ಆಗಲಿ ಒಳ್ಳೇ ರೀತಿ ನಾವು ವರ್ತಿಸಿದರೆ ಅವು ಅಪಾಯಕಾರಿಯಲ್ಲ ಎಂದು ಸಾರಿದರು.


Leave a Comment