ಹಳಿಯಾಳ :- ಹಳಿಯಾಳದ ಮಿನಿ ವಿಧಾನಸೌಧದ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಮತದಾರರ ಜಾಗೃತಿಯ ಕುರಿತು ತಾಲೂಕಾಡಳಿತದಿಂದ ವಿಶಿಷ್ಠ ಕಾರ್ಯಕ್ರಮಗಳ ನಡೆದವು.
*ಗೊಂಬೆಯಾಟ- ಬೀದಿನಾಟಕ*
ತಾಲೂಕಿನ ಚಿಬ್ಬಲಗೇರಿ
ಸರಕಾರಿ ಪ್ರೌಢಶಾಲೆ ಯ ಮಕ್ಕಳು ಗೊಂಬೆಯಾಟ ಹಾಗೂ ಬೀದಿನಾಟಕ ಮೂಲಕ ಮತದಾರರ ಜಾಗೃತಿ ಕುರಿತಾದ ವಿಷಯವನ್ನು ಪ್ರಸ್ತುತ ಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

*ಸೈಕಲ್ ಜಾಥಾ* –
ಅಲ್ಲದೇ ಮತದಾರರ ಜಾಗೃತಿ ಜಾಥಾಕ್ಕೆ ಹಳಿಯಾಳದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೈಕಲ್ ಜಾಥದ ಮೂಲಕ ಪಟ್ಟಣದಲ್ಲಿ ಜಾಗ್ರತೆ ಮೂಡಿಸಿದರೇ ಶಾಲಾ ಮಕ್ಕಳು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಿದರು..

ಇದೆಲ್ಲದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಹಳಿಯಾಳ ತಾಲ್ಲೂಕಿನ ದಂಡಾಧಿಕಾರಿ ವಿದ್ಯಾಧರ ಗುಳಗುಳಿ, ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ ಡಾ. ಮಹೇಶ್ ಕುರಿಯವರ, ಕ್ಷೇತ್ರಶಿಕ್ಷಣಾಧಿಕಾರಿ ಸಮೀರ್ ಅಹ್ಮದ್ ಮುಲ್ಲಾ ಹಾಗೂ ಎಲ್ಲ ಅಧಿಕಾರಿ, ಸಿಬ್ಬಂದಿ ವರ್ಗದವರು, ಜಯ ಕರ್ನಾಟಕ ಸಂಘಟನೆ ವಿಲಾಸ ಕಣಗಲಿ, ಕರ್ನಾಟಕ ರಕ್ಷಣಾ ವೇದಿಕೆ ಬಸವರಾಜ ಬೆಂಡಿಗೇರಿಮಠ, ಜೀಜಾಮಾತಾ ಸಂಘಟನೆಯ ಮಂಗಲಾ ಕಶೀಲಕರ, ಹಲವು ಸಂಘ ಸಂಸ್ಥೆ, ಸಂಘಟನೆಯವರು ಹಾಗೂ ವಿವಿಧ ಶಾಲಾ ಮಕ್ಕಳು , ಶಿಕ್ಷಕರು, ಅಂಗನವಾಡಿ ಸಿಬ್ಬಂದಿಗಳು ಉಪಸ್ಥಿತರಿದ್ದರು.



Leave a Comment